ಲೋಕಸಭಾ ಚುನಾವಣೆಯ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಧ್ಯತೆಯಿದೆ ಇಲ್ಲಿದೆ ನೋಡಿ ಸoಬಾವ್ಯ ಅಭ್ಯಾರ್ಥಿಗಳ ಪಟ್ಟಿ…!!!

Listen to this article

ಲೋಕಸಭಾ ಚುನಾವಣೆಗೆ ಬಿಜೆಪಿ ಸಜ್ಜಾಗಿದೆ. ಈಗಾಗಲೇ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಯ ಅಭ್ಯರ್ಥಿಗಳ ಪೈಕಿ ಅಚ್ಚರಿಯ ಹೆಸರು ಕೇಳಿಬಂದಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಬಾರಿ ದಕ್ಷಿಣ ಕನ್ನಡದಿಂದ ಸ್ಪರ್ಧೆ ಮಾಡುವ ಸಾಧ್ಯತೆಯಿದೆ.

2024 ರ ಲೋಕಸಭೆ ಚುನಾವಣೆಗೆ ಆಡಳಿತರೂಢ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ. ಬಿಜೆಪಿ ಮೊದಲ ಪಟ್ಟಿ ಪ್ರಕಟಿಸಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದ್ರಲ್ಲೂ ಕರ್ನಾಟಕ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಅಚ್ಚರಿ ಎಂಬಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಕಣಕ್ಕೆ ಇಳಿಯುವುದು ಬಹತೇಕ ಖಚಿತ.

ಕಳೆದ ಮೂರು ಅವಧಿಯಿಂದಲೂ ಈ ಕ್ಷೇತ್ರದಿಂದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸ್ಪರ್ಧೆ ಮಾಡುತ್ತಿದ್ದರು. ಇನ್ನು ಮತ್ತೋರ್ವ ಕೇಂದ್ರ ಸಚಿವ ಜೈ ಶಂಕರ್‌ ಅವರು ಕೂಡ ಕರ್ನಾಟಕದಿಂದಲೇ ಸ್ಪರ್ಧೆಗೆ ಮನಸ್ಸು ಮಾಡಿದ್ದಾರೆ. ಮಾಜಿಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರಿಂದ ತೆರವಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಜೈ ಶಂಕರ್‌ ಅವರು ಸ್ಪರ್ಧೆ ಮಾಡುವ ಸಾಧ್ಯತೆಯಿದೆ.

ಕೇಂದ್ರ ಬಿಜೆಪಿ ಕೋರ್‌ ಕಮಿಟಿ ಈಗಾಗಲೇ ಸಭೆಯನ್ನು ನಡೆಸಿದ್ದು, ಬಹುತೇಕ ಅಭ್ಯರ್ಥಿಗಳನ್ನು ಅಂತಿಮ ಮಾಡಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಬಿಜೆಪಿ ಹಾಗೂ ಜೆಡಿಎಸ್‌ ಈಗಾಗಲೇ ಕ್ಷೇತ್ರಗಳನ್ನು ಹಂಚಿಕೆ ಮಾಡಿದೆ. ಅದ್ರಲ್ಲೂ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇದೀಗ ಅಚ್ಚರಿಗೆ ಕಾರಣವಾಗಿದೆ.

ಡಿಕೆ ಸುರೇಶ್‌ ಪ್ರತಿನಿಧಿಸುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಅಚ್ಚರಿಯ ಅಭ್ಯರ್ಥಿಯೋರ್ವರು ಕಣಕ್ಕೆ ಇಳಿಯುತ್ತಿದ್ದಾರೆ. ಅವರು ಬೇರೆ ಯಾರೂ ಅಲ್ಲಾ ಮಾಜಿ ಪ್ರಧಾನಿ ದೇವೇಗೌಡ ಅವರ ಅಳಿಯ, ಜಯದೇವ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್‌ ಅವರ ಹೆಸರು ಮುಂಚೂಣಿಯಲ್ಲಿದೆ.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಮತ್ತೆ ಅಚ್ಚರಿಯ ಹೆಸರು ಕೇಳಿಬಂದಿದೆ. ಗೋ ಬ್ಯಾಕ್‌ ಹೋರಾಟದ ನಡುವಲ್ಲೇ ಬಿಜೆಪಿ ಹಿರಿಯ ನಾಯಕರು ಈ ಬಾರಿಯೂ ಶೋಭಾ ಕರಂದ್ಲಾಜೆ ಅವರನ್ನೇ ಮತ್ತೆ ಕಣಕ್ಕೆ ಇಳಿಸಲು ಅಂತಿಮ ನಿರ್ಧಾರವನ್ನು ಕೈಗೊಂಡಂತಿದೆ. ಹುಬ್ಬಳ್ಳಿ -ಧಾರವಾಡ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಶ್ರೀನಿವಾಸ ಪ್ರಸಾದ್‌ ಅವರಿಂದ ತೆರವಾಗಿರುವ ಚಾಮರಾಜನಗರಕ್ಕೆ ಹೊಸ ಅಭ್ಯರ್ಥಿಯ ಹೆಸರು ಕೇಳಿಬಂದಿದೆ.

ಕಾಂಗ್ರೆಸ್‌ ಪಕ್ಷದಿಂದ ಮಾತೃಪಕ್ಷ ಬಿಜೆಪಿಗೆ ಮರಳಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರಿಗೆ ಈ ಬಾರಿ ಬೆಳಗಾವಿಯಿಂದ ಟಿಕೆಟ್‌ ನೀಡಲು ಬಿಜೆಪಿ ನಿರ್ಧಾರ ಮಾಡಿದೆ. ಇದರಿಂದಾಗಿ ಹಾಲಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಟಿಕಟ್‌ ಕೈತಪ್ಪಲಿದೆ. ಅಲ್ಲದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಿ ಸೋಲು ಕಂಡಿದ್ದ ಮಾಜಿ ಸಚಿವ ವಿ. ಸೋಮಣ್ಣ ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಿಂದಲೂ ಹೊಸ ಹೆಸರು ಕೇಳಿಬಂದಿದೆ. ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್‌ ಅವರ ಪುತ್ರ ಅಲೋಕ್‌ ವಿಶ್ವನಾಥ್‌ ಹೆಸರು ಅಂತಿಮಗೊಂಡಿದ್ರೆ, ಹಾವೇರಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಕೆಎಸ್‌ ಈಶ್ವರಪ್ಪ ಪುತ್ರ ಕೆಇ ಕಾಂತೇಶ್‌ ಅವರಿಗೆ ಟಿಕೆಟ್‌ ಖಚಿತವಾಗಿದೆ. ಇನ್ನೊಂದೆಡೆಯಲ್ಲಿ ಚಿಕ್ಕಬಳ್ಳಾಪುರದಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಹಾವೇರಿಯಿಂದ ಮಾಜಿ ಸಚಿವ ಬಿಸಿ ಪಾಟೀಲ್‌ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:

ಬೆಳಗಾವಿ – ಜಗದೀಶ್ ಶೆಟ್ಟರ್

ಚಿಕ್ಕೋಡಿ – ಅಣ್ಣಾ ಸಾಹೇಬ ಜೊಲ್ಲೆ

ಬೀದರ್ – ಭಗವಂತ ಖೂಬಾ

ಕಲಬುರಗಿ- ಉಮೇಶ ಜಾಧವ

ವಿಜಯಪುರ – ರಮೇಶ ಜಿಗಜಿಣಗಿ

ಬಾಗಲಕೋಟೆ – ಪಿ.ಸಿ.ಗದ್ದಿಗೌಡರ್

ರಾಯಚೂರು – ರಾಜಾ ಅಮರೇಶ್ವರ ನಾಯ್ಕ / ಬಿ.ವಿ.ನಾಯಕ

ಕೊಪ್ಪಳ – ಸಂಗಣ್ಣ ಕರಡಿ / ಡಾ ಬಸವರಾಜ ಕ್ಯಾವಟರ್

ಧಾರವಾಡ – ಪ್ರಹ್ಲಾದ್ ಜೋಶಿ

ಹಾವೇರಿ – ಬಿ.ಸಿ.ಪಾಟೀಲ್ / ಕೆ.ಇ.ಕಾಂತೇಶ್

ಬಳ್ಳಾರಿ – ಬಿ ಶ್ರೀರಾಮುಲು

ದಕ್ಷಿಣ ಕನ್ನಡ – ನಿರ್ಮಲಾ ಸೀತಾರಾಮನ್/ ನಳಿನ್ ಕುಮಾರ್ ಕಟೀಲ್

ಉತ್ತರ ಕನ್ನಡ – ಅನಂತ ಕುಮಾರ್ ಹೆಗಡೆ,/ ವಿಶ್ವೇಶ್ವರ ಹೆಗಡೆ ಕಾಗೇರಿ

ಉಡುಪಿ – ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ

ಶಿವಮೊಗ್ಗ – ಬಿ.ವೈ.ರಾಘವೇಂದ್ರ

ಚಿತ್ರದುರ್ಗ – ಎ ನಾರಾಯಣಸ್ವಾಮಿ

ದಾವಣಗೆರೆ – ಜಿಎಂ ಸಿದ್ದೇಶ್ವರ್/ ಎಂಪಿ ರೇಣುಕಾಚಾರ್ಯ

ತುಮಕೂರು – ವಿ ಸೋಮಣ್ಣ

ಬೆಂಗಳೂರು ಉತ್ತರ – ಎಸ್.ಜೈಶಂಕರ್

ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ

ಬೆಂಗಳೂರು ಸೆಂಟ್ರಲ್ – ಜೈಶಂಕರ್ / ಪಿಸಿ ಮೋಹನ್

ಬೆಂಗಳೂರು ಗ್ರಾಮಾಂತರ – ಡಾ.ಸಿ.ಎನ್.ಮಂಜುನಾಥ್

ಚಿಕ್ಕಬಳ್ಳಾಪುರ – ಡಾ ಕೆ ಸುಧಾಕರ್ / ಅಲೋಕ್ ವಿಶ್ವನಾಥ್

ಮೈಸೂರು – ಪ್ರತಾಪ್ ಸಿಂಹ / ಸಾರಾ ಮಹೇಶ್

ಚಾಮರಾಜನಗರ – ಎಸ್ ಬಾಲರಾಜ್ / ಡಾ ಮೋಹನ್ ಕುಮಾರ್

ಮಂಡ್ಯ – ಜೆಡಿಎಸ್

ಕೋಲಾರ – ಜೆಡಿಎಸ್

ಹಾಸನ – ಜೆಡಿಎಸ್

ಈಗಾಗಲೇ ಕರ್ನಾಟಕದ ಬಿಜೆಪಿ ನಾಯಕರು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ. ಮುಂದಿನ ವಾರ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುವ ಸಾಧ್ಯತೆಯಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ತಿಳಿಸಿದ್ದಾರೆ ಎನ್ನುವ ಮಾಹಿತಿಯನ್ನು ಕೇಳಲಾಗಿದೆ…

 

 ವರದಿ. ಮುಕ್ಕಣ್ಣ ಹುಲಿಗುಡ್ಡ 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend