ಮೊಳಕಾಲ್ಮೂರು: ಬೆಳೆ ವಿಮಾ ಕಂಪೆನಿಯ ತಾರತಮ್ಯ ವಿರೋಧಿಸಿ ಪಟ್ಟಣದಲ್ಲಿ ರೈತರು ಆಕ್ರೋಶ.!

Listen to this article

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮುರು/ ಇಂದು (ಜುಲೈ-12) ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ರೈತರ ವಿಮೆ ಹಣದ ತಾರತಮ್ಯ ವಿರೋಧಿಸಿ ಪ್ರತಿಭಟನೆ.* ತಾಲೂಕಿನ 16 ಪಂಚಾಯಿತಿಗಳ ಸಾವಿರಾರು ರೈತರು ಬೆಳೆ ವಿಮೆ ಕಟ್ಟಿದ್ದು ಕೇವಲ ಮೂರು ಪಂಚಾಯಿತಿಗಳನ್ನು ಮಾತ್ರ ಆಯ್ಕೆ ಮಾಡಿರುವ ವಿಮಾ ಕಂಪನಿ ಹಾಗೂ ಕೃಷಿ ಇಲಾಖೆಯ ಕ್ರಮವನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಅಖಿಲ ಭಾರತ್ ಕಿಸಾನ್ ಸಭಾ ಸೇರಿದಂತೆ ಹಲವು ಒಕ್ಕೂಟಗಳ ನೇತೃತ್ವದಲ್ಲಿ ಮೊಳಕಾಲ್ಮುರು ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು.

ಪ್ರತಿ ಭಾರಿಯು ತಾಲೂಕು ಬರಗಾಲಕ್ಕೆ ತುತ್ತಾಗುತ್ತಿದ್ದೂ ಬೆಳೆ ನಷ್ಟ ಪರಿಹಾರದ ಸೋಗಿನಲ್ಲಿ ರೈತರಿಗೆ ಬೆಳೆ ವಿಮೆಯ ಆಸೆ ತೋರಿಸಿ ವಿಮಾ ಕಂಪನಿಯೂ ಲಕ್ಷಾಂತರ ರುಪಾಯಿ ಹಗಲು ದರೋಡೆ ನಡೆಸುತ್ತಿದೆ. ಇದರ ಹಿಂದೆ ಕೃಷಿ ಇಲಾಖೆ ಅವೈಜ್ಞಾನಿಕ ಮಾನದಂಡಗಳು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿ ಬೆಳೆ ವಿಮೆ ಬಾರದಂತೆ ಮಾಡಿದೆ. ವಿಮಾ ಕಂಪನಿ ಹಾಗೂ ಕೃಷಿ ಇಲಾಖೆಯ ನಡೆಯಿಂದಾಗಿ ಸಾವಿರಾರು ರೈತರಿಗೆ ಅನ್ಯಾಯವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಭಟನಾ ನಿರತ ಸ್ಥಳಕ್ಕೆ ತಹಸೀಲ್ದಾರ್ ಸುರೇಶ್ ಕುಮಾರ್ ಆಗಮಿಸಿ ರೈತರ ಜೊತೆಗೆ ಮಾತನಾಡಿದ ಅವರು ಮದ್ಯಾಹ್ನ 3:ಗಂಟೆ ಸಮಯಕ್ಕೆ ಸಂಬಂಧಪಟ್ಟ ವಿಮಾ ಕಂಪನಿ ಅಧಿಕಾರಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ಕರೆ ತಂದು ರೈತರ ಸಮ್ಮುಖದಲ್ಲಿ ಬೆಳೆ ವಿಮೆಯ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ ಸಭೆಯಲ್ಲಿ ರೈತರ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷರಾದ ಬೆಳಗಲ್ ಈಶ್ವರಯ್ಯ ಸ್ವಾಮಿ ಸಿಪಿಐ ಮುಖಂಡ ಜಾಫರ್ ಶಾರೀಫ್ ರೈತ ಮುಖಂಡರಾದ ಮರ್ಲಹಳ್ಳಿ ರವಿಕುಮಾರ್ ಸೇರಿದಂತೆ ತಾಲೂಕಿನ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend