ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ…!!!

Listen to this article

ಸಿಂಧನೂರು :ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕೆ.ಪಿ.ಸಿ.ಸಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರ ಆದೇಶದ ಮೇರೆಗೆ ಶ್ರೀ ಹಂಪನಗೌಡ ಬಾದರ್ಲಿ ಮಾಜಿ ಶಾಸಕರ ಅಧ್ಯಕ್ಷತೆಯಲ್ಲಿ ಪೆಟ್ರೋಲ್, ಡಿಸೇಲ್, ಗ್ಯಾಸ್ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಇಂದು ಸಿಂಧನೂರು ನಗರದ ಅನೇಕ ಪೆಟ್ರೋಲ್ ಬಂಕ್ ಗಳ ಮುಂದೆ ಸಾಂಕೇತಿಕವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ದೇಶದ ಆರ್ಥಿಕತೆ ಐತಿಹಾಸಿಕವಾಗಿ ಕುಸಿದಿದೆ,ಕಂಡು ಕೇಳರಿಯದಷ್ಟು ನಿರುದ್ಯೋಗ ತಾಂಡವವಾಡುತ್ತಿದೆ, ಜನರ ಆರ್ಥಿಕ ಮಟ್ಟ ನೆಲಕಚ್ಚಿದೆ.
ಇದೆಲ್ಲದರ ನಡುವೆ ಕೇವಲ 6 ತಿಂಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಬಾರಿ ಇಂಧನ ತೈಲಗಳ ಬೆಲೆ ಏರಿಸಿ 100 ರೂಗಳಿಗೆ ತಂದು ನಿಲ್ಲಿಸಿದ್ದು ಬಿಜೆಪಿ ಸಾಧನೆ! ಆದಾಯ ಡಬಲ್ ಮಾಡುತ್ತೇವೆ ಎಂದಿದ್ದ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಿಸಿ ಅಗತ್ಯ ವಸ್ತುಗಳ ಬೆಲೆಯನ್ನು ಡಬಲ್ ಮಾಡಿದೆ. ಸರ್ಕಾರ ಇಂಧನ ತೆರಿಗೆಯಿಂದ ತನಗೆ ಬರುವ ಆದಾಯ ಡಬಲ್ ಮಾಡಿಕೊಂಡಿದ್ದು, ಜನರ ಆದಾಯ ಹಾಗೂ ಅವರ ಹೊಟ್ಟೆ ಮೇಲೆ ಹೊಡೆಯುತ್ತಿದೆ.
ಸರ್ಕಾರದ ಈ ಸುಲಿಗೆ ಕಾಂಗ್ರೆಸ್ ಸಹಿಸದು ಎಂದು ಹಂಪನಗೌಡ ಬಾದರ್ಲಿ ಮಾಜಿ ಶಾಸಕರು ಮಾತನಾಡಿದರು ಈ ಸಂದರ್ಭದಲ್ಲಿ,ಪಂಪನಗೌಡ ಬಾದರ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು , ಖಾಜಿ ಮಲ್ಲಿಕ್ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು , ಶ್ರೀ.ಮಲ್ಲಿಕಾರ್ಜುನ ಪಾಟೀಲ್ ನಗರಸಭೆ ಅಧ್ಯಕ್ಷರು , ಶ್ರೀ.ಅನಿಲ್ ಕುಮಾರ್.ವೈ ಪ್ರಧಾನ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್, ಶ್ರೀ.ರತ್ನಮ್ಮ ಬಂಗಾರಶೆಟ್ಟಿ ಅಧ್ಯಕ್ಷರು ಮಹಿಳಾ ಘಟಕ, ಶ್ರೀ.ಜಾಫರ್ ಅಲಿ ಜಾಹಗೀರ್ದಾರ್, ಶ್ರೀ.ಬಸವರಾಜ ಹಿರೇಗೌಡ್ರು ಜಿಲ್ಲಾ ಪಂಚಾಯತ ಸದಸ್ಯರು, ಬಾಬುಗೌಡ ಬಾದರ್ಲಿ ಜಿಲ್ಲಾ ಪಂಚಾಯತ ಸದಸ್ಯರು, ಲಿಂಗಪ್ಪ ದಡೇಸೂಗೂರು, ನಿರುಪಾದೆಪ್ಪ ಗುಡಿಹಾಳ್, ನಗರಸಭಾ ಸದಸ್ಯರಾದ ಸುರೇಶ್ ಜಾದವ್, ಮುನೀರ್ ಪಾಷಾ, ಪ್ರಭುರಾಜ್, ಕರಿಂಸಾಬ್, ಶಬ್ಬೀರ್ ನಾಯ್ಕ್, ತಿಮ್ಮಯ್ಯ ಭಂಗಿ, ಛತ್ರಪ್ಪ.ಕೆ, ಶರಣಪ್ಪ ಉಪ್ಪಲದೊಡ್ಡಿ, ಶೇಖರಪ್ಪ ಗಿಣಿವಾರ್, ಹೆಚ್.ಬಾಷಾ, ಎಸ್.ಶರಣೇಗೌಡ, ರಾಜು ದತ್ತುರಾವ್, ಆಲಂಬಾಷಾ, ನನ್ನೆಮೇಸ್ತ್ರಿ, ಪಂಪನಗೌಡ ಎಲೆಕೂಡ್ಲಿಗಿ, ನಾಗರಾಜ ಗಸ್ತಿ, ಹನುಮಂತಪ್ಪ ಗೋಮರ್ಸಿ, ಸಾಮಾಜಿಕ ಜಾಲತಾಣ ವಿಭಾಗದ ರಮೇಶ ಬಾಲಿ, ಬಸವರಾಜ ಪಾಟೀಲ್, ಬಸವರಾಜ ಗೋರೆಬಾಳ್ ಸೇರಿದಂತೆ ಇನ್ನು ಮುಂತಾದವರು ಭಾಗವಹಿಸಿದ್ದರು.

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend