ಅಧಿಕಾರಿಗಳ ನಿರ್ಲಕ್ಷ್ಯ ರೈತರು ಕಾಲುವೆ ಬಳಿ ಪ್ರತಿಭಟನೆ…!!!

Listen to this article

ಅಧಿಕಾರಿಗಳ ನಿರ್ಲಕ್ಷ್ಯ ರೈತರು ಕಾಲುವೆ ಬಳಿ ಪ್ರತಿಭಟನೆ.

ಸಿಂಧನೂರ :ಅ .29 .54 ನೇಯ ಕಾಲುವೆಗೆ ಸಮರ್ಪಕ ನೀರು ಬಾರದ ಕಾರಣ ಆಕ್ರೋಶಗೊಂಡ ರೈತರು ಅರಗಿನಮರ ಹತ್ತಿರ ಕಾಲುವೆ ಬಳಿ ಪ್ರತಿಭಟನೆಯನ್ನು ನಡೆಸಿದರು ಸಹ ನೀರಾವರಿಯ ಇಲಾಖೆಯ ಅದಿಕಾರಿಗಳು ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ಮಾಡಿದರು
ತುಂಗಭದ್ರ ಎಡದಂಡೆ ಕಾಲುವೆಯ ವ್ಯಾಪ್ತಿಯಲ್ಲಿ ಬರುವ 54 ನೇ ಕಾಲುವೆಗೆ ವಾರಬಂದಿ ಪ್ರಕಾರ ಕಾಲುವೆಗೆ ನೀರು ಬಾರದೆ ಇರುವದರಿಂದ ರೈತರ ಬೆಳೆಗೆ ನೀರು ಸಿಗದೆ ಬೆಳೆ ಒಣಗಿ ಹೋಗುವದರಿಂದ ರೈತರು ಕಂಗಾಲಾಗಿದ್ದು ಕಂಡುಬಂದಿದೆ.
54 ನೇ ಕಾಲುವೆ ವ್ಯಾಪ್ತಿಯಲ್ಲಿ ಬರುವ ಅಲಬನೂರ ಏರಿಯಾದ ರೈತರು ಬೆಳೆದ ಬೆಳೆಗೆ ಸಮರ್ಪಕ ನೀರು ಕಾಲುವೆಗೆ ಬಾರದೆ ಇರುವದರಿಂದ ರೈತರು ಬೆಳೆದ ಬೆಳೆ ಕೈಗೆ ಸಿಗದಂತಾಗಿದೆ. ಕಾಲುವೆಗೆ ವಾರಬಂದಿ ಪ್ರಕಾರ ನೀರು ಯಾಕೆ ಬಿಟ್ಟಿಲ್ಲ ಎಂದು ನೀರಾವರಿ ಇಲಾಖೆಯ ಅದಿಕಾರಿಗಳನ್ನು ಕೇಳಿದರೆ ಕಾಲುವೆಗೆ ನೀರು ಬಿಟ್ಟಿದ್ದೆವೆ ಬರದಿದ್ದರೆ ನಾವೇನು ಮಾಡಬೇಕು ಎಂದು ಅದಿಕಾರಿಗಳು ಬೇಜವಾಬ್ದಾರಿಯ ಉತ್ತರ ನೀಡುತ್ತಾರೆ ಎಂದು ರೈತ ಚನ್ನಬಸವ ಅಲಬನೂರ ಅದಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬರ್ಮಾಕ್ಯಾಂಪ ನಲ್ಲಿ ಅಲಬನೂರಿಗೆ ಹೋಗುವ ಪೈಪ ಹೊಡೆದು ಹೋಗಿದೆ ಇದರ ಬಗ್ಗೆ ನೀರಾವರಿ ಇಲಾಖೆ ಅದಿಕಾರಿಗಳ ಗಮನಕ್ಕೆ ತಂದರು ಏನು ಪ್ರಯೋಜನವಾಗಿಲ್ಲ,ಜನ ಪ್ರತಿನಿಧಿಗಳ ಗಮನಕ್ಕೆ ತಂದಾಗ ಅದಿಕಾರಿಗಳನ್ನು ಕಳಿಸಿ ನೀರು ಬಿಡುವ ದಾಗಿ ಭರವಸೆ ನೀಡುತ್ತಾರೆ ಹೊರತು ರೈತರ ನೆರವಿಗೆ ಬರುತ್ತಿಲ್ಲ. ಈ ರೀತಿ ಯಾದರೆ ರೈತರ ಕಷ್ಟ ಕೇಳುವರಾರು ಎಂದು ಚನ್ನಬಸವ ಕಂಬಾರ ರಾಜಕಾರಣಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಯಲ್ಲಪ್ಪ, ಮಹಿಬೂಬಸಾಬ, ಅಮರೇಶ,ಬಸವರಾಜ ಸೇರಿದಂತೆ ಸುಮಾರು ರೈತರು ಪ್ರತಿಭಟನೆಯಲ್ಲಿ ಬಾಗವಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend