ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ವಿ.ನುಂಕಪ್ಪ ಭಾಷಣ ಸ್ಪರ್ಧೆ: ವಿಷಯಾಂತರ ಬೇಡ…!!!

Listen to this article

ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ವಿ.ನುಂಕಪ್ಪ
ಭಾಷಣ ಸ್ಪರ್ಧೆ: ವಿಷಯಾಂತರ ಬೇಡ

ಚಿತ್ರದುರ್ಗ,
ಭಾಷಣ ವಿಷಯದ ವರ್ತುಲದ ಒಳಗೆ ಇರಬೇಕು. ವಿಷಯಾಂತರ ಮಾಡಬಾರದು. ವಿಷಯದ ಸಂಘಟನೆ, ವಿಷಯವನ್ನು ಹೇಗೆ ಪೋಣಿಸುತ್ತಿರಾ ಎಂಬುದು ಬಹಳ ಮುಖ್ಯ ಎಂದು ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ವಿ.ನುಂಕಪ್ಪ ಹೇಳಿದರು.
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಸಮೀಪದ ಕ್ರೀಡಾ ಸಭಾಂಗಣದಲ್ಲಿ ಗುರುವಾರ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರದ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದ ಕುರಿತು ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ವಿಷಯದ ಕುರಿತು ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಭಕ್ತಿ, ರಾಷ್ಟ್ರಪ್ರೇಮವನ್ನು ಮುಂದಿಟ್ಟುಕೊಂಡು ನಿಮ್ಮ ಅತ್ಯುತ್ತಮ ಮಟ್ಟದ ಭಾಷಾ ಶೈಲಿಯಲ್ಲಿ, ಧ್ವನಿ ಏರಿಳಿತದ ಆಧಾರದಲ್ಲಿ ನಿಮ್ಮ ದೇಹಭಾಷೆ, ಚಹರೆ, ಕಣ್ಣಿನ ನೋಟವನ್ನು ತೀರ್ಪುಗಾರರು ಗಮನಿಸುತ್ತಾರೆ ಎಂದು ಹೇಳಿದರು.


ಭಾಷಣಸ್ಪರ್ಧೆ ಎನ್ನುವುದು ತುಂಬಾ ಪ್ರಾಚೀನವಾದದು. ಸುಮಾರು ಸಾವಿರ ವರ್ಷಗಳ ಇತಿಹಾಸವಿದೆ. ಗ್ರೀಕರಲ್ಲಿ ರಿಟಾರಿಕ್ಸ್ ಎನ್ನುವ ವಿಷಯ ಬರುತ್ತದೆ. ಈ ಭಾಷಣ ಕಲೆಯು ಗ್ರೀಕ್, ಇಂಡಿಯಾ, ಚೀನಾದಲ್ಲಿ ಭಾಷಣ ಕಲೆ ಅತ್ಯುತ್ತಮವಾಗಿ ಬೆಳೆದುಬಂದಿರುವುದನ್ನು ನೋಡುತ್ತಾ ಹೋಗುತ್ತೇವೆ ಎಂದು ಹೇಳಿದರು.
ಚಿಕಾಗೋಗೆ ಹೋದದಂತಹ ನಮ್ಮ ರಾಷ್ಟ್ರದ ಮಹಾನ್ ಸಂತರಾದ ಸ್ವಾಮಿ ವಿವೇಕಾನಂದ ಅತ್ಯುತ್ತಮವಾದ ಭಾಷಣಕಾರರು. ನೆಲ್ಸನ್ ಮಂಡೇಲಾ, ಬರಾಕ ಹುಸೇನ ಒಬಾಮ, ಅಟಾಲ್ ಬಿಹಾರಿ ವಾಜಪೇಯಿ, ಜೆ.ಹೆಚ್.ಪಟೇಲ್ ಎಲ್ಲರೂ ಅತ್ಯುತ್ತಮ ಭಾಷಣಕಾರರು. ನೀವುಗಳು ಇದೇ ರೀತಿಯಾಗಿ ನಿಮ್ಮ ವಿಷಯವನ್ನು ಕುರಿತು ಅತ್ಯುತ್ತಮವಾದ ಭಾಷಣ ಮಾಡುವ ಸಂಕಲ್ಪ ಮಾಡಿ. ನಿಮ್ಮಗಳ ಭಾಷಣದಲ್ಲಿ ಅಲ್ಲಲ್ಲಿ ಪ್ರೇಕ್ಷಕರ, ವೀಕ್ಷಕರ ಗಮನಕ್ಕೆ ಚ್ಯುತಿಬಾರದೇ ಹಾಗೆ ವ್ಯವಸ್ಥಿತವಾಗಿ ಭಾಷಣದ ಸೌಂದರ್ಯವನ್ನು ಕಟ್ಟಿಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾಮಟ್ಟದ ಭಾಷಣಸ್ಪರ್ಧೆ: ಅಜಿಮ್ ಅಲಿ ಪ್ರಥಮ: ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದ ಕುರಿತು ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಕುರಿತ  ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ನಗರದ ಎಸ್‍ಆರ್‍ಎಸ್ ಕಾಲೇಜಿನ ವಿದ್ಯಾರ್ಥಿ ಅಜಿಮ್ ಅಲಿ ಪ್ರಥಮ ಸ್ಥಾನ ಗಳಿಸಿದರು.
ಚಳ್ಳಕೆರೆಯ ಎಚ್‍ಪಿಸಿಸಿ ಪ್ರಥಮದರ್ಜೆ ಕಾಲೇಜಿನ ಶಾಂಭವಿ ಯೂ ದ್ವಿತೀಯ ಸ್ಥಾನ ಹಾಗೂ ಚಿತ್ರದುರ್ಗದ ಉಲ್ಲಾಸ ಕೆ.ಬಿ ಇವರು ತೃತೀಯ ಸ್ಥಾನಪಡೆದುಕೊಂಡರು. ಪ್ರಥಮ ಸ್ಥಾನ ಪಡೆದವರಿಗೆ ರೂ.5000/-, ದ್ವಿತೀಯ ಸ್ಥಾನ ಪಡೆದವರಿಗೆ ರೂ.2000/- ಹಾಗೂ ತೃತೀಯ ಸ್ಥಾನ ಪಡೆದವರಿಗೆ ರೂ.1000/- ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಎನ್.ಸುಹಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಬಾಯಿ, ಸರಸ್ವತಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಡಿ.ಗೌಡ, ಸರ್ಕಾರಿ ಕಲಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಆರ್.ಗಂಗಾಧರ್, ಸರ್ಕಾರಿ ವಿಜ್ಞಾನ ಕಾಲೇಜು ಸಹಾಯಕ ಪ್ರಾಧ್ಯಾಪಕ ಪ್ರೊ.ಎಂ.ವಿ.ನಾಗರಾಜ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎನ್.ಮಜಹರ್ ಉಲ್ಲಾ, ಡಾ.ಬಿ.ಆರ್.ಅಂಬೇಡ್ಕರ್ ಆಶಯ ಭಾರತ್ ಪೌಂಡೇಷನ್ ಅಧ್ಯಕ್ಷ ವೆಂಕಟೇಶ್, ರಾಷ್ಟ್ರೀಯ ಸ್ವಯಂ ಸೇವಕ ಜಿ.ಪಿ.ಭರತ್ ಇದ್ದರು..

ವರದಿ. ಗಿರೀಜಾ ಬೆಳ್ಳಕಟ್ಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend