ಬಂಗ್ಲೆ ಮಲ್ಲಿಕಾರ್ಜುನರವರ ನೇತೃತ್ವದಲ್ಲಿ ರಾಜ್ಯದಲ್ಲಿ” ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ”ಎಂಬ ಸಂಘಟನೆ…!!!

Listen to this article

ಕರ್ನಾಟಕದ ಸಮಸ್ತ ಕಾರ್ಯನಿರತ ಪತ್ರಕರ್ತರ ಗಮನಕ್ಕೆ ಬಂಗ್ಲೆ ಮಲ್ಲಿಕಾರ್ಜುನ ಆದ ನಾನು ತರಬಯಸುವುದೇನೆಂದರೆ :- ಕಳೆದ 20 ವರ್ಷ ಮೇಲ್ಪಟ್ಟು ನಾನು kuwj ಸಂಘಟನೆಯಲ್ಲಿ ಸದಸ್ಯನಾಗಿ,ಅಖಂಡ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿಯಾಗಿ,ಪ್ರಧಾನ ಕಾರ್ಯದರ್ಶಿಯಾಗಿ,ಜಿಲ್ಲಾಧ್ಯಕ್ಷನಾಗಿ,ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಹಾಗೂ ರಾಜ್ಯ ಕಾರ್ಯದರ್ಶಿಯಾಗಿ ತಮ್ಮೆಲ್ಲರ ಸಹಕಾರದಿಂದ ಕೈಲಾದ ಮಟ್ಟಿಗೆ ಸೇವೆ ಸಲ್ಲಿಸಿದ್ದೇನೆ. ಸಂಘದಲ್ಲಿ ಎರಡನೇ ಅವಧಿಗೆ ರಾಜ್ಯಾಧ್ಯಕ್ಷರಾದ ಎನ್.ರಾಜು ರವರು ಹಣಕಾಸಿನ ದುರುಪಯೋಗಕ್ಕೆ ಸಂಬಂಧಿಸಿದಂತ ವಿಚಾರಕ್ಕೆ ಅವರ ಮೇಲೆ ನಾನು FIR ದಾಖಲಿಸಿದ ನಂತರ ರಾಜಿನಾಮೆ ಸಲ್ಲಿಸಿದ್ದು ರಾಜ್ಯದ ಪ್ರತಿಯೊಬ್ಬ ಪತ್ರಕರ್ತರ ಗಮನಕ್ಕೆ ಇದೆ.ಆ ಸಂದರ್ಭದಲ್ಲಿ ನಾನು ಬಳ್ಳಾರಿ ಜಿಲ್ಲಾಧ್ಯಕ್ಷನಾಗಿದ್ದೆ.ಆಗಿನ ಸಂದರ್ಭ ರಾಜ್ಯದಲ್ಲಿ ಇದ್ದಂತ ಹೆಸರಾಂತ ರಾಜ್ಯ ಪದಾಧಿಕಾರಿಗಳಾದ ಶಿವಾನಂದ ತಗಡೂರು,ಲೋಕೇಶ್ ಹಾಗೂ ಇನ್ನೀತರರು, ರಾಜುರವರ ಪಕ್ಕದಲ್ಲೇ ಇದ್ದರೂ ತುಟಿ ಪಟಿಕ್ ಎನ್ನದೆ ಮೌನವಹಿಸಿದಂತ ಸಂದರ್ಭದಲ್ಲಿ ನನ್ನ ಹೋರಾಟದ ಫಲದಿಂದ ಹಿಂಬಾಗಿಲ ಮುಖಾಂತರ ರಾಜ್ಯಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಲಂಕೃತರಾದರು.ತದನಂತರ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ಸರ್ವಸದಸ್ಯರ ಸಹಕಾರದಿಂದ ನಾನು ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡೆ. ನೇಮಕಗೊಂಡ ನಂತರ ರಾಜ್ಯದ ವರದಿಗಾರರ ಪರವಾಗಿ ಧ್ವನಿ ಎತ್ತಿ ಅವರುಗಳಿಗೆ ಪೇಸ್ಲಿಫ್,ಸೇವಾಭದ್ರತೆ ಹಾಗೂ ಇನ್ನೀತರ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ರೂಪಿಸೋಣವೆಂದು ಹಲವಾರು ಭಾರಿ ಹೇಳಿದರೂ ಪ್ರಯೋಜನವಿಲ್ಲದಂತಾಯಿತು.ಮಾಲಿಕರ ಪರವಿರುವ ತಗಡೂರು ಜೊತೆಗೆ ವಾರ್ತಾ ಇಲಾಖೆಯನ್ನು ಎದುರು ಹಾಕಿಕೊಳ್ಳುವುದಕ್ಕೆ ತಯಾರಿಲ್ಲದ ಇವರುಗಳಿಂದ ಕಾರ್ಯನಿರತ ಪತ್ರಕರ್ತರುಗಳಿಗೆ ವರದಿಗಾರರಿಗೆ ನ್ಯಾಯ ಸಿಗಲು ಸಾಧ್ಯವೇ? ಕಲುಬುರುಗಿ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಭರಪೂರ ಆಶ್ವಾಸನೆ ಪತ್ರಕರ್ತರುಗಳಿಗೆ ನೀಡಿ ಚಪ್ಪಾಳೆ ಗಿಟ್ಡಿಸಿಕೊಂಡು ಬಜೆಟ್ನಲ್ಲಿ ಅದೇ ರಾಗ ಮುಂಬಯಿ ನಾದ ಎಂಬಂತಾಗಿದ್ದು ದುರಾದೃಷ್ಟ.ಇನ್ನೂ ತಗಡೂರು ಅಧ್ಯಕ್ಷರಾದಾಗಿನಿಂದ ಪ್ರತಿಯೊಂದು ಸಭೆಯಲ್ಲೂ ನಮ್ಮ kuwj ಯ 8000 ಸಾವಿರ ಸದಸ್ಯರುಗಳಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ಕೊಡಿಸುತ್ತೇನೆಂದು ರಾಜಕಾರಣಿಯಂತೆ ಭರವಸೆ ಕೊಟ್ಟಿದ್ದೇ ಕೊಟ್ಟಿದ್ದು, ಕಡೆಗೆ ರಾಜ್ಯ ಪದಾಧಿಕಾರಿಗಳಾದ ನಾವುಗಳು ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ನಮಗೇನೆ ಕೊಡಿಸಲು ಅವರಿಂದ ಆಗದಿದ್ದದ್ದ ದುರಾದೃಷ್ಟ.ಕೋವಿಡ್ ವಿಚಾರದಲ್ಲಿ ತಗಡೂರು ಹಾಗೂ ಪ್ರೆಸ್ ಕ್ಲಬ್ ನ ಸದಾಶಿವಶಣೈ ಹಾಗೂ ಇನ್ನೀತರ ದಿಗ್ಗಜ ಪತ್ರಕರ್ತರೆಲ್ಲರ ಹೋರಾಟದ ಫಲವಾಗಿ ಕೋವಿಡ್ನಿಂದ ಮೃತಪಟ್ಟಂತ 50 ಕ್ಕೂ ಹೆಚ್ಚಿನ ಪತ್ರಕರ್ತರ ಕುಟುಂಬಕ್ಕೆ ಆರ್ಥಿಕ ನೆರವಿನ ಸಹಾಯ ದೊರೆಯಿತು. ಈ ಒಂದು ವಿಚಾರಕ್ಕೆ ಎಲ್ಲರಿಗೂ ಅಭಿನಂದನೆಗಳು. ಇನ್ನೂ ಸಂಘದ ಲೆಕ್ಕದ ವಿಚಾರಕ್ಕೆ ನಾನು ತಗಡೂರು ಹಾಗೂ ಲೋಕೇಶ್ಗೆ ಲಿಖಿತ ಮೂಲಕ ಮನವಿ ಸಲ್ಲಿಸಿದರೂ ಸಂಘದ ಬ್ಯಾಂಕ್ ಸ್ಟೇಟ್ ಮೆಂಟ್ಸ್ ಹಾಗೂ ಸಮ್ಮೇಳನದ ಸ್ಮರಣ ಸಂಚಿಕೆಗಳ ರಸೀದಿಗಳನ್ನು ಕೇಳಿದ್ದರೂ ಕಡೆಗೂ ಇಂದಿನ ವರೆಗೂ ಕೊಡದೆ ಇದ್ದದ್ದು ಇವರ ಮುಖಸ್ಥಿತಿ ಏನೆಂದು ತಿಳಿಯಿತು. ಸಂಘವನ್ನು ಕೇವಲ ನಾಲ್ಕರಿಂದ ಐದು ಜನರು ಮಾತ್ರ ತಮ್ಮ ಕಪಿ ಮುಷ್ಟಿಯಲ್ಲಿ ಇಂದಿನವರೆಗೂ ಇಟ್ಟುಕೊಂಡು, ಪ್ರತಿಯೊಬ್ಬರಿಗೂ ಎಲ್ಲಿ ತಾವು ಇವರುಗಳ ವಿರುದ್ದ ಧ್ವನಿ ಎತ್ತಿದರೆ ತಮಗೆ ಸದಸ್ಯತ್ವ ಸಿಗುವುದಿಲ್ಲ ಎಂಬ ಕಾರಣದ ಜೊತೆಗೆ ಸಂಘದಿಂದ ಉಚ್ಛಾಟಿಸುತ್ತಾರೆಂಬ ಭಯದಿಂದ ಸಮಾಜವನ್ನು ತಿದ್ದುವ ನಮ್ಮ ಪತ್ರಕರ್ತರು ಧ್ವನಿಯನ್ನು ತಮ್ಮ ಗಂಟಲಲ್ಲೆ ಅಡಗಿಸಿಕೊಂಡು ಮೂಕ ಪ್ರೇಕ್ಷರಾಗಿದ್ದು ವಿಷಾದನಿಯ. ನನ್ನ ಹೋರಾಟದ ಫಲದಿಂದ ಈ ಹಿಂದೆ ಅಧಿಕಾರ ಹಿಡಿದಂತ ಲೋಕೇಶ್ ಹಾಗೂ ತಗಡೂರು ರವರಿಗೆ ಮಾನವೀಯತೆ ಎಂಬುದು ಖಂಡಿತ ಇಲ್ಲಾ. ಇನ್ನು ಕೇಬಲ್ ನೆಟ್ ವರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲುಬುರಗಿಯ ಭವಾನಿ ಸಿಂಗ್ ಗೆ ನಮ್ಮ ಬೈಲಾ ಪ್ರಕಾರ ಸದಸ್ಯತ್ವ ಕೊಡುವುದಕ್ಕೆ ನಿಯಮದಲ್ಲಿ ಅವಕಾಶವೇ ಇಲ್ಲ,ಇದನ್ನು ನೋಡುವ ತಾಳ್ಮೆ ಅಧ್ಯಕ್ಷರಗಿಲ್ಲದಿರುವುದರಿಂದ ಇಂದು ರಾಜ್ಯ ಉಪಾಧ್ಯಕ್ಷರಾಗಿ ಭವಾನಿಸಿಂಗ್ ರಾರಾಜಿಸುತ್ತಿದ್ದಾರೆ.

ಇದನ್ನು ನಾನು ನ್ಯಾಯಾಲಯದಲ್ಲಿ ಪ್ರಶ್ನಿಸಿ ನ್ಯಾಯ ಪಡೆದೇ ತೀರುವೆ ಜೊತೆಗೆ kuwj ಗೆ ಸಂಬಂಧಪಟ್ಟ ನನ್ನ ಹೋರಾಟ ಅಚಲ,ವರದಿಗಾರರು ಇರಬೇಕಾದಂತ ಈ ಸಂಘದಲ್ಲಿ ಹೆಚ್ಚಿನ ಮಾಲಿಕರೆ ಆಡಳಿತವನ್ನು ನಡೆಸುತ್ತಿರುವ ಈ ಕುರಿತು ನ್ಯಾಯಾಲಯದಲ್ಲಿ ಹೋರಾಟ ಸಾಗುತ್ತಿದೆ ಜೊತೆಗೆ ರಾಜ್ಯಾಧ್ಯಕ್ಷರಾದ ತಗಡೂರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ ಇವರುಗಳು kuwj ಯಲ್ಲಿ ಸದಸ್ಯತ್ವ ಹೊಂದಿದ್ದರೂ ಕೂಡ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಅಜೀವ ಸದಸ್ಯತ್ವ ಹಾಗೂ ಸದಸ್ಯತ್ವ ಹೊಂದಿದ್ದು ದುರಾದೃಷ್ಟ.ಇದು ಸಂಘ ವಿರೋದಿ ಚಡುವಟಿಕೆ ಕೂಡ.(ಇದಕ್ಕೆ ಸಂಬಂಧಿಸಿದ ದಾಖಲೆ ಇದರೊಂದಿಗೆ) ಹೇಳುವುದು ಶಾಸ್ತ್ರ ತಿನ್ನುವುದು ಬದನೆಕಾಯಿ ಎಂಬಂತಾಗಿರುವ ಹಿನ್ನೆಲೆಯಲ್ಲಿ ದಿಗ್ಗಜರೇ ಎರೆಡು ಸಂಘದಲ್ಲಿರಬೇಕಾದರೆ ನಾನು ಯಾಕೆ ಮತ್ತೊಂದು ಸಂಘ ಮಾಡಬಾರದೆಂಬ ಯೋಚನೆಯಿಂದ ಇಂದು ಪತ್ರಕರ್ತರ ರಾಜ್ಯ ಸಂಘಟನೆಯನ್ನು ನನ್ನ ನೇತೃತ್ವದಲ್ಲಿ ಸ್ಥಾಪಿಸಿ ಈ ಸಂಘಕ್ಕೆ ” KARNATAKA WORKING JOURNALISTS VOICE” (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ) ಎಂಬ ನಾಮಾಂಕಿತದೊಂದಿಗೆ ಇಂದಿನಿಂದ ರಾಜ್ಯದ ಹದಿನಾರು ಸಾವಿರ ಪತ್ರಕರ್ತರ ಪರ ಧ್ವನಿ ಮೊಳಗಲಿದೆ. ವಾರ, ಪಾಕ್ಷಿಕ ಹಾಗೂ ಮಾಸಿಕ ಪತ್ರಿಕೆಯ ಪತ್ರಕರ್ತರಿಗೆ ವಾರ್ತಾ ಇಲಾಖೆಯಿಂದ ಮಾಶಾಸನವೇ ಇಲ್ಲ ಎಂದಿರುವ ಈ ಕುರಿತು ಕಾನೂನು ಹೋರಾಟದ ಮುಖಾಂತರ ವಾರ,ಪಾಕ್ಷಿಕ,ಮಾಸಿಕ ಪತ್ರಕರ್ತರಿಗೂ ಮಾಶಾಸನ ದೊರೆಯುವಂತೆ ಮಾಡುವುದು. ಅಕ್ರಿಡೇಷನ್ ಪಡೆದಂತ ಹಾಗೂ ಮಾಧ್ಯಮ ಪಟ್ಟಿಯಲ್ಲಿ ಇರುವ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಪತ್ರಕರ್ತರಿಗೂ ಪತ್ರಿಕೆಯ ಮಾಲಿಕರಿಂದ ಖಾಯಂ ನೇಮಕಾತಿ ಆದೇಶ ಹಾಗೂ ಪಿ.ಎಫ್.ಇ.ಪಿ.ಎಫ್ ಕೊಡಿಸಲು ದಿಟ್ಟ ಹೋರಾಟವನ್ನು ನಮ್ಮ ನಿಮ್ಮೆಲ್ಲರ ಸಂಘಟನೆಯಾದ ಕರ್ನಾಟಕ ವರ್ಕಿಂಗ್ ಜರ್ನಲಿಸ್ಟ್ ವಾಯ್ಸ್ ನ ಮುಖಾಂತರ ನಡೆಯುವುದು ಅಚಲ ಜೊತೆಗೆ ಗ್ರಾಮಾಂತರ ಉಚಿತ ಬಸ್ ಪಾಸ್ ಗಾಗಿಯೂ ಕೂಡ. ಈ ಮನವಿಯ ಜೊತೆಗೆ ನಮ್ಮ ಸಂಘದ Registration ಪ್ರತಿ. ಇಂತಿ ನಿಮ್ಮ ಆತ್ಮೀಯ,
ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು, KARNATAKA WORKING JOURNALISTS VOICE (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ) ಬೆಂಗಳೂರು.ನಮ್ಮ ಒಂದು ಪತ್ರಿಕಾ ತಂಡದ ಜೊತೆಗೆ ತಮ್ಮ ಅನಿಸಿಕೆಗಳನ್ನು ಹoಚಿಕೊಂಡ ಸಂದರ್ಭ…

 

ವರದಿ. ಮಂಜುನಾಥ್, ಎನ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend