ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಒಂದು ದಿನದ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ…!!!

Listen to this article

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಒಂದು ದಿನದ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ
ಬಳ್ಳಾರಿ, ರಾಜ್ಯ ಶಾಖೆ 100 ವರ್ಷದ ಶತಮಾನೋತ್ಸವ ನಿಮಿತ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಮತ್ತು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಗುರುವಾರ ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ರಾಜ್ಯ ಮಟ್ಟದ “ಒಂದು ದಿನದ ಕ್ಯಾನ್ಸರ್ ವಿಶೇಷ ಜಾಗೃತಿ ಕಾರ್ಯಾಗಾರ”ವನ್ನು ಹಮ್ಮಿಕೊಳ್ಳಲಾಗಿತ್ತು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಕುಲಸಚಿವರಾದ ಸಿದ್ದು.ಪಿ.ಅಲಗುರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾನ್ಸರ್ ಅತ್ಯಂತ ವೇಗವಾಗಿ ವ್ಯಾಪಕವಾಗಿ, ವಯಸ್ಸು, ಲಿಂಗ, ಪ್ರದೇಶವನ್ನು ಮೀರಿ ಹರಡುತ್ತಿರುವ ಕಾಯಿಲೆ, ಅದನ್ನು ಬಂದ ನಂತರ ಚಿಕಿತ್ಸೆ ಕೊಡುವುದಕ್ಕಿಂತ ಬರದಂತೆ ತಡೆಗಟ್ಟಿ ಎಲ್ಲಾ ಪರಿಹಾರ ಮುಂಜಾಗೃತೆ ಕ್ರಮದ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಕ್ಯಾನ್ಸರ್ ಚಿಕಿತ್ಸೆ ನೀಡಲು ವಿಜ್ಞಾನಕ್ಕೆ ಇನ್ನು ಸವಾಲಾಗಿಯೇ ಉಳಿದಿದೆ.

ಕ್ಯಾನ್ಸರ್ ಬಂದರೆ ರೋಗಿಯ ಮನೋಬಲ ಆತ್ಮಬಲ ಶ್ರೀರಕ್ಷೆ ಇಂದಿನ ಯುವ ಜನತೆ ಈ ರೋಗದ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಜವಾಬ್ದಾರಿ ನಿಮ್ಮ ಮುಂದೆ ಇದೆ ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಡಾ.ಎಸ್.ಜೆ.ವಿ.ಮಹಿಪಾಲ್ ಅವರು ಮಾತನಾಡಿ, ರೋಗದ ಚಿಕಿತ್ಸೆ ಸಾಕಷ್ಟು ದಾರಿಗಲು ಲಭ್ಯವಿದೆ, ಆದರ ಸಹಾಯದಿಂದ ಈ ಮಾರಕ ರೋಗವನ್ನು ತಡೆಗಟ್ಟಲು ಯುವ ಜನತೆ ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಯ ವಿತ್ತಾಧಿಕಾರಿಗಳಾದ ಡಾ.ಪ್ರಶಾಂತ್.ಕೆ.ಸಿ, ಡಾ.ವಿಜಯ ಕುಮಾರಿ, ಡಾ.ಅರ್ಚನಾ, ಡಾ.ನಿರ್ಮಲ.ಜೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾದ ಎಂ.ವಲಿಬಾಷಾ, ಪಿ.ವಾಸು, ಮೆಹಬೂಬ್ ಬಾಷಾ, ಚನ್ನ ಬಸವ, ಕೆ.ಮಹಾಂತೇಶ್, ಶ್ವೇತ ಮತ್ತು ಕರ್ನಾಟಕ ರಾಜ್ಯ 11 ವಿಶ್ವದ್ಯಾಲಯದ ನೋಡಲ್ ಅಧೀಕಾರಿಗಳು, ಯುತ್ ರೆಡ್ ಕ್ರಾಸ್ ವಿದ್ಯಾರ್ಥಿಗಳು, ಸ್ವಯಂ ಸೇವಕರು ಸೇರಿದಂತೆ ಸುಮಾರು 110 ಜನ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು…

ವರದಿ. ಗಣೇಶ್, ಕೆ, ಹೊಸಪೇಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend