ಅ.23ರ ಕಿತ್ತೂರು ಉತ್ಸವ ಜಾಗೃತಿ ಜಾಥಾ ದಿವ್ಯ ಜ್ಯೋತಿ ವಾಹನಕ್ಕೆ ಚಾಲನೆ…!!!

Listen to this article

ಅ.23ರ ಕಿತ್ತೂರು ಉತ್ಸವ ಜಾಗೃತಿ ಜಾಥಾ ದಿವ್ಯ ಜ್ಯೋತಿ ವಾಹನಕ್ಕೆ ಚಾಲನೆ.

ಸಿಂಧನೂರು :ಅ14.ಕಿತ್ತೂರು ಉತ್ಸವ ಅಕ್ಟೋಬರ್ 23 ಕ್ಕೆ, ಸ್ವಾತಂತ್ರ ಸೇನಾನಿ, ವೀರನಾರಿ, ಕಿತ್ತೂರು ರಾಣಿ ಚೆನ್ನಮ್ಮ, 1824 ರಲ್ಲಿ ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ ಸಂಗ್ರಾಮ ಚಳುವಳಿಗೆ ನಾಂದಿ ಹಾಡಿದರು. ದತ್ತು ಪುತ್ರರಿಗೆ ಹಕ್ಕು ಇಲ್ಲವೆಂದು ಬ್ರಿಟಿಷರ ನೀತಿಯ ವಿರುದ್ದ ಚಿಕ್ಕ ಸಂಸ್ಥಾನವಾದರು ಸಂಗೊಳ್ಳಿ ರಾಯಣ್ಣ ಚನ್ನಮ್ಮನ ಬಂಟನೊಂದಿಗೆ ಬ್ರಿಟಿಷರ ವಿರುದ್ಧ ಯುದ್ದವನ್ನು ಸಾರಿ, ಕೆಚ್ಚೆದೆಯ ದೇಶದ ಪ್ರೇಮಸಾರಿದ್ದು ಪ್ರತಿಯೊಬ್ಬ ಭಾರತೀಯನ ಹೃದಯದ ಮಿಡಿತದಲ್ಲಿ ಅಚ್ಚಳಿಯದೆ ಉಳಿದು ಅವರ ಸಂದೇಶಗಳನ್ನು ನೆನೆಯುವುದು. ನಾಡಿನ ಜನತೆಯ ಆದ್ಯ ಕರ್ತವ್ಯ ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಕಿತ್ತೂರಿನಲ್ಲಿ ಇದೆ ತಿಂಗಳ 23 ರಂದು ಕಿತ್ತೂರು ಉತ್ಸವ ಆಯೋಜಿಸಿದ್ದು ಅದರ ಜಾಗೃತಿ ಜಾಥಾ ದಿವ್ಯ ಜ್ಯೋತಿಯೊಂದಿಗೆ ಪ್ರತಿ ತಾಲೂಕಿನಲ್ಲಿ ಸಂಚರಿಸಿ ಜನತೆ ಪಾಲ್ಗೊಳ್ಳುವಂತೆ ಆಹ್ವಾನಿಸುತ್ತಿದೆ ಎಂದು ತಾಲೂಕು ದಂಡಾಧಿಕಾರಿ ಅರುಣ್ ಹೆಚ್. ದೇಸಾಯಿ ತಿಳಿಸಿದರು.
ನಗರದ ಮಿನಿ ವಿಧಾನ ಸೌಧ ದಲ್ಲಿ ಇದೇ ತಿಂಗಳು 23 ರಂದು ಕಿತ್ತೂರು ಉತ್ಸವ ಆಯೋಜಿಸಿದ್ದು ಅದರ ಜಾಗೃತಿ ಜಾಥಾ ದಿವ್ಯ ಜ್ಯೋತಿಯೊಂದಿಗೆ ರಾಜ್ಯಾದ್ಯಂತ ಸಂಚರಿಸಿದ ವಾಹನಕ್ಕೆ ದೀಪ ಬೆಳಗಿಸಿ ಮಾತನಾಡಿದರು.
ಕಿತ್ತೂರು ಉತ್ಸವ ಜಾಗೃತಿ ಜಾಥಾ ದಿವ್ಯ ಜ್ಯೋತಿ ವಾಹನಕ್ಕೆ ಚಾಲನೆ ಸಂದರ್ಭದಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ,ಪಿ. ಎಲ್. ಡಿ. ಬ್ಯಾಂಕ್ ಅಧ್ಯಕ್ಷ ದೊಡ್ಡ ಬಸವರಾಜ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ,ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಮದ್ವರಾಜ ಆಚಾರ್ಯ,ಖಾಜಿ ಮಲ್ಲಿಕ್, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು,ಬಿ.ಎಚ್. ಅತಿ, ಟಿ. ಎಪ್. ಚೆನ್ನಪ್ಪ ನವರ,ಬಿ ನಾಗರಾಜ ಗೌಡ ಸಿಂಗಾಪುರ , ಪಂಪನ ಗೌಡ ತಾವರಗೇರಾ, ವೀರಭದ್ರಪ್ಪ ವಕೀಲರು, ಬಸನಗೌಡ ಬುಕ್ಕನಟ್ಟಿ, ನಾಗರಾಜ್ ಗಸ್ತಿ, ಪಂಚಮಸಾಲಿ ಮುಖಂಡರು ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend