ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ಅಕ್ರಮ ಮರಳು ದಂದೆ, ಕಣ್ಮುಚ್ಚಿ ಕುಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ…!!!

Listen to this article

ಬಾಗಲಕೋಟ :- ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ಸತತವಾಗಿ ಅಕ್ರಮ ಮರಳು ದಂಧೆ ಕಣ್ಮುಚ್ಚಿ ಕುಳಿತ ಪೊಲೀಸ್ ಆಡಳಿತ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಯಲ್ಲಟ್ಟಿ ಗ್ರಾಮದಲ್ಲಿ ಅಕ್ರಮ ಮರಳು ಅಡ್ಡೆಗಳ ತಲೆಯೆತ್ತಿ ನಿಂತಿವೆ. ಅಕ್ರಮ ಮರಳು ದಂಧೆ ಮಾಲೀಕರಾದ “ಮಲ್ಲಪ್ಪ ಹನಗಂಡಿ’ ಮತ್ತು ಇವರ ಸಂಬಂಧಿಯಾದ “ಗೂಳಪ್ಪ ಹನಗಂಡಿ “ಇವರು ಮತ್ತು “ಶಿವು ಜಳಕಿಯವರು” ಹಲವು ವರ್ಷಗಳಿಂದ ರೈತರ ಜಮೀನಿನಲ್ಲಿ ಮಣ್ಣನ್ನು ಖರೀದಿ ಮಾಡಿ ಈ ಮಣ್ಣನ್ನು ಪಂಪ್ ಸೆಟ್ ಸಹಾಯದಿಂದ ಮಣ್ಣನ್ನು ತೊಳೆದು ಮರಳನ್ನು ಬೆರ್ಪಡಿಸಿ ಈ ಮರಳನ್ನು ಟ್ರ್ಯಾಕ್ಟರ್ ಮೂಲಕ ಹೆಚ್ಚಿನ ಬೆಲೆಗೆ ಅಂದರೆ 6 ರಿಂದ 7 ಸಾವಿರವರೆಗೆ ಮಾರುತ್ತಾರೆ. ಈ ಅಕ್ರಮ ಮರಳು ದಂಧೇಕೋರರು ಪೊಲೀಸ್ ಸ್ಟೇಷನಗಳಿಗೆ ಮಂತ್ಲಿ ಕೊಡುತ್ತೇವೆ ಎಂದು ಗಂಟಗೋಷವಾಗಿ ಹೇಳುತ್ತಾರೆ ಇವರು ಹೇಳುವ ಮಾತನ್ನು ಕೇಳಿದರೆ ಪೊಲೀಸರು ಇದಕ್ಕೆ ಸಹಕರಿಸುತ್ತರಾ ಇವರಿಗೆ ಹಾಗೂ ಸಹಕರಿಸುತ್ತಿರಬಹುದೇನೋ ಎನ್ನುವ  ಅನುಮಾನವು ಸಹ ಮೂಡುತ್ತದೆ? ಇನ್ನಾದರೂ ಪೊಲೀಸ್ ಆಡಳಿತ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಈ ಆರೋಪಿಗಳ ಮೇಲೆ ಸೂಕ್ತಕ್ರಮ ಜರಿಗಿಸಬೇಕೆಂಬುವುದು  ನಮ್ಮ ಒಂದು ಪತ್ರಿಕೆಯ ಆಶಯ…

ವರದಿ.ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend