ಕೋಮುವಾದಕ್ಕೆ ದಾರಿ ಕೊಡದ ದ್ರಾವಿಡರು ಆತಂಕವಿದ್ದರೂ ಪ್ರಯತ್ನದಲ್ಲಿ ಸಂಘ ಪರಿವಾರದವರು…!!!

Listen to this article

ಕೋಮುವಾದಕ್ಕೆ ದಾರಿ ಕೊಡದ ದ್ರಾವಿಡರು ಆತಂಕವಿದ್ದರೂ ಪ್ರಯತ್ನದಲ್ಲಿ ಸಂಘ ಪರಿವಾರದವರು…!!!

 

ಹಿಂದೂಗಳ ಯಾವ ಧಾರ್ಮಿಕ ಗ್ರಂಥಗಳಲ್ಲೂ ಇಲ್ಲದ ‘ಹಿಂದೂ’ ಐಡಿಯಾಲಾಜಿ ಅಜೇಂಡಾವನ್ನು ರಚನೆ ಮಾಡಿಕೊಂಡು ಬ್ರಾಹ್ಮಣತ್ವದ ಮೂಲಭೂತವಾದವನ್ನು ಈ ದೇಶದ ಮೂಲನಿವಾಸಿ ಜನಾಂಗದ ಮೇಲೆ ಹೇರಲೆಂದೇ ಚಿತ್ಪಾವನ ಬ್ರಾಹ್ಮಣರು ನಿರ್ಧಾರ ಮಾಡಿದರು.

*ಅದಕ್ಕಾಗಿ 1925ರಲ್ಲಿ ಕೆ.ಬಿ.ಹೆಡಗೇವಾರ ನೇತೃತ್ವದಲ್ಲಿ, ಬಿ.ಎಸ್. ಮೂಂಜೆ, ಎಲ್.ವಿ.ಪರಾಂಜೆಪೆ, ಬಿ.ಪಿ.ಥಾಲ್ಕರ್, ವಿ.ಡಿ.ಸಾವರ್ಕರ್ ಮುಂತಾದವರು ಕೂಡಿಕೊಂಡು ಸ್ಥಾಪನೆ ಮಾಡಿರುವ ಕೋಮುವಾದಿ ಸಂಘಟನೆಯೇ”ರಾಷ್ಟ್ರೀಯ ಸ್ವಯಂ ಸೇವಕ ಸಂಘ”.*

*ಹಿಂದೂ ರಾಷ್ಟ್ರದ ಸಿದ್ಧಾಂತವನ್ನು ಪ್ರತಿಪಾದನೆ ಮಾಡಲು “ಧರ್ಮೋ ರಕ್ಷಿತಿ ರಕ್ಷತ:” ಎಂಬ ಘೋಷ ವಾಕ್ಯದೊಂದಿಗೆ “ಬ್ರಾಹ್ಮಣ ಧರ್ಮ”ವನ್ನು ರಕ್ಷಣೆ ಮಾಡಲು ಹಾಗೂ ಕಾವಿಯಡಿಯಲ್ಲಿನ ಖದೀಮರಾದ* *ಎಸ್.ಎಸ್.ಆಪ್ಟೆ, ಸ್ವಾಮಿ ಚಿನ್ಮಾಯಾನಂದ, ಪ್ರಜ್ಞಾಸಿಂಗ್ ಠಾಕೂರ್, ಸಾಕ್ಷಿ ಮಹಾರಾಜ್, ಮುಂತಾದ ಆತಂಕವಾದಿಗಳನ್ನು ಸಂರಕ್ಷಿಸಲು ರಚಿಸಿರುವ ಸಂಘಟನೆ’ವಿಶ್ವ ಹಿಂದೂ ಪರೀಷತ್”.*

ಇದು 1930ರ ದಶಕದಲ್ಲಿ ತಾನು ಒಂದು ಹಿಂದೂ ಸಾಂಸ್ಕೃತಿಕ ಸಂಘಟನೆ ಎಂದು ಬಣ್ಣಿಸಿಕೊಂಡಿದ್ದ ಆರೆಸ್ಸೆಸ್ ರಾಜಕೀಯಕ್ಕೂ ತನಗೂ ಸಂಬಂಧವಿಲ್ಲವೆಂದು 1948ರ ಕಾಲಘಟ್ಟದಲ್ಲಿ ಆಗಿನ ಗೃಹಮಂತ್ರಿಯಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ರವರಿಗೆ ವಾಗ್ದಾನ ಮಾಡಿತ್ತು.

2014ರ ಚುನಾವಣೆಯಲ್ಲಿ ಈ ವಾಗ್ದಾನವನ್ನು ಮುರಿದು ಸಕ್ರೀಯವಾಗಿ ರಾಜಕೀಯದಲ್ಲಿ ಬಿ.ಜೆ.ಪಿ.ಪರವಾಗಿ ಪಾಲ್ಗೊಂಡಿತು ಅಂದಿನಿಂದ ಇಂದಿನವರೆಗೂ ತಮಗೆ ಸಿಕ್ಕಿರುವ ರಾಜ್ಯಾಧಿಕಾರದ ದುರ್ಲಾಭ ಪಡೆದುಕೊಂಡು ಭಾರತವನ್ನು ಕೇಸೆರಿಕರಣ ಮಾಡುವ ಮೂಲಕ ಬ್ರಾಹ್ಮಣ ಪ್ರಭುತ್ವವನ್ನು ಹೇರಲು ಹವಣಿಸುತ್ತಲಿದ್ದಾರೆ.

ರಾಷ್ಟ್ರದಾದ್ಯಂತ ರಾಷ್ಟ್ರವಾದದ ತನ್ನ ಹಿಡೆನ್ ಅಜೇಂಡಾವನ್ನು ಹೇರಲು ಹವಣಿಸುತ್ತಲಿರುವ “ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದ್ರಾವಿಡ ನಾಡಲಿ ಯಶಸ್ಸು ಕಾಣುತಾ ಇಲ್ಲ.
ಇದಕ್ಕೆ ಕಾರಣ ಸ್ವಾಭಿಮಾನಿ ದ್ರಾವಿಡ ಮೂಲನಿವಾಸಿಗಳಾದ ತಮೀಳು, ತೆಲಗು ಮತ್ತು ಮಲಯಾಳಿ ಜನಾಂಗದವರ ಬದ್ಧತೆಯಾಗಿದೆ ಆದರೆ ಈ ಬದ್ಧತೆ ಕರ್ನಾಟಕದಲ್ಲಿ ಸೊರಗಿ ಹೋಗಿದೆ ಅದಕ್ಕಾಗಿಯೇ ಇಂದು ಕರ್ನಾಟಕವು ಬ್ರಾಹ್ಮಣತ್ವದ ಕೋಮುವಾದಕ್ಕೆ ಬಲಿಯಾಗಿ ಆಗಾಗ್ಗೆ ಧಗಧಗಿಸುತ್ತಲಿದೆ.

ಈಗ ಉಳಿದಿರುವುದು ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು.

ಉದಾ ನೋಡಿ:-

*ದ್ರಾವಿಡ ರಾಜ್ಯಗಳು.*
1. ಆಂದ್ರಪ್ರದೇಶ
2. ಕೇರಳ
3. ಕರ್ನಾಟಕ
4. ತಮಿಳನಾಡು
5. ತೆಲಂಗಾಣ

*ಕೇಂದ್ರಾಡಳಿತ ಪ್ರದೇಶಗಳಾದ*

ಅಂಡಮಾನ ನಿಕೋಬಾರ್, ಪಾಂಡಿಚೇರಿ, ಲಕ್ಷದ್ವೀಪ.

*ಲೋಕ ಸಭೆಯಲ್ಲಿ ಇರುವ ಸದಸ್ಯರ ಹುದ್ದೆಗಳು.*
1. ಆಂದ್ರಪ್ರದೇಶ -25
2. ಕೇರಳ -20
3. ಕರ್ನಾಟಕ _28
4. ತಮಿಳನಾಡು -39
5. ತೆಲಂಗಾಣ -17

*ಒಟ್ಟು ಲೋಕ ಸಭಾ ಸೀಟುಗಳು ; 129*

ಒಟ್ಟು ಭಾರತೀಯ ಜನತಾ ಪಕ್ಷದ ಸದಸ್ಯರು: 29.
ಕರ್ನಾಟಕದಲ್ಲಿಯೇ : 25.
ತೆಲಂಗಾಣದಲ್ಲಿ : 4
ಉಳಿದ ರಾಜ್ಯ ಮತ್ತು ಕೇಂದ್ರಾಳಿತ ಪ್ರದೇಶದಲ್ಲಿ ಒಂದೂ ಇಲ್ಲ.

*ರಾಜ್ಯ ಸಭೆಯಲ್ಲಿ ಇರುವ ಸದಸ್ಯರ ಹುದ್ದೆಗಳು.*

1. ಆಂದ್ರಪ್ರದೇಶ -11
2. ಕೇರಳ -9
3. ಕರ್ನಾಟಕ _12
4. ತಮಿಳನಾಡು -18
5. ತೆಲಂಗಾಣ -7

ಒಟ್ಟು 57 ರಾಜ್ಯಸಭಾ ಸದಸ್ಯರ ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷ ಪಡೆದದ್ದು ಕೇವಲ 9 ಸ್ಥಾನಗಳು ಅವುಗಳು.

ಆಂದ್ರಪ್ರದೇಶದಲ್ಲಿ: 4
ಕರ್ನಾಟಕದಲ್ಲಿ :5

*ವಿಧಾನ ಸಭೆಗಳ ಸ್ಥಿತಿ :*

1. ಆಂದ್ರಪ್ರದೇಶ : ಒಟ್ಟು ಸ್ಥಾನಗಳು 175. ಬಿ.ಜೆ.ಪಿ. ಶೂನ್ಯ’0”
2. ಕೇರಳ : ಒಟ್ಟು ಸ್ಥಾನಗಳು 140.
ಬಿ.ಜೆ.ಪಿ. 01
3. ಕರ್ನಾಟಕ: ಒಟ್ಟು ಸ್ಥಾನಗಳು 224. ಬಿ.ಜೆ.ಪಿ. 117
4. ತಮಿಳನಾಡು : ಒಟ್ಟು ಸ್ಥಾನಗಳು 234. ಬಿ.ಜೆ.ಪಿ. ಶೂನ್ಯ ‘0’
5. ತೆಲಂಗಾಣ : ಒಟ್ಟು ಸ್ಥಾನಗಳು 119. ಬಿ.ಜೆ.ಪಿ. 01

*ಅಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೋಮುವಾದಿ ಆಡಳಿತದ ಅಜೆಂಡಾಕ್ಕೆ*
*ಬಲಿಯಾದ ದ್ರಾವಿಡ ರಾಜ್ಯಗಳಲ್ಲಿ ಕರ್ನಾಟಕ ಮಾತ್ರ ಉನ್ನತ ಸ್ಥಾನದಲ್ಲಿದೆ.*
*ಇದಕ್ಕೆ ಕಾರಣ ಆಯಾ ಜಾತಿ ಜನಾಂಗದ ಮಹಾಪುರುಷರ ಇತಿಹಾಸದ ಅರಿವಿನ ಕೊರತೆ,* *ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಬಳಕೆ* *ಮಾಡಿಕೊಳ್ಳುತ್ತಲಿರುವ ಮಧಾಂದ ಅಸ್ಪೃಶ್ಯರು.*
*ಅಂಧ ಶೃದ್ಧೆಯಲ್ಲಿ ಮುಳಗಿರುವ ಶೂದ್ರರು,* *ಗುಣಾತ್ಮಕ ಶಿಕ್ಷಣ ಪಡೆಯದೆ ಕೇವಲ ಪಧವಿಗಾಗಿ ಓದುವ ಹವ್ಯಾಸದ ಯುವ ಪೀಳಿಗೆ,* *ರಾಜ್ಯಾಧಿಕಾರಕ್ಕಾಗಿ ತಲೆ ಹಿಡುಯುತ್ತಲಿರುವ ಸಮಾಜದ ಧುರಿಣರು. ಅಂಧ ಭಕ್ತರು, ಮೂಲಭೂತವಾದಿಗಳು,* *ಮುಂತಾದವರ ಬೇಜವಾಬ್ದಾರಿಯಿಂದಾಗಿ ಕರ್ನಾಟಕದಲ್ಲಿ ಕೂಮುವಾದ ಅಡಿಯಿಟ್ಟು ಅಟ್ಟಹಾಸದಿಂದ ಮೆರಯುತ್ತಲಿದೆ.*
*ಉಳಿದ ರಾಜ್ಯಗಳಲ್ಲಿ ಇಂತಹ ಸಮಾಜಘಾತುಕರ ಸಂಖ್ಯೆ ಬೆಳೆದರೆ ಪ್ರಬುದ್ಧ ಭಾರತವಲ್ಲ,* *ಇರುವ ಭಾರತವೂ ಭಾರತವಾಗಿರದೇ ಬ್ರಾಹ್ಮಣ ಭಾರತ, ಬಂಡವಾಳಶಾಹಿ ಭಾರತವಾಗುವುದರಲ್ಲಿ ಬೇರೆ ಮಾತಿಲ್ಲ.

ಕ್ರಾಂತಿಕಾರಿ ಜೈಭೀಮ್✍️ ವಿಠ್ಠಲ ವಗ್ಗನ್ಕಲಬುರಗಿ.

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend