ಮಹಾಲಿಂಗಪುರದ ಎಸ್ ರಾಧಾಕೃಷ್ಣನ್ ಶಾಲೆಯ ಮಕ್ಕಳ ಅದ್ಭುತ ವಿಜ್ಞಾನ ಕಲಾಕೃತಿಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಶ್ಲಾಘನೆ…!!!

Listen to this article

ಮಹಾಲಿಂಗಪುರದ ಎಸ್ ರಾಧಾಕೃಷ್ಣನ್ ಶಾಲೆಯ ಮಕ್ಕಳ ಅದ್ಭುತ ವಿಜ್ಞಾನ ಕಲಾಕೃತಿಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಶ್ಲಾಘನೆ.

ಮಹಾಲಿಂಗಪುರ ಪಟ್ಟಣದ ಎಸ್.ರಾಧಾಕೃಷ್ಣನ್ ಶಾಲೆಯಲ್ಲಿ ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು. ಪ್ರಾಥಮಿಕ ಹಂತದ ವಿಧ್ಯಾರ್ಥಿಗಳ ರಂಗೋಲಿಯಲ್ಲಿ ವಿಜ್ಞಾನದ ಕಲಾಕೃತಿಗಳನ್ನು ಮತ್ತು ಮಾನವ ದೇಹದ ಭಾಗಗಳನ್ನು ಹಾಗೂ ಇನ್ನು ಅನೇಕ ವಸ್ತು ಮಾದರಿ ತಯಾರಿಸಿ ಶಿಕ್ಷಣ ಇಲಾಖೆಯ ನಿಯೋಜಿತ ಅಧಿಕಾಗಳ ಗಮನ ಸೆಳೆದರು.

ಇಲ್ಲಿನ ರಾಧಾಕೃಷ್ಣನ ಶಾಲೆಯು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದು ಅತ್ಯಂತ ಕಡಿಮೆ ಶುಲ್ಕದಲ್ಲಿ ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳ ಮನರಂಜನಾ ಕಾರ್ಯಕ್ರಮಗಳು, ಪ್ರತಿಭಾ ಕಾರಂಜಿ, ಕ್ರೀಡಿಗಳ ಸಾಧನೆಯಲ್ಲು ಒಂದು ಹೆಜ್ಜೆ ಮುಂದಿದ್ದು ಸತತ ಪ್ರಯತ್ನದಿಂದ ಶಾಲೆ ಬೆಳೆಯುತ್ತಿದೆ ಎಂದು ಹೇಳಿದ ಶಿಕ್ಷಣ ಸಂಯೋಜಕ ಎಸ್.ಎಸ್ ಹಾದಿಮನಿ.ಇದೆ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತರಾದ ಶ್ರೀಮತಿ ಸ್ವಪ್ನಾ ಅನಿಗೋಳ ಅವರನ್ನು ಮತ್ತು ಕಾರ್ಯ ನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾದ ಮಹೇಶ ಆರಿ ಅವರನ್ನು ಹಾಗೂ ಶಿಕ್ಷಣ ಸಂಯೋಜಕ ಶಂಕರ.ಎಸ್.ಹಾದಿಮನಿ ಅವರನ್ನು ಸನ್ಮಾನಿಸಲಾಯಿತು.

ಉಪಸ್ಥತಿಯಲ್ಲಿ ಶಿಕ್ಷಣ ವಿಭಾಗಧಿಕಾರಿ ಎಸ್ ಎನ್ ಬ್ಯಾಳಿ, ಶಶಿಧರ ಉಳ್ಳೇಗಡ್ಡಿ, ಮತ್ತು ಶಾಲಾ ಶಿಕ್ಷಕರು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವರದಿ.ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend