ಜೋಳಿಗೆಯ ಮೂಲಕ ಅಂಧ ಅನಾಥರ ಸೇವೆಗೈಯ್ಯುತ್ತಿರುವ ಕಾರುಣ್ಯಾಶ್ರಮದ ಕಾರ್ಯ ಶ್ಲಾಘನೀಯ,ಡಾ. ಗುರುಶರ್ಮಾ…!!!

Listen to this article

ಜೋಳಿಗೆಯ ಮೂಲಕ ಅಂಧ ಅನಾಥರ ಸೇವೆಗೈಯ್ಯುತ್ತಿರುವ ಕಾರುಣ್ಯಾಶ್ರಮದ ಕಾರ್ಯ ಶ್ಲಾಘನೀಯ,ಡಾ. ಗುರುಶರ್ಮಾ..

ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಪೋತ್ನಾಳದ ಶಾರದಾ ಕ್ಲಿನಿಕ್ ನ ವೈದ್ಯ ದಂಪತಿಗಳಾದ ಡಾ. ಅಶ್ವಿನಿ ಶರ್ಮಾ ಡಾ. ಗುರುಶರ್ಮಾ ಇವರ ಕುಟುಂಬದ ವತಿಯಿಂದ ” ದೀಪಾವಳಿ ಸಡಗರ ” ಹಾಗೂ ಅವರ ಪುತ್ರಿಯಾದ ಮನ್ವಿತಾ ಶರ್ಮಾ ಅವರ ಹುಟ್ಟು ಹಬ್ಬ ಸಮಾರಂಭ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಗುರು ಶರ್ಮಾ ಜೋಳಿಗೆಯ ಮೂಲಕ ಅಂಧ -ಅನಾಥರ ಸೇವೆಗೈಯ್ಯುತ್ತಿರುವ ಕಾರುಣ್ಯಾಶ್ರಮದ ಕಾರ್ಯ ಶ್ಲಾಘನೀಯ ಬರೀ ಸ್ವಾರ್ಥಕ್ಕಾಗಿ ಬದುಕುವ ಈ ಪ್ರಪಂಚದಲ್ಲಿ ಇನ್ನೊಬ್ಬರ ಹಿತಕ್ಕಾಗಿ ಅನಾಥರಿಗೆ ಆಶ್ರಯ ನೀಡಿ ಅವರೆಲ್ಲಾ ಭಾವನೆಗಳಿಗೆ ಸ್ಪಂದಿಸುವ ಈ ಆಶ್ರಮದ ದಂಪತಿಗಳಿಬ್ಬರು ಮಾಡುವ ಕಾರ್ಯ ಮಾನವೀಯತೆಯನ್ನು ಎತ್ತಿ ಹಿಡಿಯುತ್ತಿದೆ.

ಭಾರತೀಯ ಸಂಸ್ಕೃತಿ ಪರಂಪರೆಗೆ ಹೊಂದಿಕೊಂಡು ಪ್ರತಿಯೊಂದು ಕಾರ್ಯಕ್ರಮಗಳನ್ನು ಸ್ವಂತ ಕುಟುಂಬದ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿರುವ ಹರೇಟನೂರು ಹಿರೇಮಠದ ಸಾಮಾಜಿಕ ಜವಾಬ್ದಾರಿಗೆ ನಮ್ಮ ಕುಟುಂಬ ನಿರಂತರವಾಗಿ ಬೆನ್ನೆಲುಬಾಗಿರುತ್ತದೆ ಎಂದು ಮಾತನಾಡಿದರು. ನಂತರ ಮಾತನಾಡಿದ ಡಾ. ಅಶ್ವಿನಿ ಶರ್ಮಾ ನಾವು ಕಾಣದೇ ಇರುವ ಪ್ರಪಂಚವನ್ನು ಕಣ್ಣೆದುರಿಗೆ ನೊಂದ ಜೀವಿಗಳ ಮೂಲಕ ತೋರಿಸಿ ಇಡೀ ಜೀವನವನ್ನೇ ಅನಾಥರಿಗಾಗಿ ಮುಡಿಪಿಟ್ಟಿರುವ ಕಾರುಣ್ಯ ಸಂಸ್ಥೆಯ ಸಂಸ್ಥಾಪಕರಿಗೆ ನಮ್ಮಿಂದ ನಿರಂತರ ಸಹಾಯ ದೊರೆಯುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ಶಂಕ್ರಮ್ಮ ದಿ.ವೀರೇಶಶರ್ಮಾ ಪೋತ್ನಾಳ. ಶಾರದಾ ಕೆಳಗಡೆಮಠ ಪೋತ್ನಾಳ ಶಿವಲಿಂಗಮ್ಮ ಕೆಳಗಡೆಮಠ ಪೋತ್ನಾಳ ಶ್ರೇಷ್ಠ ಕೆಳಗಡೆಮಠ. ಸಿದ್ದಾಂತ ಶರ್ಮಾ. ಹಾಗೂ ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಸುಜಾತ ಹಿರೇಮಠ ಅಮರೇಶ ಮರಿಯಪ್ಪ ಶರಣಮ್ಮ ಬಸಮ್ಮ ಅನೇಕರು ಉಪಸ್ಥಿತರಿದ್ದರು…

ವರದಿ. ಎಚ್ಚರಿಕೆ ಕನ್ನಡ ನ್ಯೂಸ್ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend