ಸ್ಥಳೀಯ ಅಭ್ಯರ್ಥಿಗಾಗಿ ಭುಗಿಲೆದ್ದ ತೇರದಾಳ ಮತಕ್ಷೇತ್ರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಆಕ್ರೋಶ…!!!

Listen to this article

ಸ್ಥಳೀಯ ಅಭ್ಯರ್ಥಿಗಾಗಿ ಭುಗಿಲೆದ್ದ ತೇರದಾಳ ಮತಕ್ಷೇತ್ರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಆಕ್ರೋಶ.

ಮಹಾಲಿಂಗಪುರ: ನಗರದ ಜೆಎಲ್ ಬಿಸಿ ಐಬಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರು ಸ್ಥಳೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಗಳು ಒಕ್ಕರಲಿನಿಂದ ಒಮ್ಮತ ಆಗ್ರಹಿಸಿದರು.
ಈವತ್ತಿನ ತೇರದಾಳ ಮತಕ್ಷೇತ್ರ ಉದಯಿಸುವುಕಿಂತ ಮುಂಚೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತಕ್ಷೇತ್ರ ಮತ್ತು ಮುಧೋಳ್ ಮಿಸಲು ಎರಡು ಮತ ಕ್ಷೇತ್ರಗಳಲ್ಲಿ ಕೂಡಿಕೊಂಡಿತ್ತು ನಂತರದ ದಿನಗಳಲ್ಲಿ ಜಮಖಂಡಿ ಕ್ಷೇತ್ರದ ರಬಕವಿ-ಬನಹಟ್ಟಿ,ತೇರದಾಳ ಮತ್ತು ಸುತ್ತಲಿನ ಹಳ್ಳಿಗಳು ಹಾಗೂ ಮುಧೋಳ್ ಮಿಸಲು ಮತಕ್ಷೇತ್ರದಿಂದ ಮಹಾಲಿಂಗಪುರ ಮತ್ತು ಸುತ್ತಲಿನ ಹಳ್ಳಿಗಳನ್ನು ಕೂಡಿಕೊಂಡು ಹೂಸದಾಗಿ ತೇರದಾಳ ವಿಧಾನಸಭಾ ಮತಕ್ಷೇತ್ರ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಪಕ್ಷವು ಸ್ಥಳೀಯರಿಗೆ ಅವಕಾಶ ನೀಡದೆ ಹೊರಗಿನ ಅನ್ಯ ವ್ಯಕ್ತಿಗಳಿಗೆ ಟಿಕೆಟ್ ನೀಡುತ್ತಾ ಬಂದಿರುವುದು ಸ್ಥಳೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ,ಆಕಾಂಕ್ಷಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಕಳೆದ ಚುನಾವಣೆಗಳಲ್ಲಿ ಶ್ರೀಮತಿ ಉಮಾಶ್ರೀಯವರಿಗೆ ಟಿಕೆಟ್ ನೀಡಿದ್ದು ಗೆಲುವಿನ ನಂತರ ಶಾಸಕಿ,ಸಚಿವೆಯಾಗಿ ಕಾರ್ಯಕರ್ತರ ಸಂಪರ್ಕ ಹೊಂದದೆ ಅಧಿಕಾರ ಅಮಲಿನಲ್ಲಿ ಕಾರ್ಯಕರ್ತರನ್ನು ಮರೆತು ಕೆಲವೆ ಜನರನ್ನು ಆಪ್ತರಂತೆ ಕಂಡಿದ್ದು ವಿಷಾದನೀಯ ಎಂದು ತಮ್ಮ ಅಳಲನ್ನು ತೊಡಿಕೂಂಡರು.
ಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ಹೇಳಿದರು. ಇಲ್ಲವಾದಲ್ಲಿ ಹೊರಗಿವರಿಗೆ ಮಣೆ ಹಾಕಿದರೆ ಪಕ್ಷದ ಅಭ್ಯರ್ಥಿ ಕಾರ್ಯಕರ್ತರ ಬೆಂಬಲ ಇಲ್ಲದೆ ಸೋಲು ಅನುಭವಿಸುವುದು ನಿಶ್ಚಿತ ಎಂದು ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. ಸ್ಥಳೀಯ ಆಕಾಂಕ್ಷಿಗಳಾಗಿ ಮೊದಲಿನಿಂದಲೂ ಸಮಾಜ ಸೇವೆ ಮಾಡಿ ಪಕ್ಷದಲ್ಲಿ ದುಡಿದ ಎಲೆಮರೆಯ ಕಾಯಿಯಂತಿದ್ದ ಡಾ॥ ಎ ಆರ್ ಬೆಳಗಲಿ, ಅತೀವೃಷ್ಠಿಯಾಗಿ ನೆರೆಪೀಡಿತ ಜನರ ಕಷ್ಟ ಆಲಿಸಿ ಕೊರೋನಾ ಸಮಯದಲ್ಲಿ ಹಲವಾರು ದಿನಸಿಕಿಟ್ಟ ನೀಡಿ ಸಮಾಜ ಸೇವೆಗೈದ ಡಾ॥ ಪದ್ಮಜೀತ ನಾಡಗೌಡ,ಕೋರೋನಾ ಸಮಯದಲ್ಲಿ ಉಚಿತ ಅಂಬುಲೆನ್ಸ ವ್ಯವಸ್ಥೆ ಮಾಡಿ ಸಮಾಜ ಸೇವೆಯಲ್ಲಿ ತೊಡಗಿದ ಯುವ ಉದ್ಯಮಿ ಸಿದ್ದು ಕೊಣ್ಣೂರ,ರಂಗನಗೌಡ ಪಾಟೀಲ್,ಎಸ್ ಎಮ್ ಉಳ್ಳಾಗಡ್ಡಿ ಸರ್,ರಾಜು ನಂದೆಪ್ಪನವರ, ಪ್ರವೀಣ್ ನಾಡಗೌಡ ಮತ್ತು ಸ್ಥಳೀಯ ಕಾರ್ಯಕರ್ತರಿಗೆ ಯಾರಿಗಾದರು ಟಿಕೆಟ್ ನೀಡಿದ್ದಲ್ಲಿ ಎಲ್ಲರೂ ಸೇರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ಒಮ್ಮತ ಸೂಚಿಸಿದರು

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend