ಉಮಲೂಟಿ ಗ್ರಾ.ಪಂ. ಉಪ ಚುನಾವಣೆ ಶೇ.71ರಷ್ಟು ಶಾಂತಿಯುತ ಮತದಾನ…!!!

Listen to this article

ಉಮಲೂಟಿ ಗ್ರಾ.ಪಂ. ಉಪ ಚುನಾವಣೆ ಶೇ.71ರಷ್ಟು ಶಾಂತಿಯುತ ಮತದಾನ

ಸಿಂಧನೂರು. ಅ-28 ತಾಲೂಕಿನ ಉಮಲೂಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬುಕ್ಕನಹಟ್ಟಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ ಯಲ್ಲಿ ಶೇ. 71.23 ರಷ್ಟು ಮತದಾನವಾಗಿದೆ ಎಂದು ಗ್ರೇಡ್-2 ತಹಶೀಲ್ದಾರ ಚಂದ್ರಶೇಖರ ಹೆಚ್. ತಿಳಿಸಿದರು.
ಅವರು ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡುತ್ತಾ, ಹಿಂದಿನ ಸದಸ್ಯರೊಬ್ಬರು ನಿಧನ ಹೊಂದಿದ ಪ್ರಯುಕ್ತ ಹೊಸ ಸದಸ್ಯರ ಆಯ್ಕೆಗಾಗಿ ಉಪ ಚುನಾವಣೆ ನಡೆದಿದ್ದು, ಒಟ್ಟು 650 ಮತದಾರರಿದ್ದು, 331-ಪುರುಷ ಮತದಾರರು, 319-ಮಹಿಳಾ ಮತದಾರರ ಪೈಕಿ 233 ಪುರುಷ ಮತದಾರರು, 230-ಮಹಿಳಾ ಮತದಾರರು ಸೇರಿ ಒಟ್ಟು-463 ಮತಗಳನ್ನು ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಶಾಂತಿಯುತ ಮತದಾನ: ಬೆಳಿಗ್ಗೆ 7.00ರಿಂದ ಆರಂಭವಾದ ಮತದಾನ ಸಾಯಂಕಾಲ 5.00ಕ್ಕೆ ಶಾಂತಿಯುತವಾಗಿ ಮತದಾನ ನಡೆಯಿತು.
ಮತ ಎಣಿಕೆ : ಇಂದು ಸಂಜೆ ಸ್ಟಾಂಗ್ ರೂಮಿನಲ್ಲಿ ದಾಖಲಿಸಿದ ಮತ ಪಟ್ಟಿಗೆಯನ್ನು ಇಟ್ಟಿದ್ದು, ಪೊಲೀಸ್ ಸುಪರ್ಧಿಗೆ ವಹಿಸಲಾಗಿದೆ. ಇದೇ ಅಕ್ಟೋಬರ್-31ರಂದು ಸೋಮವಾರ ಬೆಳಿಗ್ಗೆ 8.00 ಗಂಟೆಯಿಂದ ತಹಶೀಲ್ದಾರರ ಕಛೇರಿಯಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತದೆ ಚುನಾವಣಾಧಿಕಾರಿ ವೀರೇಶ ಗೋನವಾರ ಸಹಾಯಕ ಚುನಾವಣಾ ಧಿಕಾರಿ ರಾಮದಾಸ ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend