ಸಿಂಧನೂರು : ಪೊಲೀಸ್ಸಿಬ್ಬಂದಿಗಳ ಮಕ್ಕಳ ವಿಧ್ಯಾಭ್ಯಾಸಕ್ಕೆ ಅನುಕೂಲವಾಗುವ ಉದ್ದೇಶಕ್ಕೆ ಗ್ರಂಥಾಲಯ ಉದ್ಘಾಟನೆ – ನಿಖಿಲ್. ಬಿ….!!!

Listen to this article

ಸಿಂಧನೂರು : ಸಿಬ್ಬಂದಿಗಳ ಮಕ್ಕಳ ವಿಧ್ಯಾಭ್ಯಾಸಕ್ಕೆ ಅನುಕೂಲವಾಗುವ ಉದ್ದೇಶಕ್ಕೆ ಗ್ರಂಥಾಲಯ ಉದ್ಘಾಟನೆ – ನಿಖಿಲ್. ಬಿ.

ಪೊಲೀಸ್ ಆಧಿಕ್ಷಕರ ವಿಭಾಗದಲ್ಲಿ ಗ್ರಂಥಾಲಯ ಉದ್ಘಾಟನೆ ಮಾಡಿರೋದು ನನಗೆ ಹಳೆಯ ನೆನಪುಗಳು ಮರುಕಳಿಸುತ್ತವೆ.ಕರ್ತವ್ಯನಿರತ ಪೋಲಿಸ್ ಹಾಗೂ ಅವರ ಮಕ್ಕಳ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಉದ್ದೇಶದಿಂದ ಪೋಲಿಸ್ ಉಪವಿಭಾಗ ಕಛೇರಿಯಲ್ಲಿ ಗ್ರಂಥಾಲಯ ಪ್ರಾರಂಬಿಸಿರುವುದಕ್ಕೆ ಡಿ.ವೈ.ಎಸ್.ಪಿ. ವೆಂಕಟಪ್ಪ ನಾಯಕ ಮತ್ತು ಸಹಕಾರ ನೀಡಿದ ಇತರೆ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆಗಳು.ಸಿಬ್ಬಂದಿಗಳು ಐಎಎಸ್,ಐಪಿಎಸ್,ಎಪ್.ಡಿ.ಎ. ಅಧ್ಯಯನಕ್ಕಾಗಿ ರಜೆ ಹಾಕಿ ಹೋಗುತ್ತಿದ್ದರು. ಅವರಿಗೆ ಕಛೇರಿಯಲ್ಲಿ ಅನುಕೂಲ ಮಾಡಿರುವುದು ಸ್ವಾಗತಾರ್ಹ ಎಂದರು.

ನಂತರ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ,ಡಿಸೆಂಬರ್ ಅಥವಾ ಜನವರಿಯಲ್ಲಿ 140 ಜನ ಸಿಬ್ಬಂದಿಗಳು ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲಾಗುವುದು ಎಂದರು. ಅಕ್ರಮ ಮರಳುಗಾರಿಕೆ ಪ್ರಶ್ನೆಗೆ ಪೊಲೀಸ್ ಇಲಾಖೆ ಜೊತೆಗೆ ಇತರೆ ಇಲಾಖೆ ಸಮಿತಿಯಲ್ಲಿದ್ದು ಕೇವಲ ಪೊಲೀಸ್ ಇಲಾಖೆಯನ್ನು ಟಾರ್ಗೆಟ್ ಮಾಡಿರುವುದು ಸರಿಯಲ್ಲ. ಅಕ್ರಮ ಮರಳುಗಾರಿಕೆ ತಡೆಯಲು ಪೊಲೀಸ್ ಇಲಾಖೆಯ ಜೊತೆಗೆ ಇತರೆ ಸಮಿತಿಯ ಸದಸ್ಯರು ಒಟ್ಟಾಗಿ ಸೇರಿ ಮರಳು ದಂಧೆಗೆ ಕಡಿವಾಣ ಹಾಕುವಂತೆ ತಿಳಿಸಿದರು .

ನಗರದ ಸುಕಾಲಪೇಟೆ ರಸ್ತೆಯಲ್ಲಿರುವ ಪೊಲೀಸ್ ಆಧಿಕ್ಷಕರ ಉಪವಿಭಾಗದಲ್ಲಿ ಗ್ರಂಥಾಲಯ ಮತ್ತು ನಗರ ಪೋಲಿಸ್ ಠಾಣೆಯಲ್ಲಿ ಸಿಬ್ಬಂದಿಯವರ ವಿಶ್ರಾಂತಿ ಗೃಹವನ್ನು ಉದ್ಘಾಟಿಸಿ ನಿಖಿಲ್.ಬಿ. (ಐಪಿಎಸ್) ಪೋಲಿಸ್ ಆಧಿಕ್ಷಕರು ಮಾತನಾಡಿದರು.

ನಂತರ ಮಾತನಾಡಿದ ಡಿವೈಎಸ್ಪಿ ವೆಂಕಟಪ್ಪ ನಾಯ್ಕ್ ಐ.ಎ.ಎಸ್,ಐ.ಪಿ.ಎಸ್, ಮತ್ತು ಎಪ್.ಡಿ.ಎ. ಒದಲು ರಜೆ ಮೇಲೆ ತೆರಳಿ ಓದುವುದಕ್ಕೆ ಹೋಗುತ್ತಿದ್ದರು. ಸಿಬ್ಬಂದಿಗಳ ಮತ್ತು ಅವರ ಮಕ್ಕಳು ವಿದ್ಯಾಭ್ಯಾಸ ಮಾಡಲು ವಸತಿ ಗ್ರಹಗಳಲ್ಲಿ ಅನುಕೂಲ ಇಲ್ಲದಿರುವುದರಿಂದ ಬಹುದಿನಗಳಿಂದ ನಮ್ಮ ಇಲಾಖೆಯಲ್ಲಿ ಗ್ರಂಥಾಲಯ ಮಾಡುವದು ನಮ್ಮ ಆಸೆಯಾಗಿತ್ತು.ಅದು ಇಂದು ಹಿರಿಯ ಅಧಿಕಾರಿಗಳ ಸಹಕಾರದಿಂದ ಈಡೇರಿದೆ. ಇದರ ಉದ್ದೇಶ ಸಿಬ್ಬಂದಿಗಳು ಹಾಗೂ ಅವರ ಮಕ್ಕಳು ಮತ್ತು ಐ.ಎ.ಎಸ್, ಐ. ಪಿ. ಎಸ್. ಎಪ್. ಡಿ. ಎ. ಓದಲು ಬಯಸುವವರು ಈ ಗ್ರಂಥಾಲಯವನ್ನು ಉಪಯೋಗ ಮಾಡಿಕೊಂಡು ಉನ್ನತ ಮಟ್ಟದ ಹುದ್ದೆಗೆ ಹೇರಲಿ ಎಂದರು.

ಈ ಸಂದರ್ಭದಲ್ಲಿ ಲಕ್ಷ್ಮಿಕಾಂತ ಆರ್. ಪ್ರೊ. ಡಿಎಸ್ಪಿ ನಗರಠಾಣೆ, ಉಮೇಶ ಎನ್. ಕಾಂಬಳೆ ಸಿಪಿಐ ಸಿಂಧನೂರು, ಎರಿಯಪ್ಪ ಎಪಿಎಸ್ಐ ಗ್ರಾಮೀಣ ಠಾಣೆ ಸಿಂಧನೂರು, ಶ್ರೀಮತಿ ಸೌಮ್ಯ ಎಂ. ಪಿಎಸ್ಐ ನಗರ ಠಾಣೆ ಸಿಂಧನೂರು, ಬಸವರಾಜ್ ಪಿಎಸ್ಐ ಸಿಂಧನೂರು ಸಂಚಾರಿಠಾಣೆ,ಬೆಟ್ಟಯ್ಯ ಪಿಎಸ್ಐ (ತ ವಿ)ನಗರ ಠಾಣೆ ಹಾಗೂ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend