ಕರೋನಾ ಸಂಕಷ್ಟದ ಸಮಯದಲ್ಲಿ ಕರೋನ ವಾರಿಯರ್ಸ್ ಗಳಿಗೆ ಸಹಾಯಕ್ಕಾಗಿ ನಿಂತ ದಾನಿಗಳು…!!!

Listen to this article
ಕರೋನಾ ಸಂಕಷ್ಟದ ಸಮಯದಲ್ಲಿ ಕರೋನ ವಾರಿಯರ್ಸ್ ಗಳಿಗೆ ಸಹಾಯಕ್ಕಾಗಿ ನಿಂತ ದಾನಿಗಳು..
ಕರೋನಾ ದಾಳಿಗೆ  ಬಲಿಷ್ಠ ದೇಶಗಳೇ ಸಂಕಷ್ಟದ ಸ್ಥಿತಿಗೆ ಒಳಗಾಗುವಂತಾಗಿದೆ . ಕರೋನಾ ವೈರಸ್ ತಡೆಗಟ್ಟುವ ಸಲುವಾಗಿ ಕರೋನಾ ವಾರಿಯರ್ಸ್ ಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ರೋಗವನ್ನು ತಡೆಗಟ್ಟುವಲ್ಲಿ ಧೈರ್ಯಶಾಲಿಗಳಾಗಿ  ಕೆಲಸವನ್ನು ಮಾಡುತ್ತಿದ್ದಾರೆ ಇಂತಹ ಕೆಲಸಗಳಲ್ಲಿ ಪೋಲಿಸರೊಡನೆ ಜೊತೆಗೂಡಿ ಹೋಮ್ಗಾರ್ಡ್ಸ್ಗಳು ಬಹುಪಕ್ಷೀಯ ವಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ .
ಇಂಥವರ ಕೆಲಸವನ್ನು ಗುರುತಿಸಿ ಕೆಲವೊಂದು ದಾನಿಗಳು ಮುಂದೆ ಬಂದು ಹೋಮ್ ಗಾರ್ಡ್ಸ್ ಗಳಿಗೆ ಜೀವನ ನಿರ್ವಹಣೆಗಾಗಿ ಆಹಾರದ ಕಿಟ್ ಗಳನ್ನು ದಾನಿಗಳಾದ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಶಹಾಪೂರ್ ಗ್ರಾಮದ ಉದ್ದಿಮೆದಾರರಾದ ಗಿರೀಶ್ ಜಿ ಹಿರೇಮಠ ರವರು ಮುನಿರಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಮ್ ಗಾರ್ಡ್ಸ್ ಗಳಿಗೆ ಆಹಾರದ ಕಿಟ್ಗಳನ್ನು ವಿತರಿಸಿ ಅವರ ಸಂಕಷ್ಟಕ್ಕೆ ನೆರವಾಗಿದ್ದಾರೆ .ಈ ಸಮಯದಲ್ಲಿ ಮುನಿರಾಬಾದ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆದ ಸುಪ್ರೀತ್ ಪಾಟೀಲ್  ಕ್ರೈಮ್ ಬ್ರ್ಯಾಂಚಿನ ಪಿ.ಎಸ್.ಐ ಆದ ಕಾಮಣ್ಣ ನಾಯ್ಕ ಹನುಮಂತ ಭಜಂತ್ರಿ ಮತ್ತು ಸರ್ವ ಸಿಬ್ಬಂದಿಗಳ ನೇತೃತ್ವದಲ್ಲಿ ಹೋಮ್ ಗಾರ್ಡ್ಸ್ ಗಳಿಗೆ ಆಹಾರದ ಕಿಟ್ಗಳನ್ನು ವಿತರಿಸಿದರು.ಆಹಾರದ ಕಿಟ್ಟಣ್ಣ ವಿತರಿಸಿದ ದಾನಿಗಳಿಗೆ ಹೋಮ್ ಗಾರ್ಡ್ಸ್ ನ ಸಿಬ್ಬಂದಿಯಾದ  ಹುಸೇನ್ ಸಾಬ್ ಹುಲಿಗಿ ರವರು ಧನ್ಯವಾದಗಳನ್ನು ತಿಳಿಸಿದರು. ಈ ಸಮಯದಲ್ಲಿ ಸಮಾಜ ಸೇವಕರಾದ ಅಶೋಕ್ ಹೊಸಳ್ಳಿ ,ಮಹೆಬೂಬ್ ಸಾಬ್ ಕಿನ್ನಾಳ ಉದ್ದಿಮೆದಾರರು,ಮುನಿರಾಬಾದ್ ಪೊಲೀಸ್ ಠಾಣೆಯ ಸರ್ವ ಸಿಬ್ಬಂದಿಗಳು  ರವರು ಉಪಸ್ಥಿತರಿದ್ದರು.
ವರದಿ. ಮಂಜುನಾಥ್ ದೊಡ್ಡಮನಿ ವಿಜಯನಗರ
Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend