ತಾಲ್ಲೂಕು ಪಂಚಾಯತ್, ಚಳ್ಳಕೆರೆರವರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರು ನಿರ್ವಹಣೆ ಕುರಿತಾದ ತುರ್ತು ಸಭೆ…!!!

Listen to this article

ದಿನಾಂಕ 27.03.2024 ರಂದು ಬೆಳಗ್ಗೆ 10:30 ಕ್ಕೆ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು,
ತಾಲ್ಲೂಕು ಪಂಚಾಯತ್, ಚಳ್ಳಕೆರೆರವರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರು ನಿರ್ವಹಣೆ ಕುರಿತಾದ ತುರ್ತು ಸಭೆ ಏರ್ಪಡಿಸಲಾಗಿತ್ತು.

ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು-ನೈರ್ಮಲ್ಯ ಇಲಾಖೆ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಬೆಸ್ಕಾಂ ಹಾಗೂ ತಾಲ್ಲೂಕಿನ 40 ಗ್ರಾ.ಪಂ ಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

ಒಟ್ಟು ಏಳು ಗ್ರಾಮಗಳಲ್ಲಿ ಖಾಸಗಿ ಜಮೀನಿನಿಂದ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರನ್ನು ಪೂರೈಸಲಾಗುತ್ತಿದೆ.

ವಿವಿಧ ಗ್ರಾಮಗಳಲ್ಲಿ ಒಟ್ಟು 6500 ಮೀಟರ್ ಹೊಸ ಪೈಪ್ ಲೈನ್ ನಿರ್ಮಿಸುವ ಅಗತ್ಯವಿದೆಯೆಂದು ಪಂ.ಅ.ಅಧಿಕಾರಿಗಳು ಮಾಹಿತಿ ನೀಡಿದರು.

ಒಟ್ಟು 21 ರೀಬೋರ್ ಮಾಡಿಸುವ ಅಗತ್ಯವಿದೆಯೆಂದು ಪಂ.ಅ.ಅಧಿಕಾರಿಗಳು ಮಾಹಿತಿ ನೀಡಿದಾಗ, ಸದರಿ ಬೋರ್ ವೆಲ್ ಗಳನ್ನು ರೀ ಬೋರ್ ಮಾಡುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು-ನೈರ್ಮಲ್ಯ ಇಲಾಖೆರವರಿಗೆ ಸೂಚಿಸಲಾಯಿತು.

ಕೂಲಿಕಾರರು ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದಲ್ಲಿ ತಕ್ಷಣ ಕೆಲಸ ನೀಡಬೇಕೆಂದು ಪಂ.ಅ.ಅಧಿಕಾರಿಗಳಿಗೆ ಸೂಚಿಸಲಾಯಿತು….

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend