ಗಂಡು ಮಗುವಿಗೆ ಬೋನ್ ಮ್ಯಾರೋ,ಹಣ ಸಹಾಯಕ್ಕೆ ಪೋಷಕರ ಮನವಿ….!!!

Listen to this article

ಗಂಡು ಮಗುವಿಗೆ ಬೋನ್ ಮ್ಯಾರೋ,ಹಣ ಸಹಾಯಕ್ಕೆ ಪೋಷಕರ ಮನವಿ.

ಸಿಂಧನೂರು:ಆ.10 ಎರಡು ವರ್ಷದ ಗಂಡು ಮಗುಯೊಂದು ಜೋನ್ ಮ್ಯಾರೋ ಕಾಯಿಲೆ ಯಿಂದ ಬಳಲುತ್ತಿದ್ದು ಆಪರೇಷನ ಮಾಡಿಸಲು, ಹಣದ ಅವಶ್ಯಕತೆ ಇದ್ದು, ಮಾನವೀಯತೆ ದೃಷ್ಟಿಯಿಂದ ಹಣ ಸಹಾಯ ಮಾಡಿ ಮಗುವಿನ ಪ್ರಾಣ ಉಳಿಸುವಂತೆ ಮಗುವಿನ ಪಾಲಕರು ದಾನಿಗಳ, ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಾನ್ವಿ ತಾಲ್ಲೂಕಿನ ಮುಷ್ಕರ ಗ್ರಾಮದ ಲಲಿತ ಗಂಡ ಶಿವಣ್ಣ ದಂಪತಿಗಳ 2 ವರ್ಷದ ಮಗು ಸುಶಾಂತಿ ಫಲಾಸ್ಟೆಮಿಯಾ ಕಾಯಿಲೆಯಿಂದ ನರಳಾಡುತ್ತಿದ್ದು ಅಪರೇಷನ ಮಾಡಿಸದಿದ್ದರೆ ಮಗು ಉಳಿಯುವದು ಕಷ್ಟ ಎಂದು ವೈದ್ಯರು ಹೇಳಿದ್ದು, ಮಗುವಿನ ಪಾಲಕರು ಬಡವರಾಗಿದ್ದು ಹಣ ಸಂಗ್ರಹ ಮಾಡಲು ದಿನ ನಿತ್ಯ ಕಷ್ಟಪಡುತ್ತಿದ್ದಾರೆ.
ಮಗುವಿಗೆ ಆರೋಗ್ಯ ಸರಿಯಿಲ್ಲದಾಗ ನಗರದ ಸುಕಾಲಪೇಟೆ ರಸ್ತೆಯಲ್ಲಿರುವ ಸುರಕ್ಷಾ ಆಸ್ಪತ್ರೆ ಯಲ್ಲಿ ಮಗುವನ್ನು ವೈದ್ಯರ ಬಳಿ ತೋರಿಸಿದಾಗ ಈ ಕಾಯಿಲೆ ಇರುವದು ಬೆಳಕಿಗೆ ಬಂದಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರುದ್ರಗೌಡ ಪತ್ರಿಕೆಗೆ ತಿಳಿಸಿದರು. ವೈದ್ಯರ ಸಲಹೆ ಮೇರೆಗೆ ಮಗುವನ್ನು ಬೆಂಗಳೂರಿನ ಕಿದ್ವಾಯಿ ಹೃದಯಾಲಯಕ್ಕೆ ಹೋಗಿ ಪರೀಕ್ಷೆ ಮಾಡಿಸಿದಾಗ 6ತಿಂಗಳು ಮಗುಇರುವಾಗಲೆ ಫಲಾಸೆಮಿಯಾ ರೋಗ ಇರುವುದಾಗಿ ವೈದ್ಯರು ಸ್ಪಷ್ಟಪಡಿಸಿದ ಕೂಡಲೆ ಮಗುವಿಗೆ ಆಪರೇಷನ ಮಾಡಿಸಬೇಕು ಇಲ್ಲದಿದ್ದರೆ ಈ ಮಗುವಿನ ಜೀವಕ್ಕೆ ಅಪಾಯ ಎಂದಿದ್ದಾರೆ ಎನ್ನಲಾಗಿದೆ.
ಹಣ ಇಲ್ಲದೆ ಇರುವದರಿಂದ ಪಾಲಕರು ಬೆಂಗಳೂರು ಬಿಟ್ಟು ನಗರದ ಸುರಕ್ಷಾ ಆಸ್ಪತ್ರೆಯಲ್ಲಿ ದಾಖಲು ಮಾಡಿ ಪ್ರತಿ ತಿಂಗಳು ಮಗುವಿಗೆ ರಕ್ತ ಕೊಡುತ್ತ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ ಮಗುವಿನ ಆಪರೇಷನ್ ಗಾಗಿ 15 ಲಕ್ಷ ಹಣದ ಅವಶ್ಯಕತೆ ಆಸ್ಪತ್ರೆ ಸೇರಿದಂತೆ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಈ ಕಾಯಿಲೆಗೆ ಅಪರೇಷನ ಮಾಡಲಾಗುತ್ತಿದೆ.
ನಾರಾಯಣ ಹೃದಯಾಲಯದ ಸಹಕಾರದಿಂದ ಕೋಲ್ ಇಂಡಿಯಾ ಕಂಪನಿ 10 ಲಕ್ಷ ರೂ.ದೇಣಿಗೆ ನೀಡಿದೆ. ಇನ್ನೂ 5 ಲಕ್ಷ ಹಣ ಬೇಕಾಗಿದೆ. 5 ಲಕ್ಷ ಹಣ ನೀಡಿ ನಮಗೆ ಇದೇ ಒಂದು ಮೊದಲ ಮಗುವಾಗಿದ್ದು ಈ ಮಗುವಿಗೆ ಈ ವಿಚಿತ್ರ ಕಾಯಿಲೆ ಬಂದಿದ್ದು ಮಾನವೀಯತೆ ದೃಷ್ಟಿಯಿಂದ ಹಣ ಸಹಾಯ ಮಾಡಿ ಮಗುವಿನ ಪ್ರಾಣ ಕಾಪಾಡು ವಂತೆ ಪಾಲಕರು ಮನವಿ ಮಾಡಿಕೊಂಡಿದ್ದಾರೆ ಹಣ ಸಹಾಯ ಮಾಡುವರು ಕೆಳಗೆ ಇರುವ ಮೊಬೈಲ್ ನಂ.9663847129 ಪೋನ್ ಪೇ ಇರುತ್ತದೆ. ಬ್ಯಾಂಕ್ ಖಾತೆ ಸಂಖ್ಯೆ 2454101007685, IFSC code :CNRB 0002454 ಈ ನಂಬರಗೆ ಹಣ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ…

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend