ಕೆ. ಆರ್. ಎಸ್. ಪಕ್ಷದ ತಾಲೂಕು ಕಾರ್ಯಕರ್ತರ ಸಭೆ ಯಶಸ್ವಿ…!!!

Listen to this article

ಕೆ. ಆರ್. ಎಸ್. ಪಕ್ಷದ ತಾಲೂಕು ಕಾರ್ಯಕರ್ತರ ಸಭೆ ಯಶಸ್ವಿ.

ಸಿಂಧನೂರು :ಜುಲೈ. 18.ತಾಲೂಕಿನ ಪ್ರವಾಸಿ ಮಂದಿರದಲ್ಲಿ ನಡೆದ KRS ಪಕ್ಷದ ಸರ್ವ ಕಾರ್ಯಕರ್ತರ ಸಭೆ ನಡೆಯಿತು.

ಇದೇ ತಿಂಗಳು 26 ರಂದು KRS ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದ ಜನ ಚೈತನ್ಯ ಯಾತ್ರೆ ಸಿಂಧನೂರು ನಗರಕ್ಕೆ ಆಗಮಿಸುತಿದ್ದು ಯಾತ್ರೆಯ ಭಾಗವಾಗಿ ಕಾರ್ಯಕರ್ತರ ಸಮ್ಮುಖದಲ್ಲಿ ಕೆಲವು ಚರ್ಚೆಗಳು ನಡೆದವು.

ತಾಲೂಕು ಅಧ್ಯಕ್ಷ ವೀರಭದ್ರಯ್ಯ ಎಸ್ ಮಾತನಾಡಿ ಸ್ವಚ್ಚ, ಪ್ರಾಮಾಣಿಕ, ಪ್ರಾದೇಶಿಕ, ಜನಪರ ರಾಜಕಾರಣಕ್ಕೆ KRS ಪಕ್ಷ ಹಗಲಿರುಳು ರಾಜ್ಯಾದ್ಯಂತ ಶ್ರಮಿಸುತ್ತಿದೆ, ಅದೇ ತರಹ ತಾಲೂಕಿನ ಸಮಗ್ರ ಅಭಿವೃದ್ಧಿಗೆ KRS ಪಕ್ಷದ ತಾಲೂಕ ಕಾರ್ಯಕರ್ತರು ಶ್ರಮಿಸಬೇಕು, ತಾಲೂಕಿನ ಸರ್ಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ,ಲಂಚಾವತಾರ ಹಾವಳಿಯನ್ನು ತಡೆದು ಜನ ಸಾಮಾನ್ಯರಿಗೆ ನ್ಯಾಯ ಕೊಡಿಸುವ ಕೆಲಸ KRS ಪಕ್ಷ ಮಾಡಲಿದೆ.ಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ ಚುನಾವಣೆಗೆ KRS ಪಕ್ಷ ಸ್ಪರ್ಧೆ ಮಾಡಲಿದೆ ಚುನಾವಣಾ ಆಸಕ್ತರಿಗೆ ಪಕ್ಷವು ಸ್ಪರ್ದೆ ಮಾಡಲು ಅವಕಾಶ ನೀಡಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಶರಣಬಸವ ಹಂಚಿನಾಳ ಮಾತನಾಡಿ 2023 ರ ವಿಧಾನಸಭಾ ಚುನಾವಣೆಯಲ್ಲಿ KRS ಪಕ್ಷದ ಅಭ್ಯರ್ಥಿಯಾದ ನಿರುಪಾದಿ ಕೆ ಗೋಮರ್ಸಿ ಅವರನ್ನು ಕ್ಷೇತ್ರದ ಜನ ಬೆಂಬಲಿಸಬೇಕು ತಾಲೂಕಿನ ಸಮಗ್ರ ಅಭಿವೃದ್ಧಿಗೆ KRS ಪಕ್ಷ ಯಾವುದೇ ಜಾತಿ, ಕುಲ, ಮತ ,ಧರ್ಮ ಎನ್ನದೆ ಸರ್ವರಿಗೂ ಸಮ ಬಾಳು ಎಂದು ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಕೊಡಿಸುವ ನಿಟ್ಟಿನಲ್ಲಿ KRS ಪಕ್ಷ ಕೆಲಸ ಮಾಡಲಿದೆ ಎಂದು ತಿಳಿಸಿದರು .

ತಾಲೂಕ ಯುವ ಘಟಕದ ಅಧ್ಯಕ್ಷ ವಿವೇಕಾನಂದ ಮಾತನಾಡಿ ರಾಜ್ಯದ ಮೂಲೆ ಮೂಲೆಗೂ KRS ಪಕ್ಷದ ಹಬ್ಬಿದೆ ಜೊತೆಗೆ ಪ್ರತಿನಿತ್ಯ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಜನ ಸಾಮಾನ್ಯರ ದ್ವನಿಯಾಗಿ ನಾಡಿನಲ್ಲಿ ಅತೀ ದೊಡ್ಡ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಿದೆ ಹಾಗಾಗಿ ಸಿಂಧನೂರಿನ ಎಲ್ಲ ಯುವ ಮಿತ್ರರು KRS ಪಕ್ಷದ ಸದಸ್ಯತ್ವ ಪಡೆಯಬೇಕು ಹಾಗೂ ಯುವ ಶಕ್ತಿಯು ಹೊಂದಾಗಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲೂಕ ಪ್ರಧಾನ ಕಾರ್ಯದರ್ಶಿ ಶರಣಬಸವ ಗೋರೆಬಾಳ, ತಾಲೂಕ ಯುವ ಘಟಕದ ಉಪಾಧ್ಯಕ್ಷ ನಾಗರಾಜ, ತಾಲೂಕ SC ST ಘಟಕದ ಅಧ್ಯಕ್ಷ ಸಣ್ಣಬಸವ ಅಲಬನೂರು, ಸಂಘಟನಾ ಕಾರ್ಯದರ್ಶಿ ಹುಸೇನಪ್ಪ ಬಾದರ್ಲಿ ಹಾಗೂ ಪಕ್ಷದ ವಿವಿಧ ಪದಾಧಿಕಾರಿಗಳು ,ಯುವ ಮುಖಂಡರು ಹಾಗೂ ತಾಲೂಕಿನ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend