ಸೈನಿಕರ ಹೋರಾಟ ಹಾಗೂ ತ್ಯಾಗ ಸದಾ ಸ್ಮರಣೀಯ _ ಶಂಕರ ದೇವರು ಹಿರೇಮಠ…!!!

Listen to this article

ಸೈನಿಕರ ಹೋರಾಟ ಹಾಗೂ ತ್ಯಾಗ ಸದಾ ಸ್ಮರಣೀಯ _ ಶಂಕರ ದೇವರು ಹಿರೇಮಠ

ಸಿಂಧನೂರು : ಜುಲೈ. 26. ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದುಗ್ಗಮ್ಮನಗುಂಡ ಗ್ರಾಮದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸಿಂಧನೂರು ಹಾಗೂ ಚಿಕ್ಕಯ್ಯ ಪಂಡಿತ್ ಕಬ್ ಘಟಕ ವತಿಯಿಂದ ಕಾಗಿ೯ಲ್ ವಿಜಯೋತ್ಸವ ದಿನವನ್ನು ಶಾಲೆಯಲ್ಲಿ ಆಚರಣೆ ಮಾಡಲಾಯಿತು.

ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರೆಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶಂಕರ ದೇವರು ಹಿರೇಮಠ ಅವರು ಮಾತಾಡಿದರು.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೈನಿಕರು ವೀರಾವೇಶದಿಂದ, ದೇಶಪ್ರೇಮದಿಂದ ಹೋರಾಡಿದ ಫಲವಾಗಿ, ಅವರ ತ್ಯಾಗದ ಫಲವಾಗಿ ಅಂದು ಕಾರ್ಗಿಲ್ ಯುದ್ಧದಲ್ಲಿ ಗೆಲುವನ್ನು ಸಾಧಿಸಲು ಸಾಧ್ಯವಾಯಿತು. ಆಪರೇಷನ್ ವಿಜಯ ಹೆಸರಿನೊಂದಿಗೆ ಪ್ರಾರಂಭವಾದ ಯುದ್ದ ಜುಲೈ ೨೬ ,೧೯೯೯ ರಂದು ಭಾರತ ದೇಶ ಯುದ್ಧದಲ್ಲಿ ಜಯಗಳಿಸುವ ಮೂಲಕ ಸೈನಿಕರು ವಿಜಯದ ನಗೆ ಬೀರಿದರು. ಕಾರ್ಗಿಲ್ ವಿಜಯೋತ್ಸವ ದಿನ ಇಂದು ನಾವು ಸೈನಿಕರ ತ್ಯಾಗ, ಬಲಿದಾನಗಳನ್ನು ಸ್ಮರಿಸಬೇಕು ಸೈನಿಕರನ್ನು ಗೌರವಿಸುವ ಕಾರ್ಯ ಆಗಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಹ ಶಿಕ್ಷಕರಾದ ವಿರುಪಾಕ್ಷಪ್ಪ ಅವರು ಮಾತನಾಡಿ ವಿದ್ಯಾರ್ಥಿಗಳು ಸೈನಿಕರ ಕಾರ್ಯದಕ್ಷತೆ ಯನ್ನು ಹಾಗೂ ಅವರ ದೇಶಪ್ರೇಮವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು

ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಆಚರಣೆ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರು,ಪಾಲಕರು ಮತ್ತು ಶಾಲೆಯ ಅಡುಗೆ ಸಿಬ್ಬಂದಿ ವರ್ಗದವರು, ಕಬ್ಸ್, ಬುಲ್-ಬುಲ್ಸ್ ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮೋನಮ್ಮ ಸ್ವಾಗತಿಸಿದರು, ಭವಾನಿ ಪ್ರಾರ್ಥನೆ ಹಾಡಿದರು, ಕುಮಾರಿ ಭಾಗ್ಯ ವಂದಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend