ಕಾನಹೊಸಹಳ್ಳಿಯ ದೊಡ್ಡ ಚರಂಡಿಯನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಒತ್ತಾಯ…!!!

Listen to this article

ಕಾನಹೊಸಹಳ್ಳಿಯ ದೊಡ್ಡ ಚರಂಡಿಯನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಒತ್ತಾಯ


ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದಲ್ಲಿ ಕಾನಹೊಸಹಳ್ಳಿ ಯ ಎಲ್ಲಾ ಚರಂಡಿಗಳ ನೀರು ಹರಿದು ಬಂದು ಕಾನಹೊಸಹಳ್ಳಿ ಊರಿನ ಮುಂಭಾಗದಲ್ಲಿ, ಸಾರ್ವಜನಿಕರ ಕುಟುಂಬಗಳು, ಕಿರಾಣಿ ಅಂಗಡಿಗಳು, ಉಪಹಾರ ಹೋಟೆಲ್ ಗಳ ಮುಂಬಾಗದಲ್ಲಿ ಹರಿದು ಬಂದು ದೊಡ್ಡ ಚರಂಡಿಗೆ ಸೇರುತ್ತದೆ. ಸುಮಾರು ವರ್ಷಗಳಿಂದ ಈ ನೀರು ಮುಂದಕ್ಕೆ ಹೋಗದೆ ಗೊಬ್ಬು ವಾಸನೆಯಾಗಿ ಸೊಳ್ಳೆ ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿವೆ ಈ ಚರಂಡಿಯಲ್ಲಿ ತ್ಯಾಜ ವಸ್ತುಗಳು ಗಾಜು ಕಬ್ಬಿಣ ಪ್ಲಾಸ್ಟಿಕ್ ಮುಂತಾದ ವಸ್ತುಗಳು ಬಿದ್ದು ಕೊಳೆತು ನಾರುತ್ತಿವೆ. ಈ ವಿಷಯವಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ, ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು ಕಣ್ಣು ಕಾಣದೆ ಕುರುಡರಂತೆ ಕಿವಿ ಕೇಳಿಸದ ಕಿವುಡರಂತೆ ವರ್ತಿಸುತ್ತಿದ್ದು ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳು, ಗಮನಹರಿಸಿ ಕ್ರಮಕೈಗೊಳ್ಳಬೇಕೆಂದು ಕೋರುತ್ತಾ ಒಂದು ವೇಳೆ ಕ್ರಮಕೈಗೊಳ್ಳದಿದ್ದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಹೋರಾಟಗಾರರು ಪತ್ರಿಕಾ ಮಾಧ್ಯಮದ ಮೂಲಕ ಎಚ್ಚರಿಸಿದ್ದಾರೆ ಹಾಗೂ ಪತ್ರಿಕಾ ಮಾಧ್ಯಮಗಳ ಮೂಲಕ ಸುಮಾರು ಬಾರಿ ಪ್ರಕಟಣೆ ಮಾಡಿ ತಿಳಿಸಿದರು ಕೂಡ ಈ ದೊಡ್ಡ ಚರಂಡಿಯನ್ನು ಸ್ವಚ್ಛಗೊಳಿಸದೆ ಹಾಗೆ ಬಿಟ್ಟಿರುತ್ತಾರೆ. ಹಾಗೂ ಮನೆ ಮತ್ತು ಅಂಗಡಿಗಳ ಮುಂದೆ ಇರುವ ಈ ದೊಡ್ಡ ಚರಂಡಿ ಯ ಮೇಲ್ಬಾಗದಲ್ಲಿ ಬಂಡೆಗಳು ಕೂಡ ಇಲ್ಲ ಎಷ್ಟು ಜನ ವೃದ್ಧರು ಅಂಗವಿಕಲರು ಚರಂಡಿಯಲ್ಲಿ ಬಿದ್ದಿರುವುದೂ ಉಂಟು, ಈ ದಿನ ಮೋಟರ ಬೈಕ್ ಸವಾರನೊಬ್ಬ ಚರಂಡಿಯಲ್ಲಿ ಬಿದ್ದು ಒದ್ದಾಡಿದ ದೃಶ್ಯ ಕೂಡ ಇತ್ತು, ಸಾರ್ವಜನಿಕರು ಇದನ್ನು ನೋಡಿ ಮೇಲೆಕ್ಕೆತ್ತಿ ರಕ್ಷಿಸಿದ್ದಾರೆ, ಇಂತಹ ಅನಾಹುತಗಳು ಬೇಕಾದಷ್ಟು ಜರಿ ಗಿದ್ದರುಕೂಡ ಈ ವಿಚಾರದ ಬಗ್ಗೆ ಯಾರೋ ಗಮನಹರಿಸಿಲ್ಲ. ಇಂಥ ದೃಶ್ಯಗಳು ಕಂಡರೆ ಕಾಣದಂತೆ ಜನಪ್ರತಿನಿಧಿಗಳು ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಈ ಬಾರಿಯಾದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಅಧಿಕಾರಿಗಳು ಈ ಚರಂಡಿಯ ದುರಸ್ತಿಯ ಬಗ್ಗೆ ಗಮನಹರಿಸಿ ಸ್ವಚ್ಛತೆ ಮಾಡಿಸಿ ಚರಂಡಿಯ ಮೇಲ್ಭಾಗದಲ್ಲಿ ಹಾಸು ಬಂಡೆ ಗಳನ್ನು ಹಾಕಿಸಿ ಇಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಿ ಸ್ವಚ್ಛತೆ ಕಾಪಾಡಿ ಎಂದು ಸಾರ್ವಜನಿಕರು ಹೋಟೆಲ್ ಮಾಲೀಕರು ಕಿರಾಣಿ ಅಂಗಡಿಯವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಈ ಮೂಲಕ ಮನವಿ ಮಾಡಿಕೊಂಡಿರುತ್ತಾರೆ…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend