ಮಾನವ ಕಳ್ಳ ಸಾಗಾಣಿಕೆ ಅಪರಾಧ ಕೃತ್ಯವಾಗಿದೆ – ನ್ಯಾ. ಆಚಪ್ಪ ದೊಡ್ಡಬಸವರಾಜ….!!!

Listen to this article

ಮಾನವ ಕಳ್ಳ ಸಾಗಾಣಿಕೆ ಅಪರಾಧ ಕೃತ್ಯವಾಗಿದೆ – ನ್ಯಾ. ಆಚಪ್ಪ ದೊಡ್ಡಬಸವರಾಜ.

ಸಿಂಧನೂರ : ಜುಲೈ 30 ಮಾನವ ಕಳ್ಳ ಸಾಗಾಣಿಕೆ ಅಪರಾಧ ಕೃತ್ಯವಾಗಿದೆ. ತಡೆಗಟ್ಟುವ ಹಾಗೂ ಕಾನೂನು ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಇದೆ.ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಿದರೆ ಅವರು ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ ಎಂದು 2ನೇ ಆಪರ ಸಿವಿಲ್ ನ್ಯಾಯಾಧೀಶರಾದ ಆಚಪ್ಪ ದೊಡ್ಡ ಬಸವರಾಜ ಹೇಳಿದರು.

ಇಂದು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನ್ಯಾಯ ನಿಮ್ಮದು, ನೆರವು ನಮ್ಮದು ಎಂಬ ಶೀರ್ಷಿಕೆಯಡಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕಂದಾಯ ಇಲಾಖೆ, ತಾಲೂಕು ಪಂಚಾಯತ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ, ಪೋಲಿಸ, ನಗರಸಭೆ, ಸಮಾಜ ಕಲ್ಯಾಣ, ಕಾರ್ಮಿಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ‘ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯ’ ಬಗ್ಗೆ ಕಾನೂನು ಅರಿವು – ನೆರವು ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕಿನ  ಗ್ರಾಮ ಹಾಗೂ ನಗರದಲ್ಲಿ ವಾಸ ಮಾಡುವ ಪ್ರತಿಯೊಂದು ಕುಟುಂಬಗಳ ಸಂಪೂರ್ಣ ಮಾಹಿತಿ ಅಂಗನವಾಡಿ ಕಾರ್ಯಕರ್ತೆಯರ ಬಳಿ ಇರುತ್ತದೆ. ಜೀತ ಪದ್ಧತಿ, ಬಾಲಕಾರ್ಮಿಕ ಪದ್ದತಿ, ವೇಶ್ಯಾವಾಟಿಕೆ, ಬಿಕ್ಷಾಟನೆ ಇವುಗಳನ್ನು ದೂರಪಯೋಗ ಪಡಿಸಿಕೊಂಡು ಮಾನವ ಕಳ್ಳ ಸಾಗಾಣಿಕೆ ದೇಶದಲ್ಲಿ ನಡೆಯುತ್ತಿದ್ದು, ಇದರ ಬಗ್ಗೆ ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಪೋಲೀಸ ಠಾಣೆಗೆ ಮಾಹಿತಿ ನೀಡಬೇಕು ಎಂದರು.

ಮಾನವ ಕಳ್ಳ ಸಾಗಾಣಿಕೆ ದೇಶದಲ್ಲಿ ಕಡಿಮೆ ಯಾಗಿದ್ದು ಇನ್ನೂ ಸ್ವಲ್ಪ ಉಳಿದಿದ್ದು ಅದನ್ನು ಬೇರು ಸಮೇತ ಕಿತ್ತು ಹಾಕುವ ಮೂಲಕ ಮಾನವ ಕಳ್ಳ ಸಾಗಾಣಿಕೆಯ ಮುಕ್ತ ದೇಶವನ್ನಾಗಿ ಮಾಡೋಣ. ಅಂಗನವಾಡಿ ಕಾರ್ಯಕರ್ತೆಯರು ಜೀವನದ ಮೌಲ್ಯಗಳನ್ನು ತಿಳಿದುಕೋಂಡಿದ್ದು ಜನರಿಗೆ ಜೀವನದ ಮೌಲ್ಯಗಳ ಬಗ್ಗೆ ತಿಳಿಸಿಕೊಡಬೇಕು ಕಾನೂನು ಸೇವಾ ಪ್ರಾಧಿಕಾರ ಸಾಮಾಜಿಕ ಕೆಲಸ ಮಾಡಿ ಕಾನೂನು ನೆರವು ಒದಗಿಸಲು ಸದಾ ಭಾಗಿಲು ತೆಗೆದಿರುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೋಟೆಪ್ಪ ಕಾಂಬಳೆ ಮಾತನಾಡಿದರು.

ವಕೀಲೆ ಭಾಗ್ಯವತಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯ ಬಗ್ಗೆ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಒಂದನೆಯ ಆಪರ್ ಸಿವಿಲ್ ನ್ಯಾಯಾಧೀಶರಾದ ಆನಂದಪ್ಪ ಎಂ.ದೊಡ್ಡಮನಿ, ಸಹಾಯಕ ಸರ್ಕಾರಿ ಅಬಿಯೋಜಕರಾದ ಮಾರುತಿ ಕಲ್ಲೂರ,ತಾ.ಪ.ಇಓ. ಲಕ್ಷ್ಮಿದೇವಿ, ಟಿಎಚ್ಓ ಡಾ.ಅಯ್ಯನಗೌಡ ತಹಸೀಲ್ದಾರ ಅರುಣ್ ಹೆಚ್ ದೇಸಾಯಿ, ಬಿಇಓ ಶರಣಪ್ಪ ವಟಗಲ್ , ಸಿಡಿಪಿಓಗಳಾದ ಅಶೋಕ, ಸುದೀಪ ಕುಮಾರ, ನಗರ ಠಾಣೆಯ ಪಿಎಸ್ಐ ಸೌಮ್ಯ, ವಕೀಲರ ಸಂಘದ ಖಜಾಂಚಿ ವೀರಭದ್ರಗೌಡ, ಮರಿಯಪ್ಪ ವಕೀಲರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಾ, ಕಾರ್ಮಿಕರ ಇಲಾಖೆಯ ಗೋಪಾಲ ದೂಪದ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಿಂಗನಗೌಡ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend