ಹರಿದು ಬರುತ್ತಿರುವ ಕೃಷ್ಣಾ ನದಿ ಸಂತಸದಲ್ಲಿ ಮೀನುಗಾರರು…!!!

Listen to this article

ಹರಿದು ಬರುತ್ತಿರುವ ಕೃಷ್ಣಾ ನದಿ ಸಂತಸದಲ್ಲಿ ಮೀನುಗಾರರು

ಕರಾವಳಿಯ ಬಂದರು ಮೀನು ಮಾರ್ಟೆಕ ತರ ಕಂಡರು ಇದು ಮೀನು ಮಾರ್ಕೆಟ್ ಅಲ್ಲ ರಬಕವಿ ಬನಹಟ್ಟಿ ಪಕ್ಕದ ಕೃಷ್ಣಾ ನದಿ ತೀರ. ಮಹಾರಾಷ್ಟ್ರ ಕರ್ನಾಟಕದಲ್ಲಿ ಸತತ ಧಾರಾಕಾರವಾಗಿ ಮಳೆ ಬಿಳ್ಳುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಕರ್ನಾಟಕದ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಆತಂಕ ಸೃಷ್ಟಿಯಾಗಿದ್ದು ಜನ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುತ್ತಿದ್ದರೆ ಇತ್ತ ಮೀನುಗಾರಿಕೆ ಸಂತಸದಿಂದ ಉದ್ಯೋಗ ಮಾಡುತ್ತಿದೆ.

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ಹತ್ತಿರದ ಕೃಷ್ಣಾ ತೀರದಲ್ಲಿ ಮೀನುಗಾರರು ನದಿಯಲ್ಲಿ ನೀರಿನ ಜೋತೆಗೆ ಲಕ್ಷಾಂತರ ಮೀನು ಹರಿದು ಬರುತ್ತಿರುವನ್ನು ಹಿಡಿದು ಮಾರಾಟ ಮಾಡುತ್ತಿದ್ದು ಮೀನುಗಾರಿಕೆ ದುಡಿಮೆಗೆ ಮತ್ತಷ್ಟು ಉತ್ತೇಜನ ಸಿಕ್ಕಂತಾಗಿದೆ ಕೃಷ್ಣಾ ನದಿಯಲ್ಲಿ ಸಾವಿರಾರು ಕ್ಯೂಸಿಕ್ ನೀರು ಹರಿದು ಬರುತಿದ್ದು ಇದರೊಟ್ಟಿಗೆ ಲಕ್ಷಾಂತರ ಮೀನುಗಳು ಸಹ ಹರಿದು ಬರುತ್ತಿವೆ.ಹತ್ತಾರು ವರ್ಷಗಳಿಂದ ಸ್ಥಳೀಯ ಮೀನುಗಾರರು ಪ್ರತಿನಿತ್ಯ ಮೀನು ಹಿಡಿದು ತಮ್ಮ ಉಪಜೀವನ ಸಾಗಿಸುತ್ತಾರೆ. ಸದ್ಯ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನುಗಳು ಹರಿದು ಬರುತ್ತಿರುವುದು ಮೀನುಗಾರರಿಗೆ ಸಂತಸ ತಂದಿದೆ.

ಸ್ಥಳೀಯ ಹಿಪ್ಪರಗಿ ಬ್ಯಾರೇಜನ ಎಲ್ಲ ಗೇಟ್ ತೆರೆಯಲಾಗಿದೆ ತುಂಬಿ ಹರಿಯುತ್ತಿರುವ ನದಿಯನ್ನು ನೋಡಲು ನೂರಾರು ಜನ ಬರುತ್ತಿದ್ದು ಇಲ್ಲಿ ಮೀನುಗಳನ್ನು ಹಿಡಿದು ಸಾಗಿಸುವ ದೃಶ್ಯ ಕಂಡ ಜನ ಇದು ಕರಾವಳಿ ಬಂದರು ಮಾದರಿಯಲ್ಲಿ ಕಾಣುತ್ತಿರುವುದು ತುಂಬಾ ಅಪರೂಪದವಾಗಿದೆ ಎಂದು ಹೇಳುತ್ತಿದ್ದಾರೆ.


ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend