ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಗರ ಪ್ರದೇಶದಲ್ಲಿ ಮಾಡದಿದ್ದರೆ ಹೋರಾಟ ಅನಿವಾರ್ಯ : ಬಸನಗೌಡ ಬಾದರ್ಲಿ ಎಚ್ಚರಿಕೆ…!!!

Listen to this article

ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಗರ ಪ್ರದೇಶದಲ್ಲಿ ಮಾಡದಿದ್ದರೆ ಹೋರಾಟ ಅನಿವಾರ್ಯ : ಬಸನಗೌಡ ಬಾದರ್ಲಿ ಎಚ್ಚರಿಕೆ.

ಸಿಂಧನೂರು : ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಮತ್ತು ಮಾಜಿ ಸಚಿವ ವೆಂಕಟರಾವ್ ನಾಡಗೌಡ್ರು ನಗರ ಪ್ರದೇಶದಲ್ಲಿ ಇರಬೇಕಾದ ತಾಯಿ-ಮಕ್ಕಳ ಆಸ್ಪತ್ರೆಯನ್ನು ತರಾತುರಿಯಲ್ಲಿ ಎಂಟು ಕಿಲೋಮೀಟರ್ ದೂರ ಶಂಕುಸ್ಥಾಪನೆ ಮಾಡಿರುವುದರಿಂದ ಜನರಲ್ಲಿ ಅನುಮಾನ ಮೂಡಿದೆ. ಉದ್ದೇಶವಾದರೂ ಏನು ಎಂಬುದು ಜನರಿಗೆ ತಿಳಿಯಪಡಿಸಬೇಕು ಎಂದರು.

ನಗರದ ತಾಲೂಕು ಯುವ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಬಾರ್ಡ್ ಯೋಜನೆಯಲ್ಲಿ ಸುಮಾರು 12 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣದ ಗುದ್ದಲಿ ಪೂಜೆಯನ್ನು ಶಾಸಕರು ಮತ್ತು ಸಂಸದರು ಜೊತೆಗೂಡಿ ಶಂಕುಸ್ಥಾಪನೆ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಸಂಸದರು ಮತ್ತು ತಾಲೂಕಿನ ಶಾಸಕರು ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಜಾಗದ ಕೊರತೆ ಬಗ್ಗೆ ಸಚಿವರಾದ ಸುಧಾಕರ್ ರವರಿಗೆ ತಿಳಿಸಿದಾಗ ನಿಮ್ಮ ತಾಲೂಕಿನ ಶಾಸಕರು ನನಗೆ ಯಾವುದೇ ಅರ್ಜಿ ಕೂಡಾ ಕೊಟ್ಟಿಲ್ಲ ಇದರ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ ಅಂತ ಹೇಳಿದ್ದಾರೆ. ಸಚಿವರಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಬಗ್ಗೆ ಮನವಿ ಪತ್ರವನ್ನು ನೀಡಲಿದ್ದೇನೆ ಮತ್ತು ಗುತ್ತಿಗೆದಾರರು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸವನ್ನು ಪ್ರಾರಂಭ ಮಾಡದೆ ನಿಲ್ಲಿಸಬೇಕು. ಒಂದು ವೇಳೆ ನಿಲ್ಲದಿದ್ದರೆ ಹೋರಾಟದ ಮೂಲಕ ನಿಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಲು ನಗರ ಪ್ರದೇಶದಲ್ಲಿ ಎಪಿಎಂಸಿ ಹತ್ತಿರ,ಮತ್ತು ತೋಟಗಾರಿಕೆ ಇಲಾಖೆಯ ಜಾಗ ಇದ್ದರೂ ಕೂಡ ಮತ್ತು ತಾಲೂಕಿನಲ್ಲಿ ಅನೇಕ ಕಡೆ ಸರಕಾರಿ ಜಾಗ ಇರುವುದರಿಂದ ಮಾನ್ಯ ಶಾಸಕರು ಅಧಿಕಾರಿಗಳ ಸಭೆ ಕರೆದು ಸರ್ಕಾರದ ಜಾಗವನ್ನು ಹುಡುಕಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಗರಪ್ರದೇಶದಲ್ಲಿಮಾಡಬೇಕು. ಕೂಡಲೇ ಆ ಜಾಗವನ್ನು ಬದಲಾವಣೆ ಮಾಡಬೇಕು. ಆಸ್ಪತ್ರೆಗೆ ಹೋಗಬೇಕಾದರೆ ಸರಿಯಾದ ದಾರಿ ಇಲ್ಲ ಇದರ ಬಗ್ಗೆ ಸಾಕಷ್ಟು ಜನರು ಇದನ್ನು ನಿಲ್ಲಿಸಬೇಕು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆ ಸ್ಥಳವನ್ನು ಬೇರೆ ಕಡೆ ಸ್ಥಳಾಂತರಿಸಿ ಎಂದು ನಮ್ಮ ಬಳಿ ಒತ್ತಾಯ ಮಾಡುತಿದ್ದಾರೆ ಅನಿವಾರ್ಯವಾಗಿ ಜನರಿಗೋಷ್ಕರ ನಿಲ್ಲಿಸಬೇಕಾಗುತ್ತದೆ ಎಂದರು. ಜೋಳ ಖರೀದಿ ಕೇಂದ್ರದಲ್ಲಿ 20 ಕ್ವಿಂಟಲ್ ನಿಗದಿ ಮಾಡಿದ್ದು ಇದರ ಬಗ್ಗೆ ಹೋರಾಟ ಮಾಡಿದ್ದೇವೆ.ಸ್ವತಃ ನಾನೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ.ಶಿಘ್ರದಲ್ಲಿ ಆದೇಶವನ್ನು ಬದಲಿಸಿ ಹೆಚ್ಚಿನ ರೀತಿಯಲ್ಲಿ ಜೋಳ ಖರೀದಿ ಮಾಡಲಾಗುವುದೆಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ರೈತರು ಯಾವುದೇ ಕಾರಣಕ್ಕೆ ಭಯಪಡುವ ಅಗತ್ಯವಿಲ್ಲ ಎಂದರು. ಮೇಕೆದಾಟುಪಾದಯಾತ್ರೆಯಲ್ಲಿ ನಾಲ್ಕು ದಿನ ಪಕ್ಷ ಕೊಟ್ಟಂತ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಕೊರೊನಾ ಎಂಬ ಮಹಾಮಾರಿ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆಯನ್ನು ಮುಂದೂಡಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಬಂದಮೇಲೆ ಪಾದಯಾತ್ರೆ ಮುಂದುವರಿಸಲಾಗುವುದು. ಹಾಗೂ ನಮ್ಮ ಭಾಗದ ತುಂಗಭದ್ರಾ ನದಿಗೆ ಅಡ್ಡಲಾಗಿ ಸಮಾನಾಂತರ ನವಲಿ ಜಲಾಶಯ ನಿರ್ಮಿಸಲು ಕಾಂಗ್ರೆಸ್ ಸರಕಾರ ಇದ್ದ ಸಂದರ್ಭದಲ್ಲಿ ಡಿಪಿಆರ್ ಸಿದ್ದಪಡಿಸಿದ್ದು ನಮ್ಮ ಭಾಗದ ಬಿಜೆಪಿ ಸರಕಾರದ ಸಚಿವರು ಮತ್ತು ಶಾಸಕರು ಕಣ್ಣು ಮುಚ್ಚಿ ಕುಳಿತಿದ್ದಾರೆ.ನವಲಿ ಜಲಾಶಯದ ಬಗ್ಗೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ನವಲಿ ಜಲಾಶಯದ ಬಗ್ಗೆ ಹೋರಾಟ ಮಾಡಬೇಕು ಎಂದು ತಿಳಿಸಿದ್ದೇನೆ.ಅವರು ಕೂಡ ಸ್ಪಂದಿಸಿದ್ದಾರೆ ಮುಂದಿನ ದಿನಗಳಲ್ಲಿ ನವಲಿ ಜಲಾಶಯದ ಬಗ್ಗೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕರು ತಾಯಿ ಮಕ್ಕಳ ಆಸ್ಪತ್ರೆ ಜಾಗದ ಕೊರತೆ ಬಗ್ಗೆ ಸರಕಾರದ ಮುಖ್ಯಮಂತ್ರಿಗಳಿ ಗಾಗಲಿ, ಮಂತ್ರಿಗಳಿಗಾಗಲಿ ಯಾವುದೇ ಅರ್ಜಿ ಕೂಡಾ ಕೊಟ್ಟಿಲ್ಲ. ಒಂದು ವೇಳೆ ಕೊಟ್ಟಿದ್ದರೆ ದಾಖಲೆಗಳನ್ನು ತೋರಿಸಲಿ ಎಂದರು. ಪತ್ರಕರ್ತರು ಕೇಳಿದ ಪ್ರಶ್ನೆಗೆ ನಗರ ಪ್ರದೇಶದಲ್ಲಿ ತೋಟಗಾರಿಕೆ ಇಲಾಖೆ ಜಾಗ ಇದೆ ಎಂದು ಶಾಸಕರನ್ನು ಕೇಳಿದರೆ ಆ ಜಾಗ ನಮಗೆ ಸೇರಬೇಕಾದರೆ ಮೂರ್ನಾಲ್ಕು ವರ್ಷ ಬೇಕಾಗುತ್ತದೆ ಅಷ್ಟರೊಳಗೆ ನಮ್ಮ ಅವಧಿ ಮುಗಿದು ಹೋಗುತ್ತದೆ ಎಂದು ಹೇಳುತ್ತಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದರು.

ಈ ಸಂದರ್ಭದಲ್ಲಿ ಎಚ್. ಎಮ್.ಬಡಿಗೇರ, ವೆಂಕಟೇಶ್ ರಾಗಲಪರ್ವಿ, ಖಾಜಾಹುಸೇನ್ ರೌಡಕುಂದಾ ಇದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend