ಎಐಡಿಎಸ್ಓ ಹೋರಾಟದ ಮುಂದಿನ ಸ್ವರೂಪ ಜುಲೈ 3 ರಂದು ರಾಜ್ಯ ವ್ಯಾಪ್ತಿ ಆನ್ಲೈನ್ ತರಗತಿ ಬಹಿಷ್ಕಾರ. ಒಂದು ತಿಂಗಳಲ್ಲಿ 2 ಸೆಮಿಸ್ಟರ್ ಪರೀಕ್ಷೆ ಹೇರಬೇಡಿ, ಒಂದೇ ಪರೀಕ್ಷೆ ನಡೆಸಿ…!!!

Listen to this article

ಎಐಡಿಎಸ್ಓ ಹೋರಾಟದ ಮುಂದಿನ ಸ್ವರೂಪ ಜುಲೈ 3 ರಂದು ರಾಜ್ಯ ವ್ಯಾಪ್ತಿ ಆನ್ಲೈನ್ ತರಗತಿ ಬಹಿಷ್ಕಾರ.
ಒಂದು ತಿಂಗಳಲ್ಲಿ 2 ಸೆಮಿಸ್ಟರ್ ಪರೀಕ್ಷೆ ಹೇರಬೇಡಿ, ಒಂದೇ ಪರೀಕ್ಷೆ ನಡೆಸಿ.
ಕಳೆದ ಸುಮಾರು ಎರಡು ವಾರಗಳಿಂದ ರಾಜ್ಯದ ಪದವಿ ಸ್ನಾತಕೋತ್ತರ ಪದವಿ ಇಂಜಿನಿಯರಿಂಗ್ ಡಿಪ್ಲೊಮಾ ಹಾಗೂ ಫಾರ್ಮಸಿ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಸರ್ಕಾರಕ್ಕೆ ಹಿಂದಿನ ಸೆಮಿಸ್ಟರ್ ಪರೀಕ್ಷೆ, ರದ್ದು ಗೊಳಿಸಿ,ಎಂದು ಆಗ್ರಹಿಸಿದ್ದಾರೆ ಹಲವು ರೀತಿಯಲ್ಲಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಸರ್ಕಾರಕ್ಕೆ ತಟ್ಟುವಂತೆ ಮಾಡಲು ಪ್ರಯತ್ನ ನಡೆದಿದೆ ಆನ್ಲೈನ್ ಚಳುವಳಿ ಪ್ರಾತಿನಿಧಿಕವಾಗಿ
ಕಾಲೇಜ್,ವಿವಿಗಳ, ಮುಂದೆ ಚಳುವಳಿ, ಪ್ರಾಂಶುಪಾಲರಿಗೆ ವಿವಿಯ ಕುಲಪತಿಗಳಿಗೆ ಮನವಿ ಪತ್ರ ಸಲ್ಲಿಕೆ ಮಾನ್ಯ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಕೆ ಎಲ್ಲವೂ ಈಗಾಗಲೇ ನಡೆದಿದೆ ಆದರೆ ಸರ್ಕಾರದಿಂದ ಯಾವುದೇ ಪ್ರತ್ಯುತ್ತರ ಇಲ್ಲದ ಕಾರಣ ವಿದ್ಯಾರ್ಥಿಗಳು ಹೋರಾಟವನ್ನು ಇನ್ನೂ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಬಂದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿಗಳ ಹೋರಾಟ ಸಮಿತಿ ಮತ್ತು ಎಐಡಿಎಸ್ಒ ರಾಜ್ಯಸಮಿತಿ ಜಂಟಿಯಾಗಿ 3 ಜುಲೈ 2021 ರಂದು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ತರಗತಿ ಬಹಿ ಷ್ಕಾರಕ್ಕೆ ಕರೆ ನೀಡಿದೆ.
ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿಗಳು ಈ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.
ವಿವಿ ಮಟ್ಟದಲ್ಲಿ,ಕಾಲೇಜು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಸಭೆಗಳು ನಡೆದು ಪೂರ್ವತಯಾರಿಗೆ ಮುನ್ನುಗ್ಗಿದ್ದಾರೆ.
ಸರ್ಕಾರ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ತಕ್ಷಣ ಸ್ಪಂದಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.
**ಬೇಡಿಕೆಗಳು**
ಪದವಿ ಸ್ನಾತಕೋತ್ತರ ಪದವಿ ಎಂಜಿನಿಯರಿಂಗ್ ಡಿಪ್ಲೊಮಾ ಹಾಗೂ ಫಾರ್ಮಸಿ ವಿದ್ಯಾರ್ಥಿಗಳಿಗೆ ಹಿಂದಿನ ಸೆಮಿಸ್ಟರ್ odd semester, ಪರೀಕ್ಷೆಗಳನ್ನು ನಡೆಸಬಾರದು.
ಎಲ್ಲ ವಿದ್ಯಾರ್ಥಿಗಳಿಗೂ 2 ಡೋಸ್ ಉಚಿತ ಕರೋನ ಲಸಿಕೆ ನೀಡುವವರೆಗೂ,
ಆಫ್ಲೈನ್ ತರಗತಿ ಮತ್ತು ಪರೀಕ್ಷೆಗಳನ್ನು ನಡೆಸಬಾರದು.
ಹೇಳಿಕೆ ಇವರಿಂದ
ಗುರುರಾಜ ಜಿಲ್ಲಾ ಅಧ್ಯಕ್ಷರು ಎಐಡಿಎಸ್ಒ
ಬಳ್ಳಾರಿ
ರವಿಕಿರಣ್ ಜೆಪಿ ಜಿಲ್ಲಾ ಕಾರ್ಯದರ್ಶಿ ಎಐಡಿಎಸ್ಓ ಬಳ್ಳಾರಿ.

ವರದಿಗಾರರು ಎಂಎಲ್ ವೆಂಕಟೇಶ್ ಬಳ್ಳಾರಿ*.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend