ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ತೆಂಗಿನ ತೋಟಕ್ಕೆ ಬರುವವರ ಸಂಖ್ಯೆ ಕಂಡು ಪ್ರಾದೇಶಿಕ ಪಕ್ಷಗಳಿಗೆ ನಡುಕ ಉಂಟಾಗಿದೆ…!!!

Listen to this article

ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ತೆಂಗಿನ ತೋಟಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದ್ದು ದಿನದಿಂದ ದಿನಕ್ಕೆ ಅಬ್ಬರ ಹಾಗೂ ಜನಸಾರ ಕಂಡು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ನಡುಕ ಉಂಟಾಗಿದೆ.
ಮಾಜೀ ಸಚಿವ ದಿ.ತಿಪ್ಪೇಸ್ವಾಮಿಯಾದ ನನ್ನ ತಂದೆ ಸಚಿವ ಹಾಗೂ ಶಾಸಕನಾಗಿ ಜೆಡಿಎಸ್.ಬಿಜೆಪಿ ಪಕ್ಷದಿಂದ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿ ಗೆ ಶ್ರಮಿಸುವ ಮೂಲಕ ಹೆಸರು ಪಡೆದಿದ್ದರು .2013 ರಲ್ಲಿ ಕೆಜೆಪಿ ಯಡಿಯೂರಪ್ಪ ಕಟ್ಟಿದ ಪಕ್ಷದಿಂದ ಸ್ಪರ್ಧಿಸಿ ಸೋಲುಂಡು.2018 ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಎರಡು ಬಾರಿ ಸೋತಿದ್ದೇನೆ ನನ್ನ ತಂದೆಯ ರಾಜಕೀಯ ಭವಿಷ್ಯ ಹೆಸರು ಉಳಿಸಲು ತಂದೆ ಹಾಗೂ ತಾತನ ಆಸ್ತಿ ಮಾರಿ ಚುನಾವಣೆ ರಂಗಕ್ಕೆ ಬಂದು ಪ್ರಚಾರ ಮಾಡುತ್ತಿದ್ದೇನೆ ನಾನು ಎರಡು ಬಾರಿ ಚುನಾವಣೆಗೆ ನಿಂತು ಸೋತಿದ್ದೇನೆ ಮತದಾರ ಪ್ರಭುಗಳು ಈ ಬಾರಿ ಕೈ ಹಿಡಿಯಲಿದ್ದಾರೆ ನನಗೆ ಭರವಸೆ ಇದೆ ಅಲ್ಲದೆ ತಂದೆಯವರು ಮಾಡಿದ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ ಆಗಲಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆಟಿ ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಮಾಜಿ ಸಚಿವ ತಿಪ್ಪೇಸ್ವಾಮಿ ಮಗ ಎರಡು ಬಾರಿ ಸೋತು ಆಸ್ತಿ ಮಾರಿ ಚುನಾವಣೆಗೆ ನಿಂತಿದ್ದಾರೆ ನಮ್ಮೂರಿನ ಮಗ ಎಂಬ ಅನುಕಂಪದ ಅಲೆ ಈಗ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದ್ದು ಬಿಜೆಪಿ.ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮತಗಳನ್ನು ಪಕ್ಷೇತರ ಅಭ್ಯರ್ಥಿ ಪಡೆಯಲಿದ್ದು ತೆರೆ ಮರೆಯಲ್ಲಿ ಎಲ್ಲಾ ಪಕ್ಷದ ಕಾರ್ಯಕರ್ತರು ಇವರ ಗೆಲುವಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಕ್ಷೇತ್ರದ ಯಾವುದೇ ಹಳ್ಳಿಗೆ ಹೋದರೂ ಮಾಜಿ ಸಚಿವ ತಿಪ್ಪೇಸ್ವಾಮಿ ಸಮಕಾಲಿನ ಹಿರಿಯರು.ನಿವೃತ್ತ ಅಧಿಕಾರಿಗಳು. ಹೆಚ್ಚಿನದಾಗಿ ಬಿಜೆಪಿ.ಜೆಡಿಎಸ್ ಕಾರ್ಯಕರ್ತರು ಈಗಾಗಲೆ ಇವರ ಜತೆ ಪ್ರಚಾರ ಮಾಡಲು ಮುಂದಾಗಿದ್ದಾರೆ.


ಇವರು ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಅಪಾರ ಕಾರ್ಯಕರ್ತರ ಜೊತೆ ಸಂವಾದ ನಡೆಸಿ ಮಾತನಾಡಿದರು ನಮ್ಮ ತಂದೆಯವರಾದ ದಿವಂಗತ ತಿಪ್ಪೇಸ್ವಾಮಿಯವರು ನಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸ ಮಾಡಿಸಿ ಮೆಚ್ಚುಗೆ ಪಡೆದಿದ್ದಾರೆ ಇದರಿಂದಾಗಿ ಈ ಕ್ಷೇತ್ರದ ಸ್ಥಳಿಕನಾಗಿ ನೈತಿಕ ಹೊಣೆ ಹೊತ್ತು ಮತದಾರರ ಬಳಿ ಬಂದಿದ್ದೇನೆ ಜಾತಿಭೇದ ಮೇಲು-ಕೀಳು ಏಕತೆಯೊಂದಿಗೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಈ ಭಾಗದ ಎಲ್ಲ ಸಮುದಾಯಗಳ ಸಮಸ್ಯೆಗಳ ಅಹವಾಲನ್ನು ಸ್ವೀಕರಿಸಿ ನಮ್ಮ ಕ್ಷೇತ್ರದ ಮತದಾರರು ಹೇಗೆ ಹೇಳುತ್ತಾರೆ ಹಾಗೆ ನಿಮ್ಮ ಕಷ್ಟ ಸುಖಗಳ ಜೊತೆಗೆ ಬೆರೆತು ಅಭಿವೃದ್ಧಿಯನ್ನು ಮಾಡಿ ತೋರಿಸುತ್ತೇನೆ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆಇವರ ಬೆನ್ನಿಗೆ ನಿಂತಿದ್ದು ನಿಕಟೆ ಪೂರ್ವ ತಶೀಲ್ದಾರ್ ಎನ್ ರಘುಮೂರ್ತಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಾಜ್ಯದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ ಇತ್ತ ಬಿಜೆಪಿ ಸರ್ಕಾರ ಹಗರಣಗಳ ಸರಮಾಲೆಯಾಗಿದ್ದು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ರಾಷ್ಟ್ರ ಹಾಗು ರಾಜ್ಯದ ಜನತೆಗೆ ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯವನ್ನು ಕೊಳ್ಳೆ ಹೊಡೆದಿದ್ದಾರೆ ಇಂಥ ಸರ್ಕಾರಗಳನ್ನು ನಂಬಿ ರಾಜ್ಯದ ಜನತೆ ಮೋಸ ಹೋಗಿ ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷ ಬೇಡ ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ದೃಢ ನಿರ್ಧಾರವನ್ನು ಕೈಗೊಂಡಿದ್ದಾರೆ ಇದರಿಂದಾಗಿ ಪಕ್ಷೇತರ ಅಭ್ಯರ್ಥಿ ಕೆಟಿ ಕುಮಾರಸ್ವಾಮಿ ನಿಮ್ಮೂರಿನ ಮಗನಾಗಿದ್ದು ಎಲ್ಲಿಂದೋ ಬಂದವರಿಗೆ ವೋಟ್ ಹಾಕುವ ಬದಲು ಸ್ಥಳೀಯ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿಗೆ ಮೇ10 ರಂದು ನಡೆಯಲಿರುವ ಚುನಾವಣೆಯಲ್ಲಿ ತೆಂಗಿನ ತೋಟಕ್ಕೆ ಮತ ಹಾಕಿ ಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.ಇನ್ನು ಈ ಸಂದರ್ಭದಲ್ಲಿ ರಾಧಾ ಸ್ವಾಮಿ ಮಲ್ಲಿಕಾರ್ಜುನ್ ಕೆಟಿ ನಿಜಲಿಂಗಪ್ಪ ರಘು ಸುರೇಶ್ ಸೋಮಶೇಖರ್ ಮಧು ಕುಮಾರ್ ಶಿವಪುತ್ರಪ್ಪ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಅಜ್ಜಪ್ಪ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.


ಕ್ಷೇತ್ರದಲ್ಲಿ ರೋಡ್ ಶೋ ಹಾಗೂ ಮನೆ ಮನೆಗರ ಭೇಟಿ ನೀಡಿವಮತಯಾನೆ ಮಾಡಲು ಹೋದಾಗ ಗ್ರಸಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಬೆಂಬಲ ಸೂಚಿಸಲು ಆಪಾರ ಅಭಿಮಾನಿಗಳು ಸೇರುತ್ತಿರುವುದು ಇತರೆ ಪಕ್ಷದ ಅಭ್ಯರ್ಥಿಗಳಿಗೆ ತಲೆಬಿಸಿಯಾಗಿದ್ದು ಮತದಾನಕ್ಕಿಂತ ಮುಂತಿತವಾಗಲೆ ಕೆ.ಟಿ.ಕುಮಾರಸ್ವಾಮಿ ಅತಿ ಹೆಚ್ಚು ಮತಗಳನ್ನು ಪಡೆಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಚಳ್ಳಕೆರೆ ಟೌನ್ ನಲ್ಲಿ ಇಂದು ನಡೆದ #ಅಹಿಂದ ಸಭೆಯಲ್ಲಿ ಭಾಗವಹಿಸಿದ ಅಲ್ಪಸಂಖ್ಯಾತರ ಮುಖಂಡರಾದ ಯಾಕುಬ್ ಅಲಿ, ಅಜ್ಮತ್ ಉಲ್ಲಾ , ಜಿಯವುಲ್ಲಾ , ಅಬ್ಬು , ಇಲಿಯಾಸ್ , ಇರ್ಫಾನ್, ಶಫಿ, ಶಾರು ಸೈಯದ್ ನಬಿ ಮತ್ತು ಇನ್ನಿತರೆ ಮುಖಂಡರ ಜೊತೆ ದಲಿತ ಮುಖಂಡರಾದ ಪ್ರಶಾಂತ್ ಪಚ್ಚಿ, ಬ್ಯಾನರ್ಜಿ, ದ್ಯಾಮಣ್ಣ ಹಾಗೂ ಕ್ರೈಸ್ತ ಸಮುದಾಯದ ಮುಖಂಡರಾದ ಜಯಪ್ರಕಾಶ್, ಹಾಗೂ ಮಾಜಿ ನಗರ ಸಭಾ ಸದಸ್ಯರಾದ ತಿಪ್ಪೇಸ್ವಾಮಿ (ಗಾಡಿ) ಅಣ್ಣಾ , ಟಿಜೆ ತಿಪ್ಪೇಸ್ವಾಮಿ, ಕಾರ್ತಿಕ್, ಅರುಣ್, ಮಲ್ಲಿ, ಡಿ.ಟಿ ಸುರೇಶ್ ಮತ್ತು ವಿಶ್ವಕರ್ಮ ಸಮುದಾಯದ ಮುಖಂಡರಾದ ಜಗದೀಶ್ ಮತ್ತು ರಾಕೇಶ್, ಹನುಮಂತ, ಹಾಗೂ ಒಕ್ಕಲಿಗ ಮುಖಂಡರಾದ ಶ್ರೀನಿಧಿ ಅನೇಕ ಯುವಕರು ಈ ಬಾರಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾದ ಕೆಟಿ ಕುಮಾರಸ್ವಾಮಿ (ತೆಂಗಿನ ತೋಟ ದ ಗುರುತಿಗೆ) ಬೆಂಬಲ ಸೂಚಿಸಿದ್ದಾರೆ….

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend