ಶಾರ್ಟ್ ಸರ್ಕ್ಯೂಟ್ ನಿಂದ ನೂಲಿನ ಕಾರ್ಖಾನೆ ಬೆಂಕಿಗಾಹುತಿ…!!!

Listen to this article

ಶಾರ್ಟ್ ಸರ್ಕ್ಯೂಟ್ ನಿಂದ ನೂಲಿನ ಕಾರ್ಖಾನೆ ಬೆಂಕಿಗಾಹುತಿ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಲಕ್ಷ್ಮೀ ನಗರದ ಶಶಿಕಾಂತ್ ಪಟ್ಟನ್ ಅವರ ಕಾರ್ಖಾನೆಯಲ್ಲಿ ಬೆಳಿಗ್ಗೆ 6:00 ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಲಕ್ಷಾಂತರ ಮೌಲ್ಯದ ಬೆಲೆಬಾಳುವ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.ಪ್ರತಿದಿನ ದಿನ ಬೆಳಿಗ್ಗೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ಕಾರ್ಮಿಕರು ಬರುವ ಸಂದರ್ಭದಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ಕಂಡು ತಕ್ಷಣ ಕಾರ್ಖಾನೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಕಾರ್ಖಾನೆ ಮಾಲೀಕ ಶಶಿಕಾಂತ್ ಪಟ್ಟಣ ಗಾಬರಿಗೊಂಡು ನಗರದ ಸ್ಥಳೀಯ ಅಗ್ನಿಶಾಮಕ ದಳಕ್ಕೆ ಫೋನ್ ಮುಖಾಂತರ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಶತಪ್ರಯತ್ನ ಮಾಡಿದರು. ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುವಷ್ಟರಾಗಲೆ ಬೆಂಕಿ ಹೆಚ್ಚಿದ್ದರಿಂದ ಕಾರ್ಖಾನೆ ಹೊತ್ತಿ ಉರಿದಿದ್ದು ಅಗ್ನಿಶಾಮಕ ದಳ ಬೆಂಕಿ ನಂದಿಸಲು
ಯಶಸ್ವಿಯಾದರು ಪ್ರಯೋಜನವಾಗದೆ ಲಕ್ಷಾಂತರ ಮೌಲ್ಯದ ಎಲ್ಲ ನೂಲಿನ
ಕಚ್ಚಾ ಸಾಮಗ್ರಿ ಬೀಮ ,ಪೇಟೆ , ವಿದ್ಯುತ್ ಮೀಟರ್ ಬೋರ್ಡ್, ಜಕಾಡರ್ ಸೆಟ್ಟ ಇನ್ನೂ ಅನೇಕ ವಸ್ತುಗಳು ಸುಟ್ಟು ಕರಕಲಾಗಿದ್ದವು. ಈ ಕುರಿತು ಬನಹಟ್ಟಿಯ ಸ್ಥಳೀಯ ಪೊಲೀಸ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬೇಟಿ ನೀಡಿ ವಿಚಾರಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಕಾರ್ಖಾನೆ ಮಾಲೀಕನ ಅಳಲು
ಕಾರ್ಖಾನೆಯ ಮಾಲೀಕ ಶಶಿಕಾಂತ್ ಪಟ್ಟಣ ಕಾರ್ಖಾನೆಯಲ್ಲಿ ಬೆಂಕಿಗೆ ಅಂದಾಜು ಮೊತ್ತ 10 ರಿಂದ 15 ಲಕ್ಷದವರೆಗೆ ಬೆಂಕಿಗಾಹುತಿಯಾಗಿವೆ ಎಂದು ತಮ್ಮ ಅಳಲು ತೋಡಿಕೊಂಡರು.

ವರದಿ.
ಬಸವರಾಜ ನಂದೆಪ್ಪನವರ ಬನಹಟ್ಟಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend