ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಪಟ್ಟ ಬಿಜೆಪಿ ಪಾಲಿಗೆ…!!!

Listen to this article

ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಪಟ್ಟ ಬಿಜೆಪಿ ಪಾಲಿಗೆ.

ಮಹಾಲಿಂಗಪುರ: ಭಾರಿ ಕುತೂಹಲ ಕೆರಳಿಸಿದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸರಳ ಮತ್ತು ಶಾಂತಯುವಾಗಿ ನಡೆದು ಬಿಜೆಪಿಯ ಅಭ್ಯರ್ಥಿ ಬಸವರಾಜ ಹಿಟ್ಟಿನಮಠ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ಶುಕ್ರವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯಿಂದ ಬಸವರಾಜ ಹಿಟ್ಟಿನಮಠ, ಕಾಂಗ್ರೆಸ್ ನಿಂದ ಯಲ್ಲನಗೌಡ ಪಾಟೀಲ್ ಮತ್ತು ಜಾವೇದ್ ಭಾಗವಾನ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಯಲ್ಲನಗೌಡ ಪಾಟೀಲ್ ಸ್ಪರ್ಧೆಯಿಂದ ಹಿಂದೆ ಸರಿದು ಜಾವೇದ್ ಭಾಗವಾನ ಅವರಿಗೆ ಅವಕಾಶ ಮಾಡಿಕೊಟ್ಟರು. ಅಂತಿಮವಾಗಿ ಬಿಜೆಪಿಯಿಂದ ಬಸವರಾಜ ಹಿಟ್ಟಿನಮಠ ಹಾಗೂ ಕಾಂಗ್ರೆಸ್ ನಿಂದ ಜಾವೇದ್ ಭಾಗವಾನ ಕಣದಲ್ಲಿ ಉಳಿದರು.
ನಂತರ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿಯ 10 ಜನ ಸದಸ್ಯ ಸಂಖ್ಯಾಬಲ ಮತ್ತು ಶಾಸಕ ಸಿದ್ದು ಸವದಿ, ಸಂಸದ ಪಿ.ಸಿ.ಗದ್ದಿಗೌಡರ,ಪಕ್ಷೇತ್ರ ಅಭ್ಯರ್ಥಿ ಸಜನಸಾಬ ಪಂಡಾರಿ ಅವರು ಬಿಜೆಪಿ ಅಭ್ಯರ್ಥಿ 9ನೇ ವಾರ್ಡಿನ ಸದಸ್ಯ ಬಸವರಾಜ ಹಿಟ್ಟಿನಮಠ ಪರ ಮತ ಚಲಾಯಿಸುವ ಮೂಲಕ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.


ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಾವೇದ್ ಭಾಗವಾನ ಅವರು
9 ಸಂಖ್ಯಾಬಲ ಸದಸ್ಯರು ಮತ್ತು ಬಿಜೆಪಿಯ ಮೂರು ಬಂಡಾಯ ಸದಸ್ಯೆಯರ ಮತ ಪಡೆದರು ಸಹ ಒಂದು ಮತ ಅಂತರದಲ್ಲಿ ಸೋಲುನುಭವಿಸಿದರು.
ಕಳೆದ ವರ್ಷದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಮಖಂಡಿಯ ಡಿವೈಎಸ್ ಪಿ ಪಾಂಡುರಂಗಯ್ಯ, ಬನಹಟ್ಟಿಯ ಸಿಪಿಆಯ್ ಈರಯ್ಯ ಮಠಪತಿ,ಮಹಾಲಿಂಗಪುರ ಪಟ್ಟಣದ ಠಾಣಾಧಿಕಾರಿಗಳಾದ ವಿಜಯ್ ಕಾಂಬಳೆ ಮತ್ತು ನೂರಕ್ಕೂ ಹೆಚ್ಚು ಪೋಲೀಸ ಸಿಬ್ಬಂದಿ ಬಿಗಿಬಂದೂಬಸ್ತ್ ಒದಗಿಸಿದರು.
ರಬಕವಿ-ಬನಹಟ್ಟಿ ತಹಸಿಲ್ದಾರ ಎಸ್.ಬಿ.ಇಂಗಳೆ ಚುನಾವಣೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.

ಕಾರ್ಯಕರ್ತರ ಹರ್ಷೋಧ್ಘಾರ
ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಪಟ್ಟ ಬಿಜೆಪಿಯ ತೆಕ್ಕೆಗೆ ಸಿಕ್ಕಿದರಿಂದ ನಗರದ ಪ್ರಮುಖ ವೃತ್ತಗಳಲ್ಲಿ ಪಟಾಕ್ಷಿ ಸಿಡಿಸಿ ಕೇಸರಿ ಬಣ್ಣ ಎರಚಿ ಹಲವು ಬೀದಿಗಳಲ್ಲಿ ಮೆರವಣಿಗೆ ಮಾಡುವ ಮುಖಾಂತರ ಸಂಭ್ರಮಚಾರಣೆ ಮಾಡಿದರು.

ವರದಿ.ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend