ಬೇಡ ಬುಡ್ಗ ಜಂಗಮರು ಅಂದರೆ ಯಾರು?ಸಾಮಾಜಿಕ ಜಾಲಾತಾಣಗಳಲ್ಲಿ ಬಿಡುಗಡೆ…!!!

Listen to this article

ಬೇಡ ಬುಡ್ಗ ಜಂಗಮರು ಅಂದರೆ ಯಾರು?ಸಾಮಾಜಿಕ ಜಾಲಾತಾಣಗಳಲ್ಲಿ ಬಿಡುಗಡೆ.

ಸಿಂಧನೂರು :ಜುಲೈ 26.ರಾಜ್ಯದಲ್ಲಿ ಬೇಡ ಜಂಗಮ ಹಾಗೂ ಬುಡ್ಗ ಜಂಗಮರು ಮೀಸಲಾತಿಗಾಗಿ ಜುಲೈ 25 ರಂದು ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿಯ ಭಾಗವಾಗಿ, ಆಯಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಹೋರಾಟ ನಡೆಯುತ್ತಿದೆ.

ವಿರಶೈವರು ನಾವು ಬೇಡ ಜಂಗಮರೆಂದು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿ ಎಂಬ ಹೋರಾಟ ಒಂದುಕಡೆ ನಡೆದಿದೆ. ಹಾಗಾಗಿ ಬೇಡ ಬುಡ್ಗ ಜಂಗಮರು ಅಂದರೆ ಯಾರು? ಅವರ ಬದುಕು ಯಾವ ತರವಿದೆ ಎಂಬಂತಹ ವಿವರವಾದ ಹಾಡನ್ನು ಕ್ರಾಂತಿಕಾರಿ ಮತ್ತು ಜನಕವಿಗಳಾದ ಸಿ.ದಾನಪ್ಪ ನಿಲೋಗಲ್ ಅವರು ಕಟ್ಟಿಕೊಟ್ಟಿದ್ದಾರೆ. ಆ ಹಾಡನ್ನು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ-ಆರ್ ಸಿಎಫ್ ದಿಂದ ಶ್ರೀಷಾ ಮೇಲೋಡಿಸ್ ರೆಕಾರ್ಡಿಂಗ್ ಸೆಂಟರ್ ಸಿಂಧನೂರಿನಲ್ಲಿ ಕುಮಾರಿ ರಂಗಮ್ಮ ಗಲಗ ಆರ್ ಜಿ ಮೇಲೋಡಿಸ್ ಹಾಡಿದರು.

ಈ ಸಂದರ್ಭದಲ್ಲಿ ಎಂ.ಗಂಗಾಧರ, ಪಲ್ಲವಿ ಗಜೇಂದ್ರಗಡ, ಸುಮಾ ಸಿಂಧನೂರು,ಬಸವರಾಜ ಬಾದರ್ಲಿ, ವಿರೇಶ ದೇವರಮನಿ, ಹೆಚ್.ಆರ್. ಹೊಸಮನಿ ಕೋರಸ್ ನೀಡಿದ್ವನಿಮುದ್ರಣಗೊಂಡು ನಾಡಿನ ಬೇಡ ಹಾಗೂ ಬುಡ್ಗ ಜಂಗಮ ಜನತೆಗೆ ಸಾಮಾಜಿಕ ಜಾಲಾತಾಣಗಳ ಮೂಲಕ ಬಿಡುಗಡೆ ಗೊಳಿಸಲಾಯಿತು. ಈ ಸಂದರ್ಭದಲ್ಲಿ ವಿಜಯಕುಮಾರ ವರದಿಗಾರರು ಶ್ಯಾಮೀದ್ ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend