ಆಯುಷ್ಮಾನ ಭಾರತ್ ಹಾಗೂ ಆರೋಗ್ಯ ಕಾರ್ಡ ವಿತರಣೆ…!!!

Listen to this article

ಆಯುಷ್ಮಾನ ಭಾರತ್ ಹಾಗೂ ಆರೋಗ್ಯ ಕಾರ್ಡ ವಿತರಣೆ.

ಸಿಂಧನೂರು : ಜುಲೈ. 13 ತಾಲೂಕಿನ ಕೆ. ಹೊಸಳ್ಳಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಗ್ರಾಮ ಪಂಚಾಯತಿ ಗುಂಜಳ್ಳಿ ಹಾಗೂ ತುರವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಗುಂಜಳ್ಳಿ ಉಪಕೇಂದ್ರ ವತಿಯಿಂದ ಆಯುಷ್ಮಾನ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸಲಾಯಿತು.

 

ಈ ಸಂದರ್ಭದಲ್ಲಿ ಗುಂಜಳ್ಳಿ ಉಪಕೇಂದ್ರ ಸುರಕ್ಷತಾ ಅಧಿಕಾರಿಗಳಾದ ಶ್ರೀಮತಿ ಮೋದಿನ್ ಬೀ ಮಾತನಾಡಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಆಯುಷ್ಮಾನ ಭಾರತ್ ಕಾರ್ಡ ಆರಂಬಿಸಲಾಗಿದೆ. ಇದರಲ್ಲಿ ಪ್ರತಿಯೊಬ್ಬ ಕಾರ್ಡದಾರರಿಗೆ 5 ಲಕ್ಷ ರೂಪಾಯಿ ಗಳವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ. ಬಿ.ಪಿ.ಎಲ್.ಕಾರ್ಡ ಹೊಂದಿದ ಎಲ್ಲಾ ಬಡ ಕುಟುಂಬದ ಸದಸ್ಯರಿಗೆ ಕ್ಯಾನ್ಸರ್, ಕಿಡ್ನಿ, ಹೃದಯ ಕಾಯಿಲೆ,ನರರೋಗ ಕಾಯಿಲೆಗಳು ಹಾಗೂ ಇನ್ನಿತರ ಕಾಯಿಲೆಗಳಿಗೆ ಸುಮಾರು 5 ಲಕ್ಷ ರೂಪಾಯಿ ಖರ್ಚು ಭರಿಸುವಂತಹ ಸಂದರ್ಭದಲ್ಲಿ ಈ ಆಯುಷ್ಮಾನ ಭಾರತ್ ಕಾರ್ಡ ಹೊಂದಿದರೆ 5ಲಕ್ಷ ರೂಪಾಯಿವರೆಗೆ ಉಚಿತವಾಗಿ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ನಿರ್ದರಿಸಿದೆ. ಇದನ್ನು ಗ್ರಾಮದ ಎಲ್ಲಾ ಬಡ ಕುಟುಂಬದವರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ವೀರೇಶ ಕಾರಲಕುಂಟಿ, ಕೆ.ಎಚ್.ಪಿ.ಟಿ.ತಾಲೂಕು ಸಂಯೋಜಕರಾದ ಹನುಮಂತಪ್ಪ, ವನಸಿರಿ ಫೌಂಡೇಶನ್ ಜಿಲ್ಲಾ ಸಾಮಾಜಿಕ ಜಾಲತಾಣದ ಅದ್ಯಕ್ಷರಾದ ಚನ್ನಪ್ಪ ವಿಶ್ವಕರ್ಮ, ಅಂಗನವಾಡಿ ಕೇಂದ್ರದ ಶಿಕ್ಷಕಿ ರಂಜಾನಬೀ, ಆಶಾ ಕಾರ್ಯಕರ್ತೆ ದೇವಮ್ಮ,ಹನುಮಂತಮ್ಮ,ಗ್ರಾಮಸ್ಥರಾದ ಸುರೇಶ ಬಡಿಗೇರ, ರಾಜಪ್ಪ ಕುರುಬರು, ಶೇಖರಪ್ಪ, ಪಕೀರಯ್ಯ ಸ್ಮಾಮಿ, ನಾಗಲಿಂಗಪ್ಪ ವಿಶ್ವಕರ್ಮ, ಬಸಮ್ಮ, ಶ್ರೀಕಾಂತ,ಇನ್ನಿತರರು ಉಪಸ್ಥಿತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend