ಕಟ್ಟಡ ಕಾರ್ಮಿಕರ ರಾಜ ವಾಪಿ ಪ್ರತಿಭಟನೆ ಅಂಗವಾಗಿ ಬಳ್ಳಾರಿಯ ಟಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ,ಯನ್ನುAIUTUC ಹಮ್ಮಿಕೊಳ್ಳಲಾಯಿತು…!!!

Listen to this article

ಕಟ್ಟಡ ಕಾರ್ಮಿಕರ ರಾಜ ವಾಪಿ ಪ್ರತಿಭಟನೆ ಅಂಗವಾಗಿ ಬಳ್ಳಾರಿಯ ಟಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ,ಯನ್ನುAIUTUC ಹಮ್ಮಿಕೊಳ್ಳಲಾಯಿತು.
ಬಳ್ಳಾರಿ. ಗಣಿ ನಗರಿಯಲ್ಲಿ ಇಂದು,ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ಬಳ್ಳಾರಿ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಎ ಗ್ರೇಡ್,ತಾಸಿಲ್ದಾರ್ ರಾದ ಶ್ರೀಮೆಹತಾ,ಮೂಲಕ ರಾಜ್ಯ ಕಾರ್ಮಿಕ ಸಚಿವರಾದ ಮಾನ್ಯ ಶ್ರೀ ಶಿವರಾಮ್ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬೇಡಿಕೆಗಳು
* ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ ಧನ ₹3000 ನೀಡುವ ಸರ್ಕಾರದ ಆದೇಶ ಹೊರಡಿಸಿ ಒಂದು ತಿಂಗಳು ಕಳೆದರೂ ಸಹ ಇನ್ನೂ ಅನೇಕ ಕಾರ್ಮಿಕರ ಖಾತೆಗೆ ಹಣ ಜಮಾ ವಾಗಿಲ್ಲ,ಇದನ್ನು ಕೂಡಲೇ ನೀಡಬೇಕು.
* ಸರ್ಕಾರ ಘೋಷಿಸಿದ ಲಾಕ್ಡೌನ್ ನಿಂದಾಗಿ ಕಟ್ಟಡ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿಂದ ಯಾವುದೇ ಆದಾಯ ಇಲ್ಲದಿರುವುದರಿಂದ ನ್ಯಾಯಯುತ ಬೇಡಿಕೆಯಾದ ಮಾಸಿಕ 10 ಸಾವಿರ ರೂಪಾಯಿ ಪರಿಹಾರ ಧನ ನೀಡಿ.
*ಎಲ್ಲಾ ಕಟ್ಟಡ ಕಾರ್ಮಿಕರಿಗೂ ಗುಣಮಟ್ಟದ ಆಹಾರ ಪದಾರ್ಥಗಳ ಕಿಟ್ಟನ್ನು ಒದಗಿಸಿ.
*ಕಟ್ಟಡ ಕಾರ್ಮಿಕರಿಗೆ ನೀಡಲು ಉತ್ತೇಜಿಸಿರುವ ಆಹಾರಪದಾರ್ಥಗಳ ಕಿಟ್ಟು ಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿರುವ ದೂರುಗಳು ಬಂದಿರುವುದರಿಂದ ಕೂಡಲೇ ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ.
ಎಂಬ ಬೇಡಿಕೆಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಎಐಯು ಟಿಯುಸಿ ಕಾರ್ಮಿಕ ಸಂಘಟನೆಯ ಮುಖಂಡರಾದ ಏ. ದೇವದಾಸ್. ಪ್ರತಿಭಟನೆ ಉದ್ದೇಶಿಸಿ, ಮಾತನಾಡಿದರು.ಜಿ ಸುರೇಶ್. ಹಾಗೂ ಕಟ್ಟಡ ಕಾರ್ಮಿಕರಾದ ನೀಲಪ್ಪ, ಜಯರಾಜ್, ಜಗದೀಶ್, ವಿ ಜಯಕುಮಾರ್, ಚಂದ್ರಪ್ಪ, ಓಬಳೇಶ್, ಶೇಖರ್, ಮುಂತಾದವರು ಭಾಗವಹಿಸಿದ್ದರು,


ವರದಿಗಾರರು ಎಂ. ಎಲ್.ವೆಂಕಟೇಶ್ಬಳ್ಳಾರಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend