ವಾಲ್ಮೀಕಿ ಸರ್ವ ಸಮಾಜಕ್ಕೆ ಹಾಗೂ ನಾಡಿಗೆ ಆದರ್ಶವಾಗಿದ್ದರು -ನಾಡಗೌಡ…!!!

Listen to this article

ವಾಲ್ಮೀಕಿ ಸರ್ವ ಸಮಾಜಕ್ಕೆ ಹಾಗೂ ನಾಡಿಗೆ ಆದರ್ಶವಾಗಿದ್ದರು -ನಾಡಗೌಡ

ಸಿಂಧನೂರು :ಅ.9.ಮಹರ್ಷಿ ವಾಲ್ಮೀಕಿಯನ್ನು ಒಂದು ಜಾತಿಗೆ, ಸಮಾಜಕ್ಕೆ ಸಿಮೀತಗೊಳಿಸ ಬಾರದು, ಅವರು ಸರ್ವ ಸಮಸ್ತ ಸಮಾಜಕ್ಕೆ ಹಾಗೂ ನಾಡಿಗೆ ಆದರ್ಶವಾಗಿದ್ದರು ಎಂದು ಶಾಸಕ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ ಮಿನಿ ವಿಧಾನಸೌಧದ ತಹಸೀಲ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ವಾಲ್ಮೀಕಿ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ವಾಲ್ಮಿಕಿ ಸಮುದಾಯದ ಶ್ರೀ ಪ್ರಸನ್ನನಂದಾ ಸ್ವಾಮಿಜಿಗಳ 246 ನೇ ದಿನದ ಸುಧೀರ್ಘ ಹೋರಾಟದ ಫಲವಾಗಿ ಮೀಸಲಾತಿ ಹೆಚ್ಚಳ ಮಾಡಲು ಸರ್ಕಾರದಿಂದ ಸ್ಪಂದನೆ ದೊರೆತಿದೆ. ಎಸ್.‌‌‌ಸಿ,ಎಸ್.ಟಿ ಸಮುದಾಯದ ಪರವಾಗಿ ಸರ್ಕಾರಕ್ಕೆ ಹಾಗೂ ಸ್ವಾಮಿಜಿಗಳಿಗೆ ಧನ್ಯವಾದಗಳು ತಿಳಿಸಿದರು.


ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ ಮಹರ್ಷಿ ವಾಲ್ಮೀಕಿಯು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ನೆಲೆಯಾಗಿದ್ದರು. ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ.ಬಹು ದಿನಗಳಿಂದ ಪ.ಜಾ,ಪ.ಪಂಗಡದವರ ಬಹುದಿನಗಳ ಮೀಸಲಾತಿ ಹೆಚ್ಚಳದ ಬಗ್ಗೆ ಬೇಡಿಕೆಯಾಗಿತ್ತು. ಸ್ವಾಮಿಜಿಗಳ ನಿರಂತರ ಹೋರಾಟದ ಫಲವಾಗಿ ಜಯಂತಿಯ ಮುಂಚೆಯೇ ಸರ್ವಪಕ್ಷಗಳ ಸಭೆಯಲ್ಲಿ ಮೀಸಲಾತಿ ಹೆಚ್ಚಿಸಲು ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದರು.
ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಮಧ್ವರಾಜ ಆಚಾರ್ಯ,ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ,ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ನಿರುಪಾದಪ್ಪ ವಕೀಲರು ದೇವೇಂದ್ರಪ್ಪ ನಾಯಕ ಸೇರಿದಂತೆ ಇನ್ನಿತರು ಮಾತನಾಡಿದರು.


ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕಾ ರ್ಜುನ ಪಾಟೀಲ, ಪಿ.ಎಲ್.ಡಿ.ಬ್ಯಾಂಕ್ ಎಂ.ದೊಡ್ಡ ಬಸವರಾಜ,ಮಾಜಿ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಅಮರೇಗೌಡ ವಿರುಪಾಪೂರು,ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಿವನಗೌಡ ಗೋರೆಬಾಳ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬುಗೌಡ ಬಾದರ್ಲಿ, ಅಲ್ಲಮಪ್ರಭು ಪೂಜಾರಿ, ಎಚ್. ಎನ್ ಬಡಿಗೇರ, ವೆಂಕಟೇಶ ರಾಘಲಪರ್ವಿ, ಖಾಜಿ ಮಲ್ಲಿಕ್, ಡಿವಾಯ್ ಎಸ್.ಪಿ. ವೆಂಕಟಪ್ಪ ನಾಯಕ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಎಸ್.ಟಿ. ತಾಲೂಕು ಅಧಿಕಾರಿ ಶಿವಮಾನಪ್ಪ, ವಾಲ್ಮೀಕಿ ಸಮಾಜದ ಹಾಗೂ ವಿವಿಧ ಸಂಘಟನೆ ಮುಖಂಡರು, ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend