ಸೂಕ್ಷ್ಮ ವೀಕ್ಷಕರು ಮತದಾನದ ಕೆಲಸದ ಮೇಲೆ ನಿಗಾ ವಹಿಸಿ: ತನ್ಮಯ್ ಚಕ್ರಭರ್ತಿ…!!!

Listen to this article

ಸೂಕ್ಷ್ಮ ವೀಕ್ಷಕರು ಮತದಾನದ ಕೆಲಸದ ಮೇಲೆ ನಿಗಾ ವಹಿಸಿ: ತನ್ಮಯ್ ಚಕ್ರಭರ್ತಿ

ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನಲೆ ನೇಮಕವಾಗಿರುವ ಸೂಕ್ಷ್ಮ ವೀಕ್ಷಕರು ಮೇ 10 ರಂದು ತಮಗೆ ನಿಯೋಜಿಸಲಾಗುವ ಮತಗಟ್ಟೆಯಲ್ಲಿ ನಡೆಯುವ ಮತದಾನ ಪ್ರಕ್ರಿಯೆಯ ಬಗ್ಗೆ ನಿಗಾ ವಹಿಸಿ ಸಾಮಾನ್ಯ ವೀಕ್ಷಕರಿಗೆ ವರದಿ ನೀಡಬೇಕು ಎಂದು ಮಂಡ್ಯ ಮತ್ತು ನಾಗಮಂಗಲ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ತನ್ಮಯ್ ಚಕ್ರಭರ್ತಿ ಅವರು ತಿಳಿಸಿದರು.

ಅವರು ಇಂದು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಮೈಕ್ರೊ ಅಬ್ಸರ್‍ವರ್ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದರು. ಮೇ 9 ರಂದು ತಮಗೆ ನಿಯೋಜಿಸಲಾಗಿರುವ ಮತಗಟ್ಟೆಯ ಬಗ್ಗೆ ಮಾಹಿತಿ ದೊರೆಯುತ್ತದೆ. ತಾವು ಅಲ್ಲಿಗೆ ತೆರಳಿ ಮೇ 10 ರಂದು ಬೆಳಿಗ್ಗೆ ಮತಯಂತ್ರದ ನೈಜ್ಯತೆಯ ಬಗ್ಗೆ ನಡೆಯುವ 50 ಮಾಕ್ ಪೋಲ್ ಸಂದರ್ಭದಲ್ಲಿ ತಪ್ಪದೇ ಹಾಜರಿರಬೇಕು. ಮಾಕ್ ಪೋಲ್ ಮುಗಿದ ನಂತರ ಮತಯಂತ್ರದಲ್ಲಿ ಕ್ಲೋಸ್ ಬಟನ್ ನ್ನು ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿ ಒತ್ತಬೇಕು ಇದನ್ನು ಸರಿಯಾಗಿ ವೀಕ್ಷಿಸಿ. ಮಾಕ್ ಪೋಲ್ ಪ್ರಮಾಣ ಪತ್ರದಲ್ಲಿ ನಿಗದಿಪಡಿಸಿರುವವರು ಸಹಿ ಮಾಡಿರುವ ಬಗ್ಗೆ ಗಮನಿಸಿ, ಮತದಾರರ ರಿಜಿಸ್ಟರ್, ಮತದಾನ ಸಂಪೂರ್ಣವಾದ ನಂತರ ಮತಯಂತ್ರದಲ್ಲಿ ಚಲಾಯಿಸಿರುವ ಮತದಾರರ ಸಂಖ್ಯೆಯನ್ನು ಗಮನಿಸಬೇಕು ಎಂದರು.

ಮಳವಳ್ಳಿ ಮತ್ತು ಮದ್ದೂರು ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಅಮಿತ್ ಕುಮಾರ್ ಅವರು ಮಾತನಾಡಿ ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ತಕ್ಷಣ ತಮ್ಮ ವ್ಯಾಪ್ತಿಗೆ ಬರುವ ವೀಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.

ಮೇಲುಕೋಟೆ ಮತ್ತು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಅಮಿತ್ವ ಬ್ಯಾನಾರ್ಜಿ ಅವರು ಮಾತನಾಡಿ ಮೇ 10 ರಂದು ಮತದಾನ ಪ್ರಕ್ರಿಯೆ ಮುಗಿದ ನಂತರ ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಮತಗಟ್ಟೆವಾರು ವರದಿ ನೀಡಬೇಕು. ಕೆಲವು ಕಡೆ ಎರಡು ಮತಗಟ್ಟೆಗಳು ಒಟ್ಟಿಗೆ ಇದ್ದು, ಒಬ್ಬರೇ ಮೈಕ್ರೋ ಅಬ್ಸರ್‍ವರ್ ಇದ್ದಾಗ ಎರಡು ಪ್ರತ್ಯೇಕ ವರದಿ ನೀಡಬೇಕು ಎಂದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಡಾ: ಎಸ್ ಸುರೇಶ್ ಕುಮಾರ್ ಅವರು ಮಾತನಾಡಿ ಶ್ರೀರಂಗಪಟ್ಟಣದಲ್ಲಿ ಹೆಚ್ಚಿನ ಅಭ್ಯಾರ್ಥಿಗಳಿದ್ದು, ಎರಡು ಬ್ಯಾಲೆಟ್ ಯುನಿಟ್‍ಗಳು ಇರುತ್ತದೆ. ಈ ಹಿನ್ನಲೆಯಲ್ಲಿ ಇಲ್ಲಿ ಕಾರ್ಯನಿರ್ವಹಿಸುವವರು ಹೆಚ್ಚಿನ ಗಮನವಿಟ್ಟು ಕಾರ್ಯನಿರ್ವಹಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜ್ ಅವರು ಮೈಕ್ರೋ ಅಬ್ಸ್‍ರವರ್‍ಗಳಿಗೆ ತರಬೇತಿ ನಡೆಸಿಕೊಟ್ಟರು. ತರಬೇತಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ: ಹೆಚ್.ಎನ್ ಗೋಪಾಲ ಕೃಷ್ಣ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ ಉಪಸ್ಥಿತರಿದ್ದರು…

ವರದಿ. ಸುರೇಶ್, ಮಂಡ್ಯ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend