ನಿಷ್ಪಕ್ಷಪಾತ, ಪಾರದರ್ಶಕ ಚುನಾವಣೆಗೆ ಮಾದರಿ ನೀತಿ ಸಂಹಿತೆ ಪಾಲಿಸಿ: ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು…!!!

Listen to this article

ನಿಷ್ಪಕ್ಷಪಾತ, ಪಾರದರ್ಶಕ ಚುನಾವಣೆಗೆ ಮಾದರಿ ನೀತಿ ಸಂಹಿತೆ ಪಾಲಿಸಿ:
ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು

ಧಾರವಾಡ: ಜಿಲ್ಲೆಯಲ್ಲಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಚುನಾವಣೆಗೆ ಜರುಗಿಸಲು ಎಲ್ಲ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ ಇಂದು ಜರುಗಿದ ನಾಮಪತ್ರ ಸಲ್ಲಿಕೆ, ಮಾದರಿ ನೀತಿ ಸಂಹಿತೆ ಚುನಾವಣಾ ಅಭ್ಯರ್ಥಿ ಖರ್ಚುವೆಚ್ಚ ಹಾಗೂ ಇನ್ನಿತರ ವಿಷಯಗಳ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಚುನಾವಣಾ ಕಾರ್ಯಗಳಿಗೆ ಸಂಬಂಧಪಟ್ಟ ವಿವಿಧ ರೀತಿಯ ಪರವಾನಿಗೆಗಳಿಗೆ ಆನ್‍ಲೈನ್ ಮೂಲಕವೇ ಸುವಿಧಾ ತಂತ್ರಾಂಶದಲ್ಲಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು ಎಂದು ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು.

ಜಿಲ್ಲಾಡಳಿತದ ಮುಖ್ಯದ್ವಾರದಲ್ಲಿ ಕೇಂದ್ರೀಕೃತ ಕಂಟ್ರೋಲ್ ರೂಂ ತೆರೆಯಲಾಗಿದ್ದು, 24×7 ಕಾರ್ಯ ನಿರ್ವಹಿಸುತ್ತದೆ. ಚುನಾವಣಾ ಸಂಬಂಧಿತ ಕಾರ್ಯಗಳಿಗೆ ನಿಯಮಾನುಸಾರ ಆನ್‍ಲೈನ್ ಪರವಾನಿಗೆಗಳನ್ನು ಸಿಂಗಲ್ ವಿಂಡೋ ಮೂಲಕ ನೀಡಲಾಗುವುದು ಎಂದು ಅವರು ಹೇಳಿದರು.

ವಿವಿಧ ದೂರುಗಳ ನಿರ್ವಹಣೆಗೆ 1950 ಸಹಾಯವಾಣಿ ಹಾಗೂ ಸಿ-ವಿಜಿಲ್ ಆಪ್ ನಿಗಾವಹಿಸಲಾಗುತ್ತದೆ. ಕಂಟ್ರೋಲ್ ರೂಂ ನಲ್ಲಿ ವಿವಿಧ ನೋಡಲ್ ಅಧಿಕಾರಿಗಳು ಹಾಗೂ ತಂಡಗಳು ಕಾರ್ಯನಿರ್ವಹಿಸುತ್ತವೆ. ರಾಜಕೀಯ ಪಕ್ಷಗಳಿಗೆ ಓಡಾಟ ಆಗದಂತೆ ಅರ್ಜಿಗಳ ತ್ವರಿತ ವಿಲೇವಾರಿಗಾಗಿ ಒಂದೆಡೆ ಎಲ್ಲ ಮಾಹಿತಿ ಲಭ್ಯವಾಗಲಿದೆ. ಮಾದರಿ ನೀತಿ ಸಂಹಿತೆ ನಿಗಾ ವಹಿಸಲು ಕೈಮಗ್ಗ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ಮೋನಾ ರಾವುತ್ ನೇತೃತ್ವದಲ್ಲಿ ಎಂ.ಸಿ.ಸಿ ತಂಡ ರಚಿಸಲಾಗಿದೆ ಎಂದು ಅವರು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇಲೆಕ್ಟ್ರಾನಿಕ್ ಪ್ರಚಾರಕ್ಕಾಗಿ ಕಡ್ಡಾಯವಾಗಿ ಮಾಧ್ಯಮ ಪ್ರಮಾಣೀಕರಣ ಪಡೆಯತಕ್ಕದ್ದು, ಪತ್ರಿಕೆಗಳಲ್ಲಿ ಪ್ರಕಟವಾಗುವ ಪೇಯ್ಡಡ್ ನ್ಯೂಸ್ ಗಳ ಮೇಲೆ ನಿಗಾವಹಿಸಲಾಗುವುದು. ಚುನಾವಣಾ ಕಾರಣಕ್ಕಾಗಿ ಪ್ರಸಾರ ಮಾಡಲು ಸಿದ್ಧಪಡಿಸಿದ ಜಾಹೀರಾತು ಪ್ರಸಾರಕ್ಕೆ ಯೋಗ್ಯವೇ ಅಥವಾ ಇಲ್ಲವೇ ಎಂದು ಎಂ.ಸಿ.ಎಂ.ಸಿ ತಂಡ ಪರಿಶೀಲನೆ ಮಾಡುತ್ತದೆ ಎಂದು ಚುನಾವಣಾಧಿಕಾರಿ ತಿಳಿಸಿದರು.

ಪ್ರಚಾರದ ಕರಪತ್ರದಲ್ಲಿ ಕಡ್ಡಾಯವಾಗಿ ಪ್ರಿಂಟರ್ ಹೆಸರು, ವಿಳಾಸ ಹಾಗೂ ಸಂಖ್ಯೆ ನಮೂದಿಸತಕ್ಕದ್ದು, ಚುನಾವಣಾ ಅಕ್ರಮ ತಡೆಯಲು ತೀವ್ರ ನಿಗಾವಹಿಸಲು 24 ಚೆಕ್ ಪೋಸ್ಟ್ ಗಳನ್ನೂ ತೆರೆಯಲಾಗಿದೆ ಎಂದರು.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸಿದ್ದು ಹುಳ್ಳೊಳ್ಳಿ ಅವರು ಚುನಾವಣಾ ವೇಳಾಪಟಿ,್ಟ ಮತದಾರರ ಸಂಖ್ಯೆ, ಎಂಟು ವಿಧಾನ ಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಬಗ್ಗೆ, ನಾಮಪತ್ರ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಾಗೂ ಮಾದರಿ ನೀತಿ ಸಂಹಿತೆ ಬಗ್ಗೆ ವಿವರಿಸಿದರು. ಚುನಾವಣಾ ಖರ್ಚವೆಚ್ಚದ ಬಗ್ಗೆ ಮಹಾನಗರ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಅವರು ಮಾಹಿತಿ ನೀಡಿದರು.

ಅವಳಿನಗರದ ಪೋಲೀಸ್ ಆಯುಕ್ತೆ ರೇಣುಕಾ ಸುಕುಮಾರನ್ ಮಾತನಾಡಿ, ಜಿಲ್ಲೆಯಲ್ಲಿ ಸಮಾಜಘಾತುಕ ಹಾಗೂ ಧಕ್ಕೆ ತರುವಂತಹ ರೌಡಿ ಶೀಟರ್ ಗಳ ಮೇಲೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, 8 ಜನರನ್ನು ಗಡಿಪಾರು ಮಾಡಲಾಗಿದೆ. ಆಯುಧ ಕಾಯ್ದೆಯಡಿ ವಿವಿಧ ರೀತಿಯಲ್ಲಿ ನಿಗಾ ವಹಿಸಲಾಗುತ್ತಿದೆ. ಯಾರು ಸಹ ಬಹಿರಂಗವಾಗಿ ಯಾವುದೇ ಆಯುಧವನ್ನು ಪ್ರದರ್ಶನ ಮಾಡತಕಾದಲ್ಲ ಎಂದರು. ರಾತ್ರಿ 10 ಗಂಟೆ ಬಳಿಕ ಪ್ರಚಾರ ಮಾಡತಕ್ಕದಲ್ಲ. ಪ್ರಚಾರಕ್ಕೆ ಡ್ರೋನ್ ಬಳಕೆಯಾಗುವ ಮುಂಚೆ ಕಡ್ಡಾಯವಾಗಿ ಪರವಾನಿಗೆ ಪಡೆಯತಕ್ಕದ್ದು ಎಂದು ಪೋಲಿಸ್ ಆಯುಕ್ತೆ ತಿಳಿಸಿದರು.

ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ. ಜಿಲ್ಲಾ ಪೋಲಿಸ್ ವರಿಷ್ಟಧಿಕಾರಿ ಡಾ. ಗೋಪಾಲ ಬ್ಯಾಕೊಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪೋಲಿಸ್ ಉಪ ಆಯುಕ್ತರಾದ ರಾಜೀವ ವೇದಿಕೆಯಲ್ಲಿದ್ದರು.

ವಿವಿಧ ತಂಡಗಳ ನೋಡಲ್ ಅಧಿಕಾರಿಗಳಾದ ಸಿದ್ದಲಿಂಗಯ್ಯ ಹಿರೇಮಠ, ದೇವರಾಜ, ರುದ್ರೇಶ ಗಾಳಿ ಶಾಲಮ ಹುಸೇನ್, ವಿನೋದ ಹೆಗ್ಗಳಗಿ, ಅಜೀಜ ದೇಸಾಯಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು….

ವರದಿ. ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend