ಭೂತಲದಿನ್ನಿ ಗ್ರಾ.ಪ.ಅಧ್ಯಕ್ಷರಾಗಿ ಅವಿರೋಧವಾಗಿ ಮೌಲಾಬೀ ಬೇಗಂ ಆಯ್ಕೆ…!!!

Listen to this article

ಭೂತಲದಿನ್ನಿ ಗ್ರಾ.ಪ.ಅಧ್ಯಕ್ಷರಾಗಿ ಅವಿರೋಧವಾಗಿ ಮೌಲಾಬೀ ಬೇಗಂ ಆಯ್ಕೆ.

ಸಿಂಧನೂರು ಅ.28.ಭೂತಲದಿನ್ನಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ಬೆಂಬಲಿತ ಅಭ್ಯರ್ಥಿ ಮೌಲಾಬೀ ಬೇಗಂ ಗಂಡ ಖಾಜ ಹುಸೇನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಲಕ್ಷ್ಮೀದೇವಿ ಅಧಿಕೃತವಾಗಿ ಘೋಷಣೆ ಮಾಡಿದರು.
ತಾಲೂಕಿನ ಭೂತಲದಿನ್ನಿ ಗ್ರಾಮ ಪಂಚಾಯಿತಿ ಹಿಂದಿನ ಅಧ್ಯಕ್ಷರಾಗಿದ್ದ ಪಿ.ಶ್ರೀನಿವಾಸ ತಂದೆ ಅಪ್ಪರಾವ್ ರವರು ಸೆಪ್ಟಂಬರ್ 15 ರಂದು ಎಸಿ ಗೆ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆಯನ್ನು ದಿನಾಂಕ 28 ಅಕ್ಟೋಬರ್ 2022 ರಂದು ನಿಗದಿಪಡಿಸಲಾಗಿತ್ತು. ನಾಮಪತ್ರ ಸ್ವೀಕರಿಸುವ ಸಮಯ 10:00 ಗಂಟೆಯಿಂದ 11-00 ಗಂಟೆಯವರೆಗೆ , ನಾಮಪತ್ರ ಪರಿಶೀಲನೆ ಮಧ್ಯಾನ್ಹ 01:10 ರಿಂದ 01:20 ರವರೆಗೆ , ನಾಮಪತ್ರ ಹಿಂತೆಗೆದುಕೊಳ್ಳುವ ಸಮಯ ಮಧ್ಯಾನ್ಹ 01:20 ರಿಂದ 01:30 ರವರೆಗೆ, ಗುಪ್ತ ಮತದಾನ ಮಧ್ಯಾಹ್ನ : 1-30 ಗಂಟೆಯಿಂದ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಗೊತ್ತುಪಡಿಸಲಾ ಗಿತ್ತು, ಮೌಲಾಬೀ ಬೇಗಂ ಅವರ ನಾಮಪತ್ರ ಹೊರತು ಪಡಿಸಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಮೌಲಾಬೀ ಬೇಗಂ ಗಂಡ ಖಾಜ ಹುಸೇನ್ ಅವರನ್ನು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಅಧಿಕೃತವಾಗಿ ಪ್ರಕಟಿಸಿದರು.
ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮೌಲಾಬೀ ಬೇಗಂ ಗಂಡ ಖಾಜ ಹುಸೇನ್ ಅವಿರೋಧವಾಗಿ ಆಯ್ಕೆಯಾದ ಇವರನ್ನು ಚುನಾವಣಾ ಅಧಿಕಾರಿ ಲಕ್ಷ್ಮೀದೇವಿ ಹಾಗೂ ಎಡಿಎ ಅಮರಗುಂಡಪ್ಪ, ದಿನೇಶ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಹೊಸಮನಿ ಅಭಿನಂದನೆ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದ ಮುಖಂಡರಾದ ಪಂಪನಗೌಡ ಬಾದರ್ಲಿ, ಜಾಫರ್ ಜಾಗೀರದಾರ್, ಯಂಕನಗೌಡ, ರವೀಂದ್ರರಡ್ಡಿ, ಜಯಪ್ರಕಾಶ ಕಾರಗಿನೂರು, ಬಂದೇನವಾಜ್, ತಿಮ್ಮಪ್ಪ ನಾಯಕ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶರಣಪ್ಪ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು. ಗ್ರಾಮ ಪಂಚಾಯಿತಿ ಒಟ್ಟು 19 ಸದಸ್ಯರನ್ನು ಹೊಂದಿದ್ದ ಪಂಚಾಯಿತಿಯಾಗಿದೆ.
ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮೀಣ ಠಾಣೆ ಸಿಬ್ಬಂದಿಗಳೊಂದಿಗೆ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend