ಅ.14ರಿಂದ ಮೂರು ದಿನ ಕರ್ನಾಟಕ ಪ್ರಾಂತ ರೈತ ಸಂಘದ 17ನೇ ರಾಜ್ಯ ಸಮೇಳನ…!!!

Listen to this article

ಅ.14ರಿಂದ ಮೂರು ದಿನ ಕರ್ನಾಟಕ ಪ್ರಾಂತ ರೈತ ಸಂಘದ 17ನೇ ರಾಜ್ಯ ಸಮೇಳನ

ಸಿಂಧನೂರು: ಅ.9.ರೈತರ ಸಾಲಮನ್ನಕ್ಕಾಗಿ, ಬಲವಂತದ ಭೂಸ್ವಾದೀನ ಕಾಯ್ದೆವಿರೋಧಿಸಿ, ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಹಕ್ಕಿಗಾಗಿ, ಅತಿವೃಷ್ಟಿ ಪರಿಹಾರಕ್ಕಾಗಿ,ಋಣಮುಕ್ತ ಕಾಯ್ದೆಗಾಗಿ, ಸಮಗ್ರ ನೀರಾವರಿ ಕ್ರಮ ವಹಿಸಿ, ಕೋಮುವಾದದ ನಿಗ್ರಕ್ಕೆ ಹಾಗೂ ಸೌಹಾರ್ದತೆಯ ಸಂರಕ್ಷಣೆಗಾಗಿ, ಎಪಿಎಂಸಿ ಕಾಯ್ದೆ ರದ್ದತಿಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ 17ನೇ ರಾಜ್ಯ ಸಮ್ಮೇಳನ ಅಕ್ಟೋಬರ್ 14,15,16 ರಾಯಚೂರು ನಲ್ಲಿ ಮೂರು ದಿನಗಳ ಕಾಲ ನಡೆಯಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಕೇರಳ ರಾಜ್ಯ ಮಾದರಿಯಲ್ಲಿ ಋಣಮುಕ್ತ ಕಾಯ್ದೆ ಜಾರಿಗಾಗಿ ಹಾಗೂ ಸ್ವಾಮಿ ನಾಥನ್ ಆಯೋಗದ ಶಿಫಾರಸನ್ನು ಜಾರಿಗೊಳಿಸುವ ಕಾನೂನಿಗಾಗಿ ಒತ್ತಾಯಿಸಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ ಇಡೀ ವ್ಯವಸಾಯ ಕೃಷಿ ಭೂಮಿ ಕಾರ್ಪೊರೇಟ್ ಕಂಪನಿಗೆ ಮಾರಾಟ ಮಾಡುತ್ತಿದೆ.ರೈತರಿಂದ ಬಲವಂತವಾಗಿ ಭೂಮಿ ಕಸಿದುಕೊಂಡು ರೈತರನ್ನು ದಿವಾಳಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸದೆ ಹಳೆಯ ಯೋಜನೆ ಗಳನ್ನು ಕಿತ್ತುಕೊಳ್ಳುತ್ತಿದೆ.ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲ ಕೇಂದ್ರ ಸರ್ಕಾರ ನಿಗದಿ ಮಾಡಿದ ಪ್ರೋತ್ಸಾಹಧನ ಎರಡು ವರ್ಷದಿಂದ ನೀಡಿಲ್ಲ.ಪೂರ್ಣ ಪ್ರಮಾಣದಲ್ಲಿ ಖರೀದಿ ಮಾಡಲಿಲ್ಲ ಸರ್ಕಾರ ಭತ್ತಕ್ಕೆ 1950 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿದ್ದರು,1300 ರೂಪಾಯಿಗೆ ರೈತರು ಮಾರಾಟ ಮಾಡುವ ಪರಿಸ್ಥಿತಿಯಾಗಿದೆ.ಕೇಂದ್ರ ಸರ್ಕಾರ ರೈತರ ಮೂರು ಕೃಷಿ ಕಾಯ್ದೆ ವಾಪಸ್ಸು ಪಡೆದರೂ ರಾಜ್ಯದಲ್ಲಿ ಬೋಮ್ಮಾಯಿ ಸರ್ಕಾರ ಜಾರಿಗೆ ತಂದಿಲ್ಲ.
2016ರಿಂದ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆ ಸಾಲಗಾರರಾಗಿ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಉದ್ಯೋಗ ಭದ್ರತೆ ಕಿತ್ತುಕೊಂಡಿದೆ. ಕರ್ನಾಟಕ ರಾಜ್ಯದಲ್ಲಿ 50ಲಕ್ಷ ಎಕರೆ ಬೀಳು ಭೂಮಿ ಯನ್ನು ಖಾಸಗಿಯವರಿಗೆ ನೀಡಲು ಮುಂದಾಗಿದೆ. ರೈತರು ಎರಡು ವರ್ಷ ಕೃಷಿ ಭೂಮಿಯನ್ನು ಬೀಳು ಬಿಟ್ಟರೆ ಮೂರನೇ ವರ್ಷಕ್ಕೆ ಸರಕಾರದ ವಶಕ್ಕೆ ಪಡೆಯುವ ಯೋಜನೆ ತರಲು ಮೋದಿ ಸರ್ಕಾರ ಮುಂದಾಗಿದೆ.ದೇಶದಲ್ಲಿ ಬಡ ಮಕ್ಕಳು ವಿದ್ಯಾವಂತ ರಾಗಬಾರದು ಎನ್ನುವ ಉದ್ದೇಶಕ್ಕೆ13800 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಿಸಿ ಖಾಸಗಿ ಶಾಲೆಗಳನ್ನು ಅಭಿವೃದ್ದಿ ಪಡಿಸಲು ಬಿಜೆಪಿ ಸರ್ಕಾರ ಮುಂದಾಗಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಈ ಸಮೇಳನಕ್ಕೆ ಎಲ್ಲಾ ರೈತರು ಪ್ರಗತಿ ಪರರು,ವ್ಯಾಪಾರಸ್ಥರು, ನಾಗರಿಕರು ಸಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದರು.
ನಂತರ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ವೀರನಗೌಡ ಈ ಸಮ್ಮೇಳನದಲ್ಲಿ ಮಾರ್ಗದರ್ಶನ ನೀಡಲು ಅಖಿಲ ಭಾರತ ಕಿಸಾನ್ ಸಂಘದ ರಾಷ್ಟಾಧ್ಯಕ್ಷ ಅಶೋಕ ದಾವಳೆ, ಪ್ರಧಾನ ಕಾರ್ಯದರ್ಶಿ ಅನಾನ ಮುಲ್ಲಾ, ಮತ್ತು ಅಖಿಲ ಭಾರತ ಜಂಟಿ ಕಾರ್ಯದರ್ಶಿ ವಿಜುಕೃಷ್ಣನ್,ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 500 ರೈತ ಹೋರಾಟಗಾರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಮೊದಲ ದಿನ ಸುಮಾರು ಐದು ಸಾವಿರ ರೈತರ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆಯನ್ನು ಟ್ಯಾಗೋರ್ ಪಬ್ಲಿಕ್ ಶಾಲೆ ಮುಂಭಾಗಹೈದ್ರಾಬಾದ್ ಬೈಪಾಸ್ ರೋಡ್ ರಾಯಚೂರುನಲ್ಲಿ ನಡೆಸ ಲಾಗುವುದು.ಈ ಬಹಿರಂಗ ಸಭೆಗೆ ಪ್ರಗತಿ ಪರರು, ಹೋರಾಟಗಾರರು ನಾಗರಿಕರು, ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನರಸಣ್ಣ ನಾಯಕ, ಬಸವಂತರಾಯಗೌಡ, ಶರಬಣ್ಣ ನಾಗಲಾಪುರ, ಬಿ.ಲಿಂಗಪ್ಪ, ಎಂ.ಗೋಪಾಲ ಕೃಷ್ಣ, ಯಂಕಪ್ಪ ಕೆಂಗಲ್, ಕಂಠೆಪ್ಪ, ಅಮರೇಶ ಜಾಲಿಹಳ್ಳಿ, ಶಿವಮೂರ್ತಿ ತಿಡಿಗೊಳ ಸೇರಿದಂತೆ ಇತರರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend