ಬಿ.ಜಿ.ಕೆರೆ: ಕಲಾತಾರೆ ಕರೋಕೆ ಗಾಯನ ಸ್ಟುಡಿಯೋದಲ್ಲಿ ಗಾನಯೋಗಿ ಡಾ. ಪಂ.ಪುಟ್ಟರಾಜ ಗವಾಯಿಗಳ 11ನೇ ವರ್ಷದ ಪುಣ್ಯಸ್ಮರಣೆ.!

Listen to this article

ಚಿತ್ರದುರ್ಗ: ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆಯ ಕಲಾತಾರೆ ಕರೋಕೆ ಗಾಯನ ಸ್ಟುಡಿಯೋದಲ್ಲಿ ಪಂಚಾಕ್ಷರಿ ಗವಾಯಿಗಳರವರ ಮತ್ತು ಪುಟ್ಟರಾಜ ಗವಾಯಿಗಳರವರ ಸ್ಮರಣೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಲಾ ಸೈನ್ಯ (ರಿ) ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಜಿ.ಕೆರೆ ಉಪ್ಪಿ ಅವರು ಮಾತನಾಡಿದರು. ಕಣ್ಣಿದ್ದವರು ಮಾಡದ ಸಾಧನೆ ಕಣ್ಣಿಲ್ಲದ ಪಂ.ಪುಟ್ಟರಾಜ ಗವಾಯಿಗಳು ಮಾಡಿದ್ದಾರೆ. ಭಗವಂತನು ಅವರನ್ನು ವಿಶೇಷವಾಗಿ ಸೃಷ್ಟಿ ಮಾಡಿ ಅವರ ಸಾಧನೆಗೆ ಎಲ್ಲರೂ ಮಾರು ಹೋಗುವಂತೆ ಮಾಡಿದ್ದಾರೆ ಎಂದರು.

ಗಾಯಕರಾದ ಶಿವು ಕೋನಸಾಗರ ಅವರು ಮಾತನಾಡಿ ಈ ಮಹಾನ್‌ ಸಂತರು ಬರೆದ 8 ಹಿಂದಿ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಹಿರಿಮೆ ಅವರದು. ಯಾವುದೇ ಭಾಷೆ ಕಲಿಯಬಹುದು ಆದರೆ, ಭಾಷೆಯೊಳಗಿನ ಅಂತರಂಗ, ಕಲೆ ಹಾಗೂ ಸೌಂದರ್ಯ ಅರಿಯುವುದು ಕಷ್ಟ .ಅಂತಹ ಸಾಧನೆಯನ್ನು ಪಂ.ಪುಟ್ಟರಾಜ ಗವಾಯಿಗಳು ಮಾಡಿದ್ದಾರೆ. ಕಬ್ಬಿಣದ ಕಡಲೆಯಾಗಿದ್ದ ಬಸವ ಪುರಾಣವನ್ನು ಹಿಂದಿ ಭಾಷೆಗೆ ಅನುವಾದ ಮಾಡಿದ ಏಕೈಕ ಕನ್ನಡ ವಿದ್ವಾಂಸರು ಪಂ.ಪುಟ್ಟರಾಜರು ಆಗಿದ್ದಾರೆ. ಸಂಸ್ಕೃತದ 4 ಸಾವಿರ ವ್ಯಾಕರಣ ಸೂತ್ರಗಳನ್ನು ಕಂಠಪಾಠ ಮಾಡಿ ಹೇಳಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಎಂದರು.

ಈ ಕಾರ್ಯಕ್ರಮದಲ್ಲಿ ಹಿರೇಕೆರೆಹಳ್ಳಿಯ ಯರ್ರಿಸ್ವಾಮಿ, ಮುತ್ತಿಗಾರಹಳ್ಳಿ ಸಿ.ಓ.ನಾಗೇಶ್, ಗಾಯಕಿ ಹಿರಿಯೂರಿನ ನಾಗವೀಣಾ, ನೇರಲಗುಂಟೆ ಎಂ.ಬಿ.ಬೋರಣ್ಣ, ನೇರಲಗುಂಟೆ ವೆಂಕಟೇಶ್, ಕಾಟಪ್ಪನಹಟ್ಟಿ ಲೆಜೆಂಡ್ ಬೋರಣ್ಣ, ಗೊಂಚಿಗಾರ ಬೋರಣ್ಣ ಮತ್ತಿತರ ಕಲಾವಿದರು ಭಾಗವಹಿಸಿದ್ದರು.

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend