ನಾಣ್ಯಾಪುರ:ಅಂಗನವಾಡಿ ಅಂಗಳದಲ್ಲಿಯೇ ಚರಂಡಿ ನೀರು…!!!

Listen to this article

ನಾಣ್ಯಾಪುರ:ಅಂಗನವಾಡಿ ಅಂಗಳದಲ್ಲಿಯೇ ಚರಂಡಿ ನೀರು

-ವಿಜಯನಗರ ಜಿಲ್ಲೆ ಹಗರಿಮೊಮ್ಮನಹಳ್ಳಿ ತಾಲೂಕು,ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಣ್ಯಾಪುರ ಗ್ರಾಮದ ಹಲೆವೆಡೆಗಳಲ್ಲಿ ಮನೆಯಂಗಳದಲ್ಲಿಯೇ ತಿಪ್ಪೆಗಳಿವೆ.ಶಾಲೆಯ ಸುತ್ತ ಮುತ್ತ ಕಸದ ರಾಶಿ ಹಾಗೂ ತ್ಯಾಜ್ಯ ನೀರು ನಿಂತು ಕೊಳೆತು ನಾರುತ್ತಿದೆ,ಮತ್ತು ತೆಗ್ಗು ಬಿದ್ದು ತಿಪ್ಪೆಗುಂಡಿಗಳಾಗಿ ಮಾರ್ಪಟ್ಟಿವೆ.

ಶಾಲೆಗೆ ತೆರಳುವ ವಿದ್ಯಾರ್ಥಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿ ಸೃಷ್ಟಿಯಾಗಿದೆ,ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿ ಅಧಿಕಾರಿ ಗಮನಕ್ಕೆ ತಂದಿದ್ದು ಪ್ರಯೋಜನವಾಗಿಲ್ಲ ಎಂದು ಕೆಲ ಗ್ರಾಮಸ್ಥರು ದೂರಿದ್ದಾರೆ.ಸರ್ಕಾರಿ ಶಾಲೆಯ ಸುತ್ತ ಮುತ್ತಲ ವಾತಾವರಣ ನೈರ್ಮಲ್ಯತೆಗೆ ಆಧ್ಯತೆ ನೀಡಬೇಕಿದೆ,ಅಂಗನವಾಡಿ ಶಾಲೆ ಸುತ್ತ ಮುತ್ತ ತ್ಯಾಜ್ಯ ನೀರು ಹಾಗೂ ಕಸ ಕೊಳೆತು ನಾರುತ್ತಿದೆ.ಪುಟ್ಟ ಮಕ್ಕಳು ತ್ಯಾಜ್ಯ ನೀರಲ್ಲಿಯೇ ನಡೆದಾಡಬೇಕಿದೆ, ಶಾಲಾ ಅಂಗಳದಲ್ಲಿಯೇ ಬಚ್ಚಲ ಮೋರಿ ನೀರು ಹರಿದಾಡುತ್ತಿದ್ದು ಕೆಸುರು ಬುರ್ದಿ ನಿರ್ಮಾಣವಾಗಿದೆ. ಚಪ್ಪರದಹಳ್ಳಿ ಯನ್ನು ಗ್ರಾಪಂ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ,ಕಾಲುವೆಗಳು ತ್ಯಾಜ್ಯ ತುಂಬಿ ಕೊಳೆತು ದುರ್ನಾಥ ಬೀರುತ್ತಿದ್ದು, ಸೊಳ್ಳೆ ಹಾಗೂ ಕ್ರಿಮಿಕೀಟಗಳ ಬಾಧೆಯಿಂದ ನರಳುತಲಿದ್ದು,ನಿತ್ಯ ಕ್ರಿಮಿ ಕೀಟಗಳ ಹಾವಳಿಯ ಆತಂಕದಿಂದ ಜೀವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಪಂ ಅಭಿವೃದ್ಧಿ ಅಧಕಾರಿ ಗಮನಕ್ಕೆ ಹತ್ತಾರು ಬಾರಿ ತಂದಿದ್ದು, ಸೌಜನ್ಯಕ್ಕೂ ಒಮ್ಮೆ ಇತ್ತ ಬಂದು ಪರಿಶೀಲಿಸಿಲ್ಲ ಎಂದು ನಾಣ್ಯಾಪುರ ಗ್ರಾಮದ ಚಪ್ಪರದಹಳ್ಳಿ ವಾಸಿಗಳು ದೂರಿದ್ದಾರೆ. ಚಪ್ಪರದಹಳ್ಳಿಯ ಬಹುತೇಕ ಕಡೆಗಳ ಚರಂಡಿಗಳು ಗಿಡಗಂಟೆಗಳಿಂದ ಕೂಡಿದ್ದು ಕಸ ತ್ಯಾಜ್ಯ ನೀರು ಕೊಳೆತು ನಾರುತ್ತಿವೆ,ನೈರ್ಮಲ್ಯತೆ ಕಾಣೆಯಾಗಿದೆ ಪರಿಣಾಮ ಗ್ರಾಮಸ್ಥರು ರೋಗ ಋಜನಿಗಳಿಗೆ ತುತ್ತಾಗಿ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ ಎಂದು ಚಪ್ಪರದಹಳ್ಳಿ ವಾಸಿಗಳು ಹೇಳಿಕೆ ನೀಡಿದ್ದಾರೆ.

ವಾರದೊಳಗೆ ಸ್ವಚ್ಚಗೊಳಿಸದಿದ್ದಲ್ಲಿ ಸಂಬಂಧಿಸಿದಂತೆ,ತಾಪಂ ಇಓ ಬಳಿ ದೂರು ನೀಡಲಾಗುವುದೆಂದು ಗ್ರಾಮದ ಕೆಲ ಮುಖಂಡರು ತಿಳಿಸಿದ್ದಾರೆ.ತಿಪ್ಪೆಗಳನ್ನು ಗ್ರಾಮದ ಹೊರ ಹಾಕಿಸಬೇಕು ಹಾಗೂ ಶಾಲೆ ಮತ್ತು ಅಂಗನವಾಡಿ ಸುತ್ತ ಮುತ್ತ ನೈರ್ಮಲ್ಯತೆ ಕಾಪಾಡಬೇಕಿದೆ, ಚಪ್ಪರದಹಳ್ಳಿಯಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ.ಕಾಲುವೆಗಳನ್ನ ಸ್ವಚ್ಚಗೊಳಿಸಬೇಕು ಮತ್ತು ಬೀದಿ ದೀಪಗಳನ್ನ ಹಾಕಿಸಬೇಕೆಂದು, ಚಪ್ಪರದಹಳ್ಳಿ ನಿವಾಸಿಗಳು ಹಾಗೂ ಗ್ರಾಮದ ಮುಖಂಡರು ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಈ ಮೂಲಕ ಒತ್ತಾಯಿಸಿದ್ದಾರೆ…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend