ಅರ್ಜಿದಾರರಿಂದಲೇ ಫಲಾನುಭವಿಗಳ ಆಯ್ಕೆ : ಭೂತಲದಿನ್ನಿ…!!!

Listen to this article

ಅರ್ಜಿದಾರರಿಂದಲೇ ಫಲಾನುಭವಿಗಳ ಆಯ್ಕೆ : ಭೂತಲದಿನ್ನಿ.
ಸಿಂಧನೂರು : ತಾಲೂಕಿನ ಬೂತಲದಿನ್ನಿ ಗ್ರಾಮ ಪಂಚಾಯಿತಿಯಲ್ಲಿ ಜೋಪಡಿಗಳಲ್ಲಿ ವಾಸಿಸುತ್ತಿರುವ ಪ್ರತಿ ಕುಟುಂಬದ ಮಹದಾಸೆ ಅಂದರೆ ಸ್ವಂತದೊಂದು ಸೂರು ಹೊಂದಬೇಕು ಎಂಬುದು. ಗುಡಿಸಲು ಮುಕ್ತ ರಾಜ್ಯ ಮಾಡುವ ಗುರಿ ಸರ್ಕಾರ ಯೋಜನೆಯಾಗಿತ್ತು .ನಿರ್ಗತಿಕ ಕುಟುಂಬಗಳಲ್ಲಿ ಹೊಸ ಆಸೆ ಪ್ರತಿ ಬಾರಿ ಚಿಗುರೊಡೆಯುತ್ತದೆ. ಹಲವು ವರ್ಷಗಳ ನಂತರ ಆಸೆ ಚಿಗಿರಿತು.ಬಡಜನರ ವಸತಿ ಯೋಜನೆಯಲ್ಲಿ 2021-22 ನೇ ಸಾಲಿನಲ್ಲಿ ಬಸವ ವಸತಿ ಯೋಜನೆ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ನಿವಾಸ್ ಯೋಜನೆ ಅಡಿಯಲ್ಲಿ 40 ಮನೆಗಳು ಮಂಜುರಾಗಿದ್ದು 19 ಜನ ಸದಸ್ಯರಿದ್ದು ಪ್ರತಿಯೊಬ್ಬರಿಗೂ ಎರಡು ಮನೆಗಳಂತೆ ಪಂಚಾಯತಿ ಪೂರ್ವಭಾವಿ ಸಭೆಯಲ್ಲಿ ವಿಭಜಿಸಲಾಗಿ ಇನ್ನು ಉಳಿದ ಎರಡು ಮನೆಗಳ ಆಯ್ಕೆಯನ್ನು ಅಧ್ಯಕ್ಷರಿಗೆ ಮತ್ತು ಪಂಚಾಯಿತಿ ಸಿಬ್ಬಂದಿಗೆ ಕೈಬಿಡಲಾಗಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಬಹುತೇಕ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಬೂತಲದಿನ್ನಿ ಗ್ರಾಮಕ್ಕೆ ಮೀಸಲಾಗಿರುವ ಎಂಟು ಮನೆಗಳ ಪೈಕಿ ಎಸ್ಸಿ/ಎಸ್.ಟಿ ಗೆ ತಲಾಒಂದರಂತೆ,ಎರಡು ಅಲ್ಪಸಂಖ್ಯಾತ, 4 ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು 27 ಅರ್ಜಿಗಳು ಬಂದಿದ್ದು ಸದಸ್ಯರಿಗೆ ಯಾರಿಗೆ ಮನೆ ನೀಡಬೇಕು ಎಂಬ ಗೊಂದಲಕ್ಕಿಡಾಗಿ ಅರ್ಜಿದಾರರಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಕೈಬಿಟ್ಟರು. ಎಲ್ಲಾರು ಹೊಂದಾಣಿಕೆಯಿಂದ ಮಾತನಾಡಿಕೊಂಡು ಯಾವುದೇ ತಕರಾರು ಜಗಳವಿಲ್ಲದೆ ಹೆಸರುಗಳನ್ನು ಸೂಚಿಸಿದರು.ಮಿಸಲಾತಿ ಜಾತಿ ಸಮೂದಾಯದವರು ಒಕ್ಕೂರಲಿಂದ ಸ್ಪಂದಿಸಿದ ಅರ್ಜಿದಾರರು ತಮ್ಮ ತಮ್ಮ ಸಮುದಾಯದಲ್ಲಿ ಚರ್ಚಿಸಿ ಹೆಸರುಗಳನ್ನು ಸೂಚಿಸಿ ಆಯ್ಕೆ ಮಾಡಲಾಯಿತು.

ಈ ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ನಿಂಗಪ್ಪ ಹೊಸಮನಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀನಿವಾಸ,ಗ್ರಾಮ ಸದಸ್ಯರಾದ ನಾಗನಗೌಡ ಮಾಲಿಪಾಟೀಲ್, ಮಲ್ಲಿಕಾರ್ಜುನ್,ಹಾಗೂ ಪಂಚಾಯಿತಿ ಸಿಬ್ಬಂದಿಗಳಾದ ಜಲಾಲೆಪ್ಪ,ಚನ್ನಪ್ಪ,ಸೋಮಶೇಖರ್,ಇಬ್ರಾಹಿಂ,ಹಾಗೂ ಮಹಿಳಾ ಸದಸ್ಯರ ಪತಿ ವೆಂಕೋಬ ಜೋಲದ, ಖಾಜಾಸಾಬ್,ಮತ್ತು ಊರಿನ ಹಿರಿಯರು ಯುವಕರು ಮಹಿಳೆಯರು ಸಭೆಯಲ್ಲಿ ಭಾಗಿಯಾಗಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend