ಬಾದ್ಯಾಪೂರ ಗ್ರಾಮಪಂಚಾಯತ್ ವತಿಯಿಂದ ಮಾಸ್ಕ್ ವಿತರಣೆ…!!!

Listen to this article

*ಬಾದ್ಯಾಪೂರ ಗ್ರಾಮಪಂಚಾಯತ್ ವತಿಯಿಂದ ಮಾಸ್ಕ್ ವಿತರಣೆ*
ಇಂದು ಬಾದ್ಯಾಪೂರ ಗ್ರಾಮ ಪಂಚಾಯತ್ ವತಿಯಿಂದ ಬಾದ್ಯಾಪೂರ ಗ್ರಾಮದಲ್ಲಿ ಬಡವರಿಗೆ.ಶ್ರಮಿಕ ಕೂಲಿಕಾರ್ಮಿಕರಿಗೆ. ವಯೋವೃದ್ಧರಿಗೆ. ಹೋಟೆಲ್ & ಅಂಗಡಿ ವ್ಯಾಪಾರಿಗಳಿಗೆ. ವಿವಿಧ ನಗರಗಳಿಂದ ವಲಸೆ ಹೋಗಿ ಬಂದ ಗ್ರಾಮದ ಕುಟುಂಬ ಗಳಿಗೆ ಗ್ರಾ.ಪಂ. ಆಡಳಿತ ವತಿಯಿಂದ ಇಂದು ಮಾಸ್ಕಗಳನ್ನು ವಿತರಣೆ ಮಾಡಲಾಯಿತು.
ಗ್ರಾ.ಪಂ. ಅಧ್ಯಕ್ಷರು ಹಾಗೂ ಪಂ.ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಇಂದು ಬಾದ್ಯಾಪೂರ ಗ್ರಾಮದ ತುಂಬೆಲ್ಲಾ ಸಂಚರಿಸಿ ದೇವಸ್ಥಾನ. ಹೋಟೆಲ್. ಅಂಗಡಿ. ಕೆಲಸಕ್ಕೆ ಹೊರಟ ಕೂಲಿಕಾರ್ಮಿಕರಿಗೆ. ಕೆಲಸ ನಿರತ ಕಾರ್ಮಿಕರಿಗೆ. ಮತ್ತು ಪ್ರತಿ ಮನೆ ಮನೆಗಳಿಗೆ ತೆರಳಿ ಕೊರೊನಾ ಬಗ್ಗೆ ತಿಳುವಳಿಕೆ ನೀಡಿ ಕಡ್ಡಾಯವಾಗಿ ಮಾಸ್ಕಗಳನ್ನು ಧರಿಸಿ ಓಡಾಡಲು ತಿಳಿಸಿ ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು
ಪಂ.ಅಭಿವೃದ್ಧಿ ಅಧಿಕಾರಿ ಗಳಾದ ಶ್ರೀ ಸತೀಶ್ ಅಲಗೂರ ವರು ಮಾತನಾಡಿ. ಕೊರೊನಾ ವೈರಸ್ ಎಂಬ ಕ್ರೂರಿ ದೇಶದೆಲ್ಲೆಡೆ ವ್ಯಾಪಕವಾಗಿ ಹರಡಿ ಲಕ್ಷಾಂತರ ಜನರನ್ನು ಬಲಿಪಡೆಯುತ್ತಿದೆ.ಇದೊಂದು ಸಾಂಕ್ರಾಮಿಕ ರೋಗವಾಗಿದ್ಧು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಭೀಕರ ಕಾಯಿಲೆ ಯಾಗಿರುತ್ತದೆ. ಇದು ಅದರಲ್ಲೂ ವಿಶೇಷವಾಗಿ ವಯೋವೃದ್ಧರಿಗೆ ಮತ್ತು ವಿವಿಧ ಕಾಯಿಲೆಯಿಂದ ಬಳಲುತ್ತಿರುವವರಿಗೆ ಬೇಗ ಹರಡುತ್ತದೆ. ಆದ ಕಾರಣ ತಾವೆಲ್ಲರೂ ಕಡ್ಡಾಯವಾಗಿ ಮಾಸ್ಕಗಳನ್ನು ಧರಿಸಿ ಓಡಾಡುವದರಿಂದ ಈ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಹಿಡಿಯುತ್ತದೆ.ಗ್ರಾಮದ ಪ್ರತಿಯೊಬ್ಬ ರು ಮಾಸ್ಕಗಳನ್ನು ಧರಿಸಿ ಓಡಾಡುವದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಪದೇಪದೇ ಕೈ ಗಳನ್ನು ತೊಳೆದುಕೊಳ್ಳುವದು. ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವದು ತಮ್ಮೆಲ್ಲಾರ ಆದ್ಯ ಕರ್ತವ್ಯ ವಾಗಿದೆ.ಈಗಾಗಲೇ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಎರಡೆರಡು ಬಾರಿ ಸ್ಯಾನಿಟೈಸ್ ಮಾಡಲಾಗಿದೆ. ಪ್ರತಿ ಗಲ್ಲಿ ಗಲ್ಲಿ ಗಳಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ಇವತ್ತು ಬಾದ್ಯಾಪೂರ ಗ್ರಾಮದಲ್ಲಿ ಮಾಸ್ಕಗಳನ್ನು ನೀಡುತ್ತಿದ್ದೇವೆ ನಾಳೆಯಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮಾಸ್ಕ್ ಗಳನ್ನು ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಶ್ರೀ ಮತಿ ಶಿವಮೊಗ್ಗೆಮ್ಮ ಚನ್ನೂರ. ಕ.ರ.ವೇ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ ಭೈರಿಮಡ್ಡಿ. ತಾ.ಪಂ ಸದಸ್ಯರಾದ ಶ್ರೀ ಕೊತಲಪ್ಪ ಹಾವಿನ್. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಲಿಂಗಣ್ಣ ಮಾಚಗುಂಡಾಳ. ರವಿಕುಮಾರ ನಾಯಕ ಭೈರಿಮಡ್ಡಿ. ಬಲಭೀಮ ಬಾದ್ಯಾಪೂರ. ಪಾರ್ವತಿ ಬ್ಯಾಳಿ. ಗುರಪ್ಪ ಹೆಮ್ಮಡಿಗಿ. ಮುಖಂಡರಾದ ಶರಣಪ್ಪ ಸಾಹು. ಸಕ್ರೆಪ್ಪ ಕವಾಲ್ದಾರ. ಶ್ರೀ ನಿವಾಸ. ಡಿ.ನಾಯಕ. ಮಹಾದೇವಪ್ಪ ಚನ್ನೂರ. ಮಲ್ಲಿಕಾರ್ಜುನ ಗೌಡ. ಕೃಷ್ಣ ಹಾವಿನ್. ಆನಂದ ಕವಾಲ್ದಾರ. ಹೊನ್ನಪ್ಪ ಸವಳಪಟ್ಟಿ.ಬಲಭೀಮ ಬೊಮ್ನಳ್ಳಿ. ಶಿವಗುಂಡಪ್ಪ ಜಾಲಹಳ್ಳಿ.ಜಗದೀಶ ಸಾಹುಕಾರ. ಭೀಮರಾಯ ಮಾಚಗುಂಡಾಳ.
ಗ್ರಾ.ಪಂ.ಕಾರ್ಯದರ್ಶಿ ಶ್ರೀ ಶಾಂತಮೂರ್ತಿ. ಕರ ವಸೂಲಿ ಗಾರ ಮಾನಪ್ಪ ದೊರಿ. ಪಂಚಾಯತ್ ಸಿಬ್ಬಂದಿಗಳಾದ ಶ್ರೀ ತಿಪ್ಪಣ್ಣ. ದುರ್ಗಪ್ಪ. ಸಿದ್ದಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

 

ವರದಿ. ಮುಕ್ಕಣ್ಣಹುಲಿಗುಡ್ಡ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend