ರೈತರ ಸಾಗುವಳಿ ಭೂಮಿ ಪಟ್ಟ,ನಿವೇಶನ ಹಕ್ಕು ಪತ್ರಕ್ಕಾಗಿ ಅನಿರ್ದಿಷ್ಟಾವಧಿ ದರಣಿ ಸತ್ಯಾಗ್ರಹ…!!!

Listen to this article

ರೈತರ ಸಾಗುವಳಿ ಭೂಮಿ ಪಟ್ಟ,ನಿವೇಶನ ಹಕ್ಕು ಪತ್ರಕ್ಕಾಗಿ ಅನಿರ್ದಿಷ್ಟಾವಧಿ ದರಣಿ ಸತ್ಯಾಗ್ರಹ.

ಸಿಂಧನೂರ ಜುಲೈ 19.ಮಸ್ಕಿ ಹಾಗೂ ಸಿಂಧನೂರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳ ಬಗರ್ ಹುಕಂ ರೈತರ ಸಾಗುವಳಿ ಭೂಮಿಗೆ ಪಟ್ಟಾ ಹಾಗೂ ನಿವೇಶನ ಹಕ್ಕುಪತ್ರ ಕೊಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಅಗ್ರಹಿಸಿ ಕರ್ನಾಟಕ ರೈತ ಸಂಘ ದಿಂದ ಇಂದು ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಿದರು.

ನಗರದ ಎಪಿಎಂಸಿ ಗಣೇಶ ಗುಡಿಯಿಂದ ಆರಂಭ ಗೊಂಡ ಪ್ರತಿಭಟನೆ ಮೆರವಣಿಗೆ ನಗರದ ಪ್ರಮುಖ ಸರ್ಕಲ್ ಗಳಲ್ಲಿ ಮೆರವಣಿಗೆಯ ನಡೆಸಿ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆ ಮೆರವಣಿಗೆ ಗಾಂಧಿ ಸರ್ಕಲ್ ಗೆ ಬಂದು ರಸ್ತೆತಡೆ ನಡೆಸಿ ಸರ್ಕಾರದ ಆದೇಶಗಳನ್ನು ಅಧಿಕಾರಿಗಳು ಪಾಲಿಸದೆ ನಿರ್ಲಕ್ಷ್ಯ ಮಾಡಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸಿಂಧನೂರ ಹಾಗು ಮಸ್ಕಿ ವಿಧಾನ ಸಭಾದ ಶಾಸಕರು ಜನವಿರೋಧಿ ಕೆಲಸ ಮಾಡದೇ ಜನ ಪರ ಕೆಲಸ ಮಾಡಬೇಕು ಇಲ್ಲದಿಧ್ಧರೇ ಮುಂದಿನ ದಿನ ಗಳಲ್ಲಿ ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಡಿ.ಎಚ್ ಫೂಜಾರಿ ಶಾಸಕರುಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ರಮೇಶ ಪಾಟೀಲ್ ಬಿ.ಎನ್. ಯರದಿಹಾಳ, ಚಿಟ್ಟಿಬಾಬು , ಸಂತೋಷ ಹಿರೆಧಿನ್ನಿ, ಬಸವರಾಜ ಬಾದರ್ಲಿ, ಅಮೀನ ನದಾಫ್, ಶ್ರೀನಿವಾಸ ಬುಕ್ಕನಟ್ಟಿ, ಮಾರುತಿ ಜಿನ್ನಾಪುರ ಸೇರಿದಂತೆ ಇತರರು ಪ್ರತಿಭಟನೆ ಧರಣಿಯಲ್ಲಿ ಪಾಲ್ಗೊಂಡಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend