ವಿಜಯಪುರ ಜಿಲ್ಲೆಯ ವಿವಿಧೆಡೆ ಅಬಕಾರಿ ದಾಳಿ ನಡೆಸಿ 1,27,58,608 ರೂ. ಮೌಲ್ಯದ ಅಬಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ….!!!!

Listen to this article

ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಮೇ.02 ರವರೆಗೆ ಜಿಲ್ಲೆಯಲ್ಲಿ ವಿವಿಧೆಡೆ ಅಬಕಾರಿ ದಾಳಿ ನಡೆಸಿ 1,27,58,608 ರೂ. ಮೌಲ್ಯದ ಅಬಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ತಿಳಿಸಿದ್ದಾರೆ. ಚುನಾವಣೆಯನ್ನು ಅತ್ಯಂತ ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಅಬಕಾರಿ ಇಲಾಖೆಯಿಂದ ವಿವಿಧ ಕ್ರಮ ಕೈಗೊಳ್ಳಲಾಗಿದ್ದು, ಈವರೆಗೆ 1059 ಅಬಕಾರಿ ದಾಳಿ ನಡೆಸಿ, 88 ಘೋರ, 13 ಬಿಎಲ್ಸಿ ಹಾಗೂ 15(ಎ) 857 ಪ್ರಕರಣಗಳು ಸೇರಿದಂತೆ 960 ಪ್ರಕರಣಗಳನ್ನು ದಾಖಲಿಸಿ, 1171 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. 4,71,393ರೂ. ಮೌಲ್ಯದ 1136.88 ಲೀ. ಮದ್ಯ, 6,400 ರೂ. ಮೌಲ್ಯದ 7.4 ಲೀ. ಹೊರ ರಾಜ್ಯದ ಮದ್ಯ, 52,34,565 ರೂ. ಮೌಲ್ಯದ 22,271 ಲೀ. ಬೀಯರ್, 12,850 ರೂ. ಮೌಲ್ಯದ 128.50 ಲೀ. ಕಳ್ಳಭಟ್ಟಿ ಸರಾಯಿ ಹಾಗೂ 400 ರೂ.ಮೌಲ್ಯದ 04 ಲೀ.ಸೇಂಧಿ ಹಾಗೂ 1,40,000 ರೂ.ಮೌಲ್ಯದ 5.5 ಕೆಜಿ ಗಾಂಜಾ ಸೇರಿದಂತೆ, 58,65,608ರೂ. ಮೌಲ್ಯದ 23,548 ಲೀ.ಮದ್ಯ ಹಾಗೂ 5.5ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅದರಂತೆ, ಅಬಕಾರಿ ಅಕ್ರಮಕ್ಕೆ ಬಳಸಿಕೊಳ್ಳುತ್ತಿರುವ 42,93,000ರೂ. ಮೌಲ್ಯದ 71 ದ್ವಿಚಕ್ರ ವಾಹನ 11 ಲಕ್ಷ ರೂ. ಮೌಲ್ಯದ 02 ಲಘು ವಾಹನ ಹಾಗೂ 15 ಲಕ್ಷ ರೂ. ಮೌಲ್ಯದ 01 ಬೃಹತ್ ವಾಹನ ಸೇರಿದಂತೆ ಒಟ್ಟು 68,93,000 ರೂ. ಮೌಲ್ಯದ 74 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ…

ವರದಿ. ಎಚ್ಚರಿಕೆ ಕನ್ನಡ ನ್ಯೂಸ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend