ಅಪ್ರಾಪ್ತ ದಲಿತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳಿಗೆ ಗಲ್ಲುಶಿಕ್ಷೆ ನೀಡುವವಂತೆ ದಲಿತ ಸಂಘಟನೆಗಳ ಆಗ್ರಹ…!!!

Listen to this article

ಅಪ್ರಾಪ್ತ ದಲಿತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳಿಗೆ ಗಲ್ಲುಷಿಕ್ಷೆ ನೀಡುವವಂತೆ ದಲಿತ ಸಂಘಟನೆಗಳ ಆಗ್ರಹ

ಬೆಳಗಾವಿ :-ಮೂಡಲಗಿ ಪಟ್ಟಣದಲ್ಲಿ ಇಂದು ದಿನಾಂಕ 31/08/2021 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ )(ರಿ )ಮತ್ತು ದಲಿತ ಸಂಘರ್ಷ ಸಮಿತಿ -ಕರ್ನಾಟಕ ರಾಜ್ಯ ಕೇಂದ್ರ ಸಮಿತಿ. ಬೆಂಗಳೂರು ಮೂಡಲಗಿ ವಿವಿಧ ಸಂಘಟನೆಗಳಿಂದ ಅತ್ಯಾಚಾರ ಖಂಡಿಸಿ ಮೂಡಲಗಿ ಬಂದ್ ಕರೆನೀಡಲಾಯಿತ್ತು.

ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಸುಮಾರು ಇಪ್ಪತ್ತು ದಿನಗಳ ಹಿಂದೆ ದಲಿತ ಕುಟುಂಬದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಾಲೆಯಿಂದ ತೋಟದ ಮನೆಗೆ ನಡೆದು ಬರುವ ದಾರಿಯ ಮದ್ಯದಲ್ಲಿ ಐದು ಜನ ದುಷ್ಕರ್ಮಿಗಳು ಏಕಾಏಕಿ ಬಂದು ಒತ್ತಾಯದಿಂದ ಕಬ್ಬಿನಗದ್ದೆಯಲ್ಲಿ ಎಳೆದುಕೊಂಡು ಹೋಗಿ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು ಇದರಿಂದ ತಮ್ಮ ದುಷ್ಟ ಮನಸ್ಥಿತಿಯನ್ನು ಮೆರೆದಿದ್ದಾರೆ, ಇದು ಅಲ್ಲದೆ ವಿದ್ಯಾರ್ಥಿನಿಗೆ ನಿಮ್ಮ ತಂದೆ ತಾಯಿಗೆ, ಮನೆಯವರಿಗೆ, ಪೊಲೀಸರಿಗೆ ಹಾಗೂ ಯಾರಿಗಾದರೂ ಈ ವಿಷಯ ತಿಳಿಸಿದರೆ. ನಿನ್ನ ತಂದೆ ತಾಯಿಯನ್ನು ಕೊಲೆ ಮಾಡುತ್ತೇವೆ ಮತ್ತು ನಿನ್ನನ್ನು ಕೊಂದು ಬಾವಿಗೆ ಎಸೆಯುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಇದನ್ನು ಕೇಳಿದ ದಲಿತ ಬಾಲಕಿ ಹೆದರಿಕೊಂಡು ಯಾರಮುಂದೆಯು ಹೇಳದೆ ತನ್ನ ನೋವನ್ನು ಸಹಿಸಿಕೊಂಡದ್ದು ಇರುತ್ತದೆ.

ಇಪ್ಪತ್ತು ದಿನದ ನಂತರದಲ್ಲಿ ಯುವತಿಗೆ ರಕ್ತಸ್ರಾವ ಪ್ರಾರಂಭವಾಗಿ ಅತಿಯಾದ ತೊಂದರೆಯಾದಾಗ ತನ್ನ ತಾಯಿಗೆ ಮತ್ತು ಮನೆಯವರಿಗೆ ನಿಜಾಂಶವನ್ನು ತಿಳಿಸಿದ್ದಾಳೆ, ಅವರ ತಂದೆ ತಾಯಿಗಳು ಮಹಿಳಾ ಸಾಂತ್ವನ ಕೇಂದ್ರ ಬೆಳಗಾವಿ ಇವರ ಸಹಾಯ ಪಡೆದು ಘಟಪ್ರಭಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳೀಯ ಪೊಲೀಸರು ಆರೋಪಿತರನ್ನು ಬಂದಿಸಿದ್ದು, ಇಂತ ವಿಕ್ರತ ಕಾಮಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಎಲ್ಲ ದಲಿತ ಪರ ಸಂಘಟನೆಗಳ ಹಾಗೂ ಶಾಲಾ ವಿದ್ಯಾರ್ಥಿಗಳ ಮತ್ತು ವಿವಿಧ ಸಂಘಟನೆಗಳ ಒಕ್ಕೂಟದ ಬೇಡಿಕೆಯಾಗಿದೆ.
ರಾಜ್ಯದಲ್ಲಿ ಬಿ ಜೆ ಪಿ ಸರಕಾರ ಬಂದಾಗಿನಿಂದ ದೀನೆ ದಿನೇ ದಲಿತರ ಮೇಲೆ ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರ ಶೋಷಣೆ ಹಾಗೂ ದಬ್ಬಾಳಿಕೆ ನಡೆಯುತ್ತಿದ್ದು ಇರುತ್ತದೆ. ಅಲ್ಲದೆ ರಾಜ್ಯದ ಇತರೆ ಜಿಲ್ಲೆಗಳಾದ ಮೈಸೂರ,

ವಿಜಯಪುರ, ಬಾಗಲಕೋಟ, ರಾಯಚೂರು ಜಿಲ್ಲೆಗಳಲ್ಲಿ ಮಾನವ ಕುಲ ತಲೆ ತಗ್ಗಿಸುವ ಇಂತಹ ಘಟನೆಗಳು ನಡೆದಿದ್ದು ವಿಪರ್ಯಾಸದ ಸಂಗತಿಯಾಗಿದೆ. ರಾಜ್ಯದಲ್ಲಿ ಸರಕಾರ ಇದೆಯೋ ಅಥವಾ ಇಲ್ಲವೋ ಎಂದು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ ದೀನ ದಲಿತರ ಶೋಷಣೆಯನ್ನು ಕೇಳುವ ಸರಕಾರ ಇಲ್ಲವಾಗಿದೆ ಕಾರಣ ಮಾನ್ಯ ಘನ ಸರಕಾರ ಅತ್ಯಾಚಾರಕ್ಕೆ ಒಳಪಟ್ಟ ಕುಟುಂಬಕ್ಕೆ ರಕ್ಷಣೆ ನೀಡಬೇಕು. ನೊಂದ ವಿದ್ಯಾರ್ಥಿನಿಗೆ ಸರಕಾರಿ ಉದ್ಯೋಗ ಕೊಡುವುದಾಗಬೇಕು.ಮತ್ತು ಅತ್ಯಾಚಾರ ನಡೆಸಿದ ದುಷ್ಕರ್ಮಿಗಳಿಗೆ ಶೀಘ್ರವಾಗಿ ಗಲ್ಲುಶಿಕ್ಷೆ ವಿಧಿಸಬೇಕು. ಅಲ್ಲದೆ ಈ ಕುಟುಂಬಕ್ಕೆ ಕೇಸ್ ಹಿಂಪಡೆಯಲು ಬೆದರಿಕೆ ಹಾಕಿದ ಗ್ರಾಮದ ದುಷ್ಟಶಕ್ತಿಗಳನ್ನೂ ಬಂಧಿಸಿ ನ್ಯಾಯ ಒದಗಿಸಬೇಕೆಂದು ನಮ್ಮ ಒಂದು ಎಚ್ಚರಿಕೆ ವಾರ ಪತ್ರಿಕೆಯ ಆಶಯ.

ವರದಿ :-ಮಹಾಲಿಂಗ ಹ ಗಗ್ಗರಿ
ಜಿಲ್ಲಾ ವರದಿಗಾರರು ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend