ಖಾದ್ರೀಯಾ ಕಾಲೋನಿಯ ಶಾಲಾ ವಿದ್ಯಾರ್ಥಿಗಳೊಂದಿಗೆ ವನಸಿರಿ ಫೌಂಡೇಶನ್ ಸಂವಾದ ಕಾರ್ಯಕ್ರಮ….!!!

Listen to this article

ಖಾದ್ರೀಯಾ ಕಾಲೋನಿಯ ಶಾಲಾ ವಿದ್ಯಾರ್ಥಿಗಳೊಂದಿಗೆ ವನಸಿರಿ ಫೌಂಡೇಶನ್ ಸಂವಾದ ಕಾರ್ಯಕ್ರಮ.

ಸಿಂಧನೂರು : ಜುಲೈ. 31.ತಾಲೂಕಿನ ಖಾದ್ರಿಯಾ ಕಾಲೋನಿಯ ಶಾಲಾ ವಿದ್ಯಾರ್ಥಿಗಳಿಗೆ ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ ಅವರು ಉಚಿತವಾಗಿ ಸಸಿಗಳನ್ನು ನೀಡಿ ಮಕ್ಕಳಿಂದ ನೆಡುವ ಮೂಲಕ ಪರಿಸರ ಜಾಗೃತಿ ಬಗ್ಗೆ ಸಂವಾಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಅಮರೇಗೌಡ ಮಲ್ಲಾಪೂರ ಅವರ ಪ್ರಶ್ನೆಗೆ ವಿದ್ಯಾರ್ಥಿಗಳಾದ ಕುಮಾರಿ ಸಿಂಧೂ ಪಾಟೀಲ 7 ನೇ ತರಗತಿ, ಮಮತಾ ಪಾಟೀಲ್ 8 ತರಗತಿ,ಸುಶ್ಮಿತಾ 6 ತರಗತಿ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಪಟಪಟನೆ ಉತ್ತರಿಸಿದರು.

ವನಸಿರಿ ಅಮರೇಗೌಡ:- ಮಕ್ಕಳೇ ನಿಮ್ಮ ಹೆಸರೇನು?ನೀವು ಈ ಸಸಿಗಳನ್ನು ಏಕೆ ನೆಡುತ್ತಿದ್ದೀರಿ?

ವನಸಿರಿ:- ಗಿಡಮರಗಳನ್ನು ಕಡಿದವರಿಗೆ, ಮುರಿದವರಿಗೆ ನೀವು ಏನು ಮಾಡುತೀರಿ? ಅವರಿಗೆ ನಿಮ್ಮ ಸಲಹೆ ಏನು ?

ವಿದ್ಯಾರ್ಥಿಗಳು:-ಯಾರು ಗಿಡಗಳನ್ನು ಕಡಿಯುತ್ತಾರೆ ಅವರಿಗೆ ದಂಡ ಹಾಕಿ ಅದೇ ಹಣದಿಂದ ಇನ್ನಷ್ಟು ಸಸಿಗಳನ್ನು ಖರೀದಿಸಿ ಮತ್ತು ಕಡಿದಂತಹ ವ್ಯಕ್ತಿಗಳಿಗೆ 1ಗಿಡಕ್ಕೆ 20ಸಸಿಗಳನ್ನು ಹಚ್ಚಿಸಬೇಕು.

ವನಸಿರಿ:-ಸಸಿಗಳನ್ನು ಹಚ್ಚುವುದರಿಂದ ನಮಗೇನು ಉಪಯೋಗ ಪಡೆಯುತ್ತೇವೆ?

ವಿದ್ಯಾರ್ಥಿಗಳು:- ಗಾಳಿ,ಆಹಾರ, ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೆ ಆಹಾರ ದೊರೆಯುತ್ತದೆ.ಅದು ಹಸಿವನ್ನು ನೀಗಿಸುತ್ತದೆ.

ವನಸಿರಿ:- ವಿಶ್ವಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತಾನಾ?

ವಿದ್ಯಾರ್ಥಿಗಳು:- ಇಲ್ಲಾ ವಿಶ್ವ ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಲ್ಲ, ಇದು ದಿನನಿತ್ತದ ಕಾರ್ಯವಾಗಿರಬೇಕು,ಕೇವಲ ತೋರಿಕೆಗೆ ಮಾತ್ರ ಫೋಟೋಗಳನ್ನು ಹಾಕುವುದು ತಪ್ಪಾಗುತ್ತದೆ, ಆದ್ದರಿಂದ ದಿನನಿತ್ಯ ಮಾಡಬೇಕು,ಈ ಕಾರ್ಯದಲ್ಲಿ ವನಸಿರಿ ಅಮರೇಗೌಡ ಮಲ್ಲಾಪೂರ ಸರ್ ಅವರ ಸೇವೆ ಕೂಡ ತುಂಬಾ ಉತ್ತಮವಾದದ್ದು ಅವರು ದಿನನಿತ್ಯ ಪರಿಸರ ಸೇವೆಯಲ್ಲಿ ತೊಡಗಿರುತ್ತಾರೆ‌ ಅವರಿಗೆ ಧನ್ಯವಾದಗಳು.

ವನಸಿರಿ:- ಇಂದಿನ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಏನು ಹೇಳಲು ಬಯಸುತ್ತೀರಿ?

ವಿದ್ಯಾರ್ಥಿಗಳು:- ಇಂದಿನಿಂದ ಮುಂದಿನ ವಿದ್ಯಾರ್ಥಿಗಳಿಗೆ‌ ನಾವೆಲ್ಲರೂ ಕೂಡಿ ಪ್ರತಿ ರವಿವಾರ ಬೀಜಗಳನ್ನು ಹಾಕಿ ಸಸಿಗಳನ್ನಾಗಿ ಮಾಡೋಣ, ನಂತರ ಮುಂದಿನ ಪ್ರತಿ ರವಿವಾರ ಯಾವ ಯಾವ ಪ್ರದೇಶಗಳಲ್ಲಿ ಸಸಿಗಳಿಲ್ಲವೋ ಅಂತಹ ಪ್ರದೇಶಗಳಲ್ಲಿ ಸಸಿಗಳನ್ನು ನೇಡೋಣ ಮತ್ತು ನಮ್ಮ ಮನೆಯ ಮುಂದೆ ಕೂಡಾ ಸಸಿಗಳನ್ನು ನೇಡೋಣ ಎಂದು ಕೇಳಿಕೊಳ್ಳುತ್ತೇವೆ ಬನ್ನಿ ಎಲ್ಲರೂ ಕೈಜೋಡಿಸಿ ನಮ್ಮ ನಾಡನ್ನು ಹಸಿರೀಕರಣ ಮಾಡೋಣ .

ವನಸಿರಿ:- ದನ್ಯವಾದಗಳು ವಿದ್ಯಾರ್ಥಿಗಳೇ ನಿಮ್ಮ ಸೇವೆ ಹೀಗೆ ಮುಂದುವರೆಯಲಿ.ವನಸಿರಿ ಫೌಂಡೇಶನ್ ಯಾವಾಗಲೂ ನಿಮ್ಮ ಜೊತೆಗೆ ಇರುತ್ತೆ,ಸದಾ ಕಾಲ ಸಸಿಗಳನ್ನು ಉಚಿತವಾಗಿ ನೀಡುತ್ತೇವೆ.

ವನಸಿರಿ:- ವನಸಿರಿ ಫೌಂಡೇಶನ್ ತಂಡದ ಬಗ್ಗೆ ನಿಮ್ಮ ಅನಿಸಿಕೆ ಏನು?

ವಿಧ್ಯಾರ್ಥಿಗಳು :- ವನಸಿರಿ ತಂಡಕ್ಕೆ ಶುಭವಾಗಲಿ, ದನ್ಯವಾದಗಳು ವನಸಿರಿ ತಂಡ ಅಂದರೆ ನಮಗೆ ತುಂಬಾ ಖುಷಿಯಾಗುತ್ತೆ,ನಾವೂ ಕೂಡ ವನಸಿರಿ ತಂಡಕ್ಕೆ ಸೇರಿಕೊಳ್ಳಬೇಕೆಂಬ ಆಸೆ,ನಮಗೆ ತುಂಬಾ ಸಹಕಾರಿಯಾಗಿದೆ,ನಾನು ಯಾವ ಸಮಯದಲ್ಲಾರೂ ಕರೆ ಮಾಡುತ್ತೇನೆ ಒಳ್ಳೆಯ ಮಾಹಿತಿ ಮತ್ತು ತಕ್ಷಣ ಸಸಿಗಳನ್ನು ನೀಡುತ್ತಾರೆ. ಅವರು ತುಂಬಾ ಒಳ್ಳೆಯ ಕಾರ್ಯ ಮಾಡುತ್ತಾರೆ. ಅಮರೇಗೌಡ ಮಲ್ಲಾಪೂರ ಅವರು ವನಸಿರಿ ಫೌಂಡೇಶನ್ ಅದ್ಯಕ್ಷರಾಗಿದ್ದಕ್ಕೆ ತುಂಬಾ ಸಂತೋಷವಾಗುತ್ತೆ ಮತ್ತು ಎಲ್ಲ ವನಸಿರಿ ತಂಡದ ಸದಸ್ಯರಿಗೂ ದನ್ಯವಾದಗಳು ಎಂದರು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ಖಾದ್ರಿಯಾ ಕಾಲೋನಿ ನಿವಾಸಿಗಳಾದ ಡಾ.ಅಲ್ಲಾಬಾಂದ್,ಗಿರ್ದಾವರ, ಎಮ್ .ಡಿ. ಅಕ್ಬರ್, ಕುಪ್ಪಣ್ಣ,ಚನ್ನವೀರಗೌಡ,ಮಣಿಕಂಠ,ಮಂಜುನಾಥ, ವಿದ್ಯಾರ್ಥಿಗಳಾದ ಕುಮಾರಿ ಸಿಂಧೂ ಪಾಟೀಲ್ 7 ನೇ ತರಗತಿ.ಮಮತಾ ಪಾಟೀಲ 8 ತರಗತಿ ಸುಶ್ಮಿತಾ 6 ತರಗತಿ ಉಪಸ್ಥಿತರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend