ನೂತನ ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿ ರಾವ್ ಗೆ ಸನ್ಮಾನ …!!!

Listen to this article

ನೂತನ ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿ ರಾವ್ ಗೆ ಸನ್ಮಾನ .

ಸಿಂಧನೂರು : ಜುಲೈ. 26.ಇಂದು ಬಿಜೆಪಿ ಕಾರ್ಯಾಲಯದಲ್ಲಿ ಕಾಡಾ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕಛೇರಿಗೆ ಆಗಮಿಸಿದ ಕೊಲ್ಲಾ ಶೇಷಗಿರಿರಾವ್ ಅವರನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೊಲ್ಲಾ ಶೇಷಗಿರಿ ರಾವ್ ಅವರು ರೈತ ಕುಟುಂಬದಿಂದ ಬಂದಿದ್ದ ನಾನು ಚನ್ನಳ್ಳಿ ಗ್ರಾಮದ ನೀರು ಬಳಕೆದಾರರ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ 2003 ರಲ್ಲಿ ಕನಕಗಿರಿಯಲ್ಲಿ ಪಕ್ಷದ ಕಾರ್ಯಕರ್ತನಾಗಿ, ಮಂಡಲ ಅಧ್ಯಕ್ಷನಾಗಿ ನಂತರ ನನ್ನ ರಾಜಕೀಯ ಗುರುಗಳ ಆದೇಶದ ಮೇರೆಗೆ 2013 ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಬಂದು ಪಕ್ಷವನ್ನು ಸಂಘಟಿಸಿ ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋಲು ಅನುಭವಿಸಿ ಜನರ ತೀರ್ಪಿಗೆ ತಲೆಬಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದೇನೆ. ಆ ನಿಷ್ಟೆಗೆ ಇಂದು ಕಾಡಾ ಅಧ್ಯಕ್ಷನಾಗಬೇಕಾದರೆ ಭಗವಂತನ ಇಚ್ಛೆಯಿರಬೇಕು, ನನ್ನ ಪಕ್ಷ ನಿಷ್ಟೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ನವೀನ್ ಕುಮಾರ ಕಟೀಲ್ , ಬಿ.ಎಲ್.ಸಂತೋಷ ನನಗೆ ಒಂದು ಸುವರ್ಣ ಅವಕಾಶ ಮಾಡಿಕೊಟ್ಟಿದ್ದಾರೆ. ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಹಿರಿಯ ಮುಖಂಡರ , ರೈತ ಮುಖಂಡರ ವಿಶ್ವಾಸಕ್ಕೆ ತೆಗೆದುಕೊಂಡು ನಿಷ್ಟೆಯಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಜನರ ಹಿತಕ್ಕಾಗಿ ಹಾಗೂ ತಾಲೂಕಿನ ರೈತರ ಹಿತ ಕಾಪಾಡುವ ಕೆಲಸ ಮಾಡುತ್ತೇನೆ.ಇದಲ್ಲದೇ ತಾಲೂಕಿಗೆ ದೊರೆಯಬೇಕಾದ ಸೌಲಭ್ಯವನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಈ ಭಾಗದ ನೀರಾವರಿಗೆ ಆಧ್ಯತೆ ನೀಡುತ್ತೇನೆ ಎಂದರು.

ನಂತರ ಮಾತನಾಡಿದ ಶಿವನಗೌಡ ಗೋರೆಬಾಳ ಪಕ್ಷದ ಏಳ್ಗೆಗಾಗಿ ಸಾಕಷ್ಟು ದುಡಿದಿದ್ದಾರೆ. ಇವರ ಸೇವೆಯನ್ನು ಮನಗಂಡು ಅಧಿಕಾರ ನೀಡಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಕಾರ್ಯಕರ್ತರಿಗೆ ಹೇಳಿದರು.

ಈ ಸಂದರ್ಭದಲ್ಲಿ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಮದ್ವರಾಜ ಆಚಾರ್ಯ, ಗ್ರಾಮೀಣ ಮಂಡಲ ಅಧ್ಯಕ್ಷ ಹನುಮೇಶ ಸಾಲುಗುಂದಾ, ಸತ್ಯನಾರಾಯಣ ದೇಶಪಾಂಡೆ, ಶಿವರಾಜ ಪಾಟೀಲ, ಪರಮೇಶಪ್ಪ, ನಲ್ಲ ವೇಂಕಟೇಶ್ವರಾವ್, ನೀರುಪಾದಿ ಜೋಳದರಾಶಿ, ಸಿದ್ದು ಹೂಗಾರ, ಪ್ರೇಮಾ ಸಿದ್ದಾಂತಿಮಠ, ಸುಬ್ಬರಾವ್, ಕೆ. ಸತ್ಯನಾರಾಯಣ, ಕೆ. ಶ್ರೀನಿವಾಸ, ರಾಜಶೇಖರ ಹಿರೇಮಠ, ಲಿಂಗರಾಜ ಹಲಗಿ, ಹನುಮೇಶ ನಾಯಕ, ನಾಗರಾಜ, ಜಿ. ಸುರೇಶ, ಮೌನೇಶ, ಸಂಗನಗೌಡ, ಇನ್ನೂ ಅನೇಕರು ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend