ಈ ದೇಶಗಳಲ್ಲಿ ಹಿಜಾಬ್ ಧರಿಸುವಂತಿಲ್ಲ, ಪಾಲನೆಯನ್ನು ಮೀರಿ ಧರಿಸಿದರೆ ಬೀಳುತ್ತೆ ಜೇಬಿಗೆ ಕತ್ತರಿ…!!!

Listen to this article

ನವದೆಹಲಿ : ಹಿಜಾಬ್ ಧರಿಸುವ ಬಗ್ಗೆ ಇದೀಗ ಗಲಾಟೆ ನಡೆಯುತ್ತಿದೆ. ಈ ಬಗ್ಗೆ ರಾಜಕೀಯವಾಗಿಯೂ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಹಿಜಾಬ್ ಬಗ್ಗೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ಶುರುವಾಗಿವೆ. ಪ್ರಪಂಚದ ಕೆಲವು ದೇಶಗಳಲ್ಲಿ ಹಿಜಾಬ್ ಧರಿಸುವಂತಿಲ್ಲ, ಇಲ್ಲಿ ಹಿಜಾಬ್ ಧರಿಸಿದರೆ ದಂಡ ತೆರಬೇಕಾಗುತ್ತದೆ.

ನೆದರ್ಲ್ಯಾಂಡ್ ನಲ್ಲಿ , ಶಾಲೆಗಳು, ಆಸ್ಪತ್ರೆಗಳು, ಸಾರ್ವಜನಿಕ ಸಾರಿಗೆ ಮತ್ತು ಸರ್ಕಾರಿ ಕಟ್ಟಡಗಳಲ್ಲಿ ಹಿಜಾಬ್ ಧರಿಸುವುದು ಅಥವಾ ಮುಖವನ್ನು ಮುಚ್ಚಿಕೊಳ್ಳುವುದಕ್ಕೆ ನಿಷೇಧವಿದೆ. ಈ ನಿಷೇಧದ ಹೊರತಾಗಿಯೂ, ಯಾರಾದರೂ ಜಿಜಾಬ್ ಧರಿಸಿದರೆ ದಂಡ ಪಾವತಿಸಬೇಕಾಗಬಹುದು.

ಯುರೋಪ್‌ನಲ್ಲಿ, ಫ್ರಾನ್ಸ್ ಮೊದಲ ಬಾರಿಗೆ 2004 ರಲ್ಲಿ ಶಾಲೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಿತು. ಇದರ ನಂತರ, ಫ್ರೆಂಚ್ ಸರ್ಕಾರವು 2011 ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿಯೂ ಇದಕ್ಕೆ ನಿಷೇಧ ಹೇರಿತ್ತು.

ಡೆನ್ಮಾರ್ಕ್‌ನಲ್ಲಿ ಹಿಜಾಬ್ ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಿಜಾಬ್ ಧರಿಸುವುದು ಅಥವಾ ಮುಖವನ್ನು ಮುಚ್ಚಿಕೊಳ್ಳುವುದರ ಬಗ್ಗೆ ಇಲ್ಲಿ ಕಠಿಣ ಕಾನೂನು ಇದೆ. ಸಿಕ್ಕಿಬಿದ್ದರೆ 12 ಸಾವಿರದಿಂದ 85 ಸಾವಿರ ರೂ.ವರೆಗೆ ದಂಡ ತೆರಬೇಕಾಗಬಹುದು.

ಭಯೋತ್ಪಾದಕ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಬಲ್ಗೇರಿಯನ್ ಸರ್ಕಾರವು ದೇಶದಲ್ಲಿ ಹಿಜಾಬ್ ಧರಿಸುವುದನ್ನು ಕಾನೂನುಬಾಹಿರ ಎಂದು ನಿರ್ಧರಿಸಿದೆ. ಬಲ್ಗೇರಿಯಾದಲ್ಲಿ, ಮುಖವನ್ನು ಮುಚ್ಚಿಕೊಳ್ಳುವ ಬಗ್ಗೆಯೂ ಕಟ್ಟುನಿಟ್ಟಾದ ಕಾನೂನು ಕ್ರಮ ಜಾರಿಯಲ್ಲಿದೆ.

ಬೆಲ್ಜಿಯಂನಲ್ಲಿ ಹಿಜಾಬ್ ಧರಿಸುವುದಕ್ಕೆ ಸಂಬಂಧಿಸಿದಂತೆ ಹಲವು ನಿರ್ಬಂಧಗಳಿವೆ. ಇಲ್ಲಿ ಶಾಲೆಗಳು, ಆಸ್ಪತ್ರೆಗಳು, ಸಾರ್ವಜನಿಕ ಸಾರಿಗೆ ಮತ್ತು ಸರ್ಕಾರಿ ಕಟ್ಟಡಗಳಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂಬ ಮಾಹಿತಿ ಮಾತ್ರ ಈ ದೇಶಗಳಲ್ಲಿರುವ ನಿಯಮ..

ವರದಿ.ನ್ಯೂಸ್ ಬ್ಯುರೋ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend