ಎಚ್ಚರಿಕೆ ಕನ್ನಡ ಪತ್ರಿಕೆಯ ವರದಿಗೆ ಎಚ್ಚೆತ್ತುಕೊಂಡ ಗ್ರಾಮಡಳಿತ ಮತ್ತು ಪಿಡಿಓ…!!!

Listen to this article

 

ಎಚ್ಚರಿಕೆ ಕನ್ನಡ ಪತ್ರಿಕೆಯ ವರದಿಗೆ ಎಚ್ಚೆತ್ತುಕೊಂಡ ಗ್ರಾಮಡಳಿತ ಮತ್ತು ಪಿಡಿಓ.

ವರದಿ ವೀರೇಶ್ ಪಿ.

ಹಳೇಕೋಟೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ ಕರೋನ ವೈರಸ್ ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರುಡುತ್ತಿದೆ.ಸಿರುಗುಪ್ಪ ತಾಲೂಕಿನ ನಂ 64 ಹಳೇಕೋಟೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕರೋನ ವೈರಸ್ ಸುಮಾರು 20 ರಿಂದ್ದ 30 ಪಾಸಿಟಿವ್ ಕೇಸ್ ಬಂದಿದ್ದಾವೆ ಇದರಿಂದ ಭಯಭೀತಿಗೊಂಡ ಯುವಕರು ಗ್ರಾಮದಲ್ಲಿ ಸ್ಯಾನಿಟೆಜರ್ ಸಿಂಪಡಿಸಿರಿ ಹಾಗೂ ಸ್ವಚ್ಛತೆಯನ್ನು ಕಾಪಡಿಯೆಂದು ಪಿಡಿಓಗೆ ಮನವಿ ಮಾಡಿದ್ದಾರೆ. ಬೇಜವಾಬ್ದಾರಿಯ ಹಾರಿಕೆಯ ಉತ್ತರ ಕೊಟ್ಟು ಜಾರಿಕೊಂಡ ಅಭಿವೃದ್ಧಿಅಧಿಕಾರಿ. ವರದಿಗಾರರು ಸಹ ಪಿಡಿಓಗೆ ದೂರವಾಣಿ ಮೂಲಕ ಸಂಪರ್ಕ ಮಾಡಿದಾಗ ಬೇಜವಾಬ್ದಾರಿ ಉತ್ತರ ಕೊಟ್ಟರು. ಸ್ಯಾನಿಟೆಜರ್. ಕುಡಿಯುವ ನೀರಿನ ಸಮಸ್ಯೆ.ಸ್ವಚ್ಛತೆ. ಗ್ರಾಮದ ಇನ್ನೂ ಕೆಲವು ವಿಷಯಗಳನ್ನು ಕುರಿತು ಎಚ್ಚರಿಕೆ ಕನ್ನಡ ಪತ್ರಿಕೆಯಲ್ಲಿ ವರದಿ ಬಂದ ಮೇಲೆ ಗ್ರಾಮದ ಪ್ರತಿಯೊಂದು ವಾರ್ಡಗಳಲ್ಲಿ ಸ್ಯಾನಿಟೆಜರ್ ಸಿಂಪಡಿಸಿದ್ದಾರೆ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ್ದ ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ.ರೈತರ ಹೊಲಗಳ ಪಂಪಸೆಟ್ ಮೂಲಕ ಕಾಲುವೆಗೆ ನೀರು ಹರಿಸಿ. ಕಾಲುವೆಯಿಂದ ಕೆರೆಗೆ ಸರಬರಾಜು ಮಾಡಿ ವಿನೂತನ ಪ್ರಯೋಗದಿಂದ ಕುಡಿಯುವ ನೀರಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಿದ್ದಾರೆ.ಇನ್ನೂ ಕೆಲವು ಸಮಸ್ಯೆಗಳು ಇದ್ದಾವೆ ಅವುಗಳನ್ನು ನಿವಾರಿಸಿ ಗ್ರಾಮಗಳನ್ನು ಅಭಿವೃದ್ಧಿ ಮಾಡಿ ಉತ್ತಮ ಆಡಳಿತ ನೆಡೆಸುತ್ತಾರೆಂಬ ಗ್ರಾಮದ ಜನರಿಗೆ ವಿಶ್ವಾಸವಿದೆ. ಪಿಡಿಓರವರು ವಿಶ್ವಾಸ ಉಳಿಸಿಕೊಳ್ಳುತ್ತಾರೆ ಅಥವಾ ಕಳೆದುಕೊಳ್ಳುತ್ತಾರೆಂದು ಕಾದು ನೋಡಬೇಕು?.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend