ಕೊರೋನಾ ಮಾರಕಕ್ಕೆ ತುತ್ತಾಗುವ ಸಾಧ್ಯತೆ ಇರುವ ಅಕ್ರಮ ಮರಳು ದಂದೆಗೆ ಕೊನೆ ಯಾವಾಗ???

Listen to this article

ಕೊರೊನ ಅನ್ನೋ ಹೆಮ್ಮಾರಿ ಎಲ್ಲಿ ಅಡಗಿ ಕುಳಿತರು ಅಟ್ಟಾಡಿಸಿ ಅಟ್ಯಾಕ್ ಮಾಡಿ ಜಾತಿ ವಯಸ್ಸು ಅಂತಸ್ತು ಯಾವುದು ನೋಡದೆ ಪ್ರಾಣ ಹಿಂಡುತ ಇದೆ ಜನ ತಮ್ಮ ತಮ್ಮ ಪ್ರಾಣ ಉಳಿಸಿ ಕೊಳ್ಳುವಂತೆ ಇಡೀ ಸರ್ಕಾರ ಹಗಲು ರಾತ್ರಿ ಕಷ್ಟ ಪಟ್ಟು ಜನರಿಗೆ ಮನೆಯಲ್ಲಿ ಇರುವಂತೆ ಕೈ ಕಾಲು ಹಿಡಿದು ಬೇಡುವಂತಾಗಿದೆ ಆದ್ರೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸೂಗುರು ಗ್ರಾಮದ ಕೃಷ್ಣ ನದಿ ದಂಡೆಯಲ್ಲಿ ಇಲ್ಲಿನ ಗ್ರಾಮದ ಜನಕ್ಕೆ ಇದಾವುದೂ ಅರಿವೇ ಇಲ್ಲ ಇದೆ ಗ್ರಾಮದಲ್ಲಿ ಈಗಾಗಲೇ ಸೋಂಕಿಗೆ ಒಬ್ಬರು ಬಲಿಯಾಗಿ ಮತ್ತಿಬ್ಬರಿಗೆ ಸೋಂಕು ತಗುಲಿದೆ ಇಡೀ ಗ್ರಾಮವೇ ಭಯದ ವಾತಾವರಣದಲ್ಲಿ ಆದ್ರೆ ಕೆಲವರು ಮಾತ್ರ ಕೊರೊನ ಯಾರಿಗೆ ಬಂದ್ರೆ ನಮಗೇನು ಲಾಕ್ ಡೌನ್ ಇದ್ರೆ ನಮಗೇನು ಅನ್ನುವಂತೆ ರಾತ್ರೋ ರಾತ್ರಿ ಕೂಲಿ ಆಳುಗಳನ್ನು ಗುಂಪು ಸೇರಿಸಿಕೊಂಡು ನದಿ ದಂಡೆಗೆ ಇಳಿದ್ರೆ ರಾತ್ರಿ ಎಲ್ಲ ಟ್ರಾಕ್ಟರ್ ಗಳ ಅಕ್ರಮ ಮರಳು ಕಾಮಗಾರಿ ನಡೆಯುತ್ತೆ ಎಲ್ಲ ಕೊರೊನ ನಿಯಮ ಗಾಳಿಗೆ ತೂರಿ ಅಂತರ ಮರೆತು ಕೂಲಿ ಆಳುಗಳು ಕೆಲಸದಲ್ಲಿ ತೊಡಗಿದ್ರೆ ಕೊರೊನ ವಕ್ಕರಿಸಿ ಇಡೀ ಊರೇ ಕೊರೊನ ಪೀಡಿತವಾಗಬಹುದು ಇತ್ತ ಪೊಲೀಸ್ ಇಲಾಖೆ ಗಮನ ಹರಿಸಿ ಕೊರೊನ ಮಹಾಮಾರಿ ಒಂದು ಹಂತಕ್ಕೆ ಬರೋವರೆಗೂ ಸುಗುರು ಗ್ರಾಮದಲ್ಲಿ ಯಾವುದೇ ಇಂತ ಅಕ್ರಮ ಕೊರೊನ ಗೆ ತುತ್ತಾಗುವ ಚಟುವಟಿಕೆಗಳು ನಡೆಯದಂತೆ ಕಾನೂನು ಕ್ರಮ ಜರುಗಿಸಬೇಕಿದೆ ನದಿ ದಂಡೆಗೆ ಯಾವುದೇ ಟ್ರ್ಯಾಕ್ಟರ್ ಗಳು ಇಳಿಯದಂತೆ ಸೂಕ್ತ ಕ್ರಮ ಜರುಗಿಸಬೇಕಿದೆ ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಸೂಗುರು ಕೊರೊನ ಸೋಂಕಿನ ಗ್ರಾಮವಾದರು ಅಚ್ಚರಿ ಇಲ್ಲ ಅಧಿಕಾರಿಗಳು ಸುದ್ದಿ ಇಂದ ಎಚೆತ್ತು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದು ಎಚ್ಚರಿಕೆ ಪತ್ರಿಕೆ ತಂಡದ ಆಶಯ ಮತ್ತು ಇಂತಹ ಒಂದು ಸನ್ನಿವೇಶದಲ್ಲಿ ಇಂತಹ ಒಂದು ಕಾರ್ಯ ಬೇಕಾ ನೀವೇ ಹೇಳಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕಾರ್ಯಪ್ರವೃತ್ತರಾಗಲಿ ಎಂಬುದೇ ನಮ್ಮ ಒಂದು ಕೋರಿಕೆ…

ವರದಿ. ಮುಕ್ಕಣ್ಣ ಹುಲಿಗುಡ್ಡ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend