ಸೂಕ್ತ ಕ್ರಮತೆಗೆದುಕೊಳ್ಳದಿದ್ದರೆ ರಸ್ತೆ ರೋಕ್ ಚಳುವಳಿ ಮಾಡಲಾಗುವುದು- ಸಂತೋಷಗೌಡ…!!!

Listen to this article

ಸೂಕ್ತ ಕ್ರಮತೆಗೆದುಕೊಳ್ಳದಿದ್ದರೆ ರಸ್ತೆ ರೋಕ್ ಚಳುವಳಿ ಮಾಡಲಾಗುವುದು- ಸಂತೋಷಗೌಡ.

ಸಿಂಧನೂರ : ಪಂಚಾಯ್ತಿಯಲ್ಲಿ ಪಿಡಿಓ ದಿಂದ ಹಿಡಿದು ಸಿಬ್ಬಂದಿಗಳು ವೇತನವನ್ನು ಪಡೆದುಕೊಳ್ಳುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬಾರದೇ ಜನಸಾಮಾನ್ಯರನ್ನು ಅಲೆದಾಡುವಂತೆ ಮಾಡುತ್ತಾರೆ. ಸದಸ್ಯರ ಒಪ್ಪಿಗೆ ಇಲ್ಲದ ಕಾಮಗಾರಿಗಳಿಗೆ ಎನ್.ಎಮ್. ಆರ್. ‌ತೆಗೆಯಬಾರದೆಂದು ಮೌಖಿಕವಾಗಿ ಸದಸ್ಯರೆಲ್ಲ ಸೇರಿ ಮನವಿ ಪತ್ರದ ಮುಖಾಂತರ ಮೇಲಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ, ಇದನ್ನು ಸರಿಪಡಿಸದೇ ಹೋದರೆ ಪಂಚಾಯ್ತಿ ಬೀಗ ಜಡಿದು ರಸ್ತೆ ರೋಕ್ ಚಳುವಳಿ ಮಾಡಲಾಗುವುದೆಂದು ಗ್ರಾ. ಪಂ. ಸದಸ್ಯರಾದ ಸಂತೋಷಗೌಡ ಹೇಳಿದರು.

ನಗರದ ಗ್ರಾ ಪಂ.ಮುಂದೆ ಸದಸ್ಯರೆಲ್ಲರು ಸೇರಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರಿಕೆ ಹೇಳಿಕೆ ಮುಖಾಂತರ ಮನವಿ ಮಾಡಿದರು.

ಗೋರೆಬಾಳ ಗ್ರಾಮ ಪಂಚಾಯಿತಿ ಪಿಡಿಓ ರವರು ಹಿಟ್ಲರ್ ತರ ನಡೆದುಕೊಳುತ್ತಿದ್ದಾರೆ. ಯಾವುದೇ ಸದಸ್ಯರಿಗೆ ಗೌರವ ಕೊಡುತ್ತಿಲ್ಲ, ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಂಚಾಯ್ತಿಯಲ್ಲಿ ಒದಗಿಸಿದ್ದರು ಸಹ ಯಾವುದೇ ಕೆಲಸ ಮಾಡಿಸಿಕೊಳ್ಳಬೇಕಾದರೆ ಪಂಚಾಯ್ತಿಯಲ್ಲಿ ಇರದೇ ಪ್ರತಿ ಕೆಲಸಕ್ಕೆ ಪಿಡಿಓ ರವರಿಗೆ ಪೋನ ಮಾಡಿದರೆ ನಗರದ ಖಾಸಗಿ ಕಂಪ್ಯೂಟರ್ ಸೆಂಟರ್ ಗೆ ಬರಲು ಹೇಳುತ್ತಾರೆ.ತ್ಯಾಜ್ಯ ಕಸ ವಿಲೇವಾರಿ ವಾಹನ ಇದ್ದರು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ, ಗ್ರಾಮದಲ್ಲಿ ಜಾತ್ರೆ ಸಂಧರ್ಭದಲ್ಲಿ ಸದಸ್ಯರೆ ತಮ್ಮ ವ್ಯಯಕ್ತಿಕ ಹಣದಿಂದ ಕಸ ವಿಲೇವಾರಿ ಮಾಡಿಸಿದ್ದೇವೆ. ಎರಡು ಕಡೆ ಕೆಲಸ ಮಾಡುತ್ತಿರುವುದರಿಂದ 20 ದಿನವಾದರೂ ಪಂಚಾಯ್ತಿಗೆ ಬಂದಿಲ್ಲ ಆದರಿಂದ ಪಂಚಾಯ್ತಿಗೆ ಖಾಯಂ ಪಿಡಿಓ ನೇಮಕಮಾಡಿಕೊಳ್ಳಬೇಕು ಎಂದರು.

ಗೊರೇಬಾಳ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆಯಲ್ಲಿ 2020-21 ಮತ್ತು 2021-22 ರ ಸಾಲಿನ ಅನುಮೋದಿಸಲಾದ ಕ್ರಿಯಾ ಯೋಜನೆ ಮತ್ತು ಹೆಚ್ಚುವರಿ ಕ್ರಿಯಾ ಯೋಜನೆ ಸದಸ್ಯರ ಗಮನಕ್ಕೆ ತರದೇ ಗ್ರಾಮ ಸಭೆ ಮತ್ತು ಪಂಚಾಯತಿಯ ಸಭೆ ನಡೆಸದೇ ಮಾಡಿದ ಕ್ರಿಯೆ ಯೋಜನೆಯಾಗಿರುತ್ತದೆ.ಆದ ಕಾರಣ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ ಧೋರಣೆ ವಹಿಸಿರುವುದು ಕಂಡು ಬಂದಿರುತ್ತದೆ. ಆದಕಾರಣ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದಿ.ಮಾರ್ಚ್ 17 ರಂದು ಮನವಿ ಪತ್ರ ಸಲ್ಲಿಸಿದ್ದು, ಒಂದು ವಾರಗಳು ಕಳೆದರು ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ಗ್ರಾ.ಪಂ.ಸದಸ್ಯರಾದ ಲಕ್ಷ್ಮಣರಾವ್ ಆರೋಪ ಮಾಡಿದರು.

ಒಂದು ವರ್ಷ ಕಳೆದರೂ ಗ್ರಾ.ಪಂ. ಸದಸ್ಯರಿಗೆ ಮಾಸಿಕ ವೇತನವನ್ನು ನಿಡಿರುವುದಿಲ್ಲ. ಪಂಚಾಯತ ಸಪಾಯಿ ಸಿಬ್ಬಂದಿ ಗಳಿಗೆ 9 ತಿಂಗಳು ಕಳೆದರೂ ವೇತನವನ್ನು ಕೊಟ್ಟಿಲ್ಲ ಎಂದು ಸುದ್ದಿ ತಿಳಿದು ಪಂಚಾಯ್ತಿಗೆ ಆಗಮಿಸಿದ ಎಡಿಎ ಮನೋಹರ ರವರ ಮುಂದೆ ಸದಸ್ಯರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.

ಜನರಿಂದ ಜನರಿಗಾಗಿ ಚುನಾಯಿತರಾದ ಸದಸ್ಯರು ಗ್ರಾಮದ ಅಭಿವೃದ್ಧಿಗಾಗಿ ಕೆಲಸವನ್ನು ಗ್ರಾಮ ಸಭೆಯಲ್ಲಿ ಇಟ್ಟ ಕೆಲಸವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಮ್ಮ ಮನಸೋ ಇಚ್ಛೆ ಬದಲಾವಣೆ ಮಾಡಿ ಸದಸ್ಯರ ಗಮನಕ್ಕೆ ತರದೇ ಕ್ರಿಯಾ ಯೋಜನೆ ರೂಪಿಸುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದರ ಬಗ್ಗೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸಿಇಓ ರಾಯಚೂರು ರವರು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ.ಸದಸ್ಯರಾದ ವಿಜಯ ಭಂಡಾರಿ ಪತ್ರಿಕಾಗೋಷ್ಟಿ ಮೂಲಕ ಮನವಿ ಮಾಡಿದರು.

ಪಂಚಾಯ್ತಿಕರವಸುಲಿಗಾರನಾಗಿ ಕೆಲಸ ಮಾಡುತ್ತಿದ್ದ ದುಶ್ವಾಂತ ಮರಣ ಹೊಂದಿದ್ದರು ಅವರ ಹೆಸರು ಮತ್ತು ಆದಪ್ಪ ಅಂಗಡಿ ಕಾರ್ಯದರ್ಶಿ, ಅಯ್ಯನಗೌಡ ದ್ವಿ.ದ.ಸಹಾಯಕ ಇಬ್ಬರು ವರ್ಗಾವಣೆ ಗೊಂಡರು,ಅವರ ಹೆಸರನ್ನು ಇನ್ನೂ ತೆಗೆದು ಹಾಕಿಲ್ಲ, ನೀರು ನೈರ್ಮಲ್ಯ ಸಮಿತಿ ರಚನೆ ಮಾಡಿ ಒಂದು ವರ್ಷವಾದರೂ ನಾಮಫಲಕದಲ್ಲಿ ಹೆಸರು ಬರೆಸಿಲ್ಲದಿರುವುದು ಕಂಡು ಬಂತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ದೇವಪ್ಪ, ಸದಸ್ಯರುಗಳಾದ ದೇವೇಂದ್ರಗೌಡ,ರಾಜು ಪಾಸ್ಪರ್,ಶ್ರೀನಿವಾಸ, ರಾಮಕೃಷ್ಣ,ಗಣೇಶ, ಗೋಪಿ, ಶಾಂಬಶಿವರಾವ್,ಇನ್ನೂ ಅನೇಕ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend