ಚಿತ್ರದುರ್ಗ 10ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ, ಶಾಸಕ ತಿಪ್ಪಾರೆಡ್ಡಿ…!!!

Listen to this article

ಚಿತ್ರದುರ್ಗ: ಕುಡಿಯುವ ನೀರು ಮತ್ತು ತಾಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಕನಸಿನ ಯೋಜನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ತಿಳಿಸಿದರು. ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ,ಕೈಬಿಟ್ಟು ಹೋಗಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 10 ಕೆರೆಗಳನ್ನು ಸೇರ್ಪಡೆ ಮಾಡುವ ಮೂಲಕ, ಕೆರೆ ತುಂಬಿಸುವ ಯೋಜನೆಯ ರೈತರ ಕನಸನ್ನು ನನಸು ಮಾಡಿದ್ದಾರೆ ಎಂದರು. ಅತಿ ಹಿಂದುಳಿದ ಜನಸಂಖ್ಯೆಯಿರುವ ಕೆರೆಯ ಸುತ್ತಮುತ್ತಲಿನ ಸಾವಿರಾರು ಪ್ರದೇಶದಕ್ಕೆ ಇದರಿಂದ ನೀರಿನ ಅನುಕೂಲವಾಗಲಿದೆ. ಚಿತ್ರದುರ್ಗದ ಮುರುಘಾಮಠದ ಹಿಂಭಾಗದ ಹಾಗೂ ಮುಂದಿನ ಕೆರೆ, ಸಿದ್ದಾಪುರ, ಕುರುಮರಡಿಕೆರೆ, ಹುಲ್ಲೂರು, ಅನ್ನೇಹಾಳ್, ನಂದಿಪುರ, ಚಿಕ್ಕ ಸಿದ್ದವನಹಳ್ಳಿ ಸೇರಿದಂತೆ ಒಟ್ಟು ಹತ್ತು ಕೆರೆಗಳಿಗೆ 0.1 ಟಿಎಂಸಿ ಮೂಲಕ, ಕೆರೆ ತುಂಬಿಸಲಾಗುತ್ತದೆ ಎಂದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮನವಿ ಮಾಡಿದ್ದೆವು. ಆದರೆ,ಮುಖ್ಯಮಂತ್ರಿ ಬದಲಾದ ಹಿನ್ನೆಲೆಯಲ್ಲಿ, ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದಾಗ, ನಮ್ಮ ಮನವಿಗೆ ಸ್ಪಂದಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ, ಅಧಿಕಾರಿ ರಾಕೇಶ್ ಸಿಂಗ್ ಆದೇಶ ಮಾಡಿ ಕಳಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಚಿತ್ರದುರ್ಗದ ಸಭಾ ಕ್ಷೇತ್ರದ 173 ಹಳ್ಳಿಗಳಲ್ಲಿ ವಿವಿ ಸಾಗರದಿಂದ 0.36 ಟಿಎಂಸಿ ನೀರಲ್ಲಿ ಹೆಚ್ಚಿನ ನೀರು ಕುಡಿಯುವ ಯೋಜನೆಯ ಮೂಲಕ, ಪ್ರತಿ ಹಳ್ಳಿಗೆ ಜನಜೀವನ ಮಿಷನ್ ಯೋಜನೆ ಮೂಲಕ ಒದಗಿಸಲಾಗುವುದು. ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕಾರಣಕ್ಕೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರದ ಬಹುತೇಕ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದಂತಾಗುತ್ತದೆ ಎಂದು ಹೇಳಿದರು.ಇದೇ ವೇಳೆ ಭದ್ರಾ ಮೇಲ್ದಂಡೆ ಯೋಜನೆ ಇಂಜಿನಿಯರ್ ಶ್ರೀಧರ್, ಕುಡಿಯುವ ನೀರು ಸರಬರಾಜು ಇಲಾಖೆ ಇಂಜಿನಿಯರ್ ಹಾಗೂ ರೈತರು ಸೇರಿದಂತೆ ಇತರರು ಇದ್ದರು…

ವರದಿ.ಸುರೇಶ್, ಹೊಳಲ್ಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend